Advertisement

ರೋಟರಿಯಿಂದ ಚೆಕ್‌ ಡ್ಯಾಂ ಲೋಕಾರ್ಪಣೆ

01:35 PM Dec 20, 2021 | Team Udayavani |

ಪಾವಗಡ: ಬರದ ನಾಡು ಪಾವಗಡ ತಾಲೂಕನ್ನು ಮಲೆನಾಡಿನಂತೆ ಸಸ್ಯ ಶ್ಯಾಮಲವಾಗಿ ಕಾಣಬೇಕೆನ್ನುವುದೇ ರೋಟರಿ ಸಂಸ್ಥೆ ಆಶಯ ಎಂದು ರೋಟರಿ ಡಿಸ್ಟಿಕ್‌ ಗವರ್ನರ್‌ ರೊ. ಫಜಲ್‌ ಮಹಮದ್‌ ತಿಳಿಸಿದರು.

Advertisement

ತಾಲೂಕು ಕೃಷ್ಣಗಿರಿ ಪಕ್ಕದಲ್ಲಿರುವ ಜೂಲಯ್ಯನ ಹಟ್ಟಿ ಗ್ರಾಮದ ಬಳಿ 2, ಕೊತ್ತೂರಿನ ಬಳಿ 1 ಚೆಕ್‌ ಡ್ಯಾಂಗಳನ್ನು ರೋಟರಿ ಸಂಸ್ಥೆವತಿಯಿಂದ ನಿರ್ಮಿಸಿದ್ದು, ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ತಾಲೂಕಿನಲ್ಲಿಮಳೆ ಬರುವುದು ತುಂಬಾ ಕಡಿಮೆ. ಬರುವಮಳೆಯ ನೀರನ್ನು ಶೇಖರಿಸಲು ಆಗದೇ ಅಂತರ್ಜಲಮಟ್ಟ ಕುಸಿದು ಪಲವತ್ತತೆಯಿಂದಕೂಡಿದ ಕೃಷಿಭೂಮಿ ಬರಡು ನೆಲವಾಗುತ್ತಿದೆ.ನೀರು ಹರಿಯುವ ಜಾಗದಲ್ಲಿ ಚೆಕ್‌ ಡ್ಯಾಂ ನಿರ್ಮಿಸಿದರೆ ನೀರಿನ ಸೆಲೆ ಹೆಚ್ಚಾಗಿ ಅಂತರ್ಜಲಹೆಚ್ಚುತ್ತದೆ. ಆದ್ದರಿಂದ ರೋಟರಿ ವತಿಯಿಂದಇಲ್ಲಿಯವರೆಗೂ 8 ಚೆಕ್‌ ಡ್ಯಾಂ ನಿರ್ಮಿಸಿದ್ದು, ಮುಂದಿನ ವರ್ಷ ಇನ್ನು 4 ಚೆಕ್‌ ಡ್ಯಾಂ ನಿರ್ಮಿಸಿ ಕೊಡಲಿದ್ದೆವೆ ಎಂದು ತಿಳಿಸಿದರು.

ಸೇವಾ ಕಾರ್ಯ ಮಾಡುತ್ತಿದೆ: ರೋಟರಿ ಸ್ಪೆಷಲ್‌ ಪ್ರಾಜಕ್ಟ್ ಡೈರಕ್ಟರ್‌ ರೋ. ಸುರೇಶ್‌ ಅಂಬಲಿ ಮಾತನಾಡಿ, ರೋಟರಿಯು ಸಮಾಜದ ಎಲ್ಲ ತರದ ಜನರಗೂ ಅನುಕೂಲವಾಗುವಂತಹ ಅನೇಕ ಸೇವಾ ಕಾರ್ಯ ಮಾಡುತ್ತಿದೆ. ಇಲ್ಲಿ ನಿರ್ಮಾಣವಾಗಿರುವಚೆಕ್‌ ಡ್ಯಾಂನಿಂದ ಸಾವಿರಾರು ರೈತರಕೊಳವೆಬಾವಿಗಳಲ್ಲಿ ನೀರಿನ ಹರಿವು ಹೆಚ್ಚಾಗಿ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಸದಾಶಿವ ನಗರದ ರೋಟರಿಅಧ್ಯಕ್ಷ ನರ್ಮದಾ ನಾರಾಯಣ, ವಸಂತ್‌ಚಂದ್ರ, ಕೇಶವ್‌, ಶ್ರೀನಿವಾಸ್‌, ಶಶಿಕಾಂತ್‌, ಮಹಮ್ಮದ್‌ ಇಮ್ರಾನ್‌, ಜಿ. ಶ್ರೀಧರ ಗುಪ್ತ,ಮಾಜಿ ಅಧ್ಯಕ್ಷ ಪ್ರಭಾಕರ್‌, ವಿಶ್ವನಾಥ್‌,ಕಮಲ್‌ಬಾಬು, ಲೋಕೇಶ್‌, ಪುರುಷೋತ್ತಮ ರೆಡ್ಡಿ, ಕಸಾಪ ತಾಲೂಕು ಅಧ್ಯಕ್ಷಕಟ್ಟಾ ನರಸಿಂಹಮೂರ್ತಿ, ಗುತ್ತಿಗೆದಾರವೆಂಕಟಾಚಲಪತಿ, ಜಯರಾಮಯ್ಯ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next