ಚನ್ನರಾಯಪಟ್ಟಣ: ಕಳೆದ 15 ದಿನದಿಂದ ನಿರಂ ತರವಾಗಿ ಸುರಿಯುತ್ತಿರುವ ಮಳೆ ಕೃಷಿಕರಲ್ಲಿ ಒಂದಷ್ಟು ಭರವಸೆ ಮೂಡಿಸಿದ್ದು ಹಲವು ವರ್ಷದಿಂದ ಪಾಳು ಗುಂಡಿಗಳಾಗಿದ್ದ ಚೆಕ್ ಡ್ಯಾಂ, ಕೃಷಿ ಹೊಂಡಗಳಲ್ಲಿ ನೀರು ತುಂಬಿ ತುಳುಕುತ್ತಿದೆ.
ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣ ವಾಗಿರುವ ಚೆಕ್‌ಡ್ಯಾಂ ಮತ್ತು ಕೃಷಿಹೊಂಡಗಳಿಂದ ಅಂತರ್ಜಲ ವೃದ್ಧಿ, ರಾಸುಗಳಿಗೆ, ಪ್ರಾಣಿ, ಪಕ್ಷಿಗಳಿಗೆ ನೆರವಾಗುತ್ತಿದೆ. ಒಂದೆರಡು ದಶಕದಿಂದ ಹಳ್ಳ ಕೊಳ್ಳಗಳಲ್ಲಿ ನೀರಿಲ್ಲದೆ ಇದ್ದರಿಂದ ಪರಿಸರದಲ್ಲಿನ ಪ್ರಾಣಿ ಪಕ್ಷಿಗಳು ನಾಲೆ ಪ್ರದೇಶ ಹಾಗೂ ನದಿ ತೀರವನ್ನು ಅವಲಂಬಿಸಿದ್ದವು. ಆದರೆ, ಈಗ ಮಳೆ ನಿರಂತವಾಗಿ ಸುರಿಯುತ್ತಿದ್ದು ತಾಲೂಕಿನ ಹಲವು ಗ್ರಾಮಗಳಲ್ಲಿ ಕಟ್ಟೆ, ಚೆಕ್‌ಡ್ಯಾಂ, ಕೃಷಿ ಹೊಂಡಗಳು ಸಂಪೂರ್ಣ ಜಲಾವೃತವಾಗಿವೆ.
ಪಕ್ಷಿಗಳ ದಾಹ ತೀರುತ್ತಿದೆ: ತಾಲೂಕಿನ ರೈತರು ಕೋವಿಡ್ ವೇಳೆಯಲ್ಲಿ ತಮ್ಮ ಕೃಷಿ ಭೂಮಿಯಲ್ಲಿ ಗ್ರಾಪಂ ಉದ್ಯೋಗ ಖಾತ್ರಿ, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆ ಮೂಲಕ ಕೃಷಿ ಹೊಂಡ ನಿರ್ಮಿ ಸಿದ್ದರು. ದಶಕದಿಂದ ಕೃಷಿ ಹೊಂಡಗಳಲ್ಲಿ ಗಿಡಗಳುಬೆಳೆದು ಮುಚ್ಚುಕೊಳ್ಳುವ ಹಂತಕ್ಕೆ ತಲುಪುತ್ತಿದ್ದವು.
ಕೋವಿಡ್ ವೇಳೆ ಕಾಮಗಾರಿ: ಕೋವಿಡ್ ವೇಳೆ ದೇಶ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿತ್ತು. ಈ ವೇಳೆ ಉದ್ಯೋಗ ಖಾತ್ರಿ ಯೋಜನೆ ಮೂಲಕ ರೈತರಿಗೆ ಆರ್ಥಿಕವಾಗಿ ಸಹಾಯ ನೀಡಲು ಮುಂದಾಗಿದ್ದು ಕೃಷಿ ಹೊಂಡ, ಚೆಕ್‌ಡ್ಯಾಂ, ಹೊಲ ಹಾಗೂ ತೋಟಗಳಿಗೆ ಬದು ನಿರ್ಮಾಣ ಮಾಡಲಾಗಿತ್ತು. ಈ ವೇಳೆಹೊಲಗದ್ದೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಂಡಿದ್ದ ಫಲವಾಗಿ ಹೊಂಡಗಳು ಜಲಾವೃತಗೊಂಡಿವೆ.
ಕೂಲಿಗಾಗಿ ನಿರ್ಮಾಣ: ಹಲವು ರೈತರ ಮಕ್ಕಳುನಗರ ಪ್ರದೇಶದಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದರು.ಕೋವಿಡ್ ವೇಳೆ ಎಲ್ಲರೂ ಸ್ವಗ್ರಾಮ ಸೇರಿದರು. ಈ ವೇಳೆ ರೈತ ಕುಟುಂಬಕ್ಕೆ ಅರ್ಥಿಕವಾಗಿ ಹಿನ್ನಡೆಯಾಯಿತು. ದಿಕ್ಕು ತೋಚದ ವೇಳೆ ನರೇಗಾ ಯೋಜನೆಗೆ ಕೇಂದ್ರದ ಮೋದಿ ಹಾಗೂ ರಾಜ್ಯದಯಡಿಯೂರಪ್ಪ ಸರ್ಕಾರ ಸುತ್ತೋಲೆ ಕಳುಹಿಸಿ ಗುರಿಸಾಧನೆಗೆ ಸಮಯ ನಿಗದಿ ಮಾಡಿತ್ತು. ಈ ವೇಳೆ ರೈತರು ತಮ್ಮದೇ ಕೃಷಿ ಭೂಮಿಯಲ್ಲಿ ಕೃಷಿ ಹೊಂಡನಿರ್ಮಿಸಿದ್ದರು. ಗ್ರಾಮದ ಹಳ್ಳಗಳಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡುವ ಕೂಲಿ ಕೆಲಸದಲ್ಲಿ ತೊಡಗಿ ಬಂದ ಹಣದಲ್ಲಿ ಜೀವನ ನಿರ್ವಹಣೆ ಮಾಡಿದ್ದರು. ಮರಳುಗಾಡಿನ ಓಯಸಸ್: ತಾಲೂಕಿನ ಹಲವು ಗ್ರಾಮದಲ್ಲಿ ರಾಸುಗಳಿಗೆ ನೀರುಣಿಸಲು ತೊಂದರೆ ಅನುಭವಿಸುತ್ತಿದ್ದ ರೈತರ ಪಾಲಿಗೆ ಕೃಷಿ ಹೊಂಡ ಹಾಗೂ ಚೆಕ್ ಡ್ಯಾಂಗಳೀಗ ಮರಳುಗಾಡಿನ ಓಯಸಿಸ್‌ನಂತಾಗಿದ್ದು ಕೃಷಿ ಹೊಂಡಗಳು ರೈತರ ಸಾಕು ಪ್ರಾಣಿಗಳಿಗೆ ಜೀವಜಲ ನೀಡುತ್ತಿವೆ.
ಅಂತರ್ಜಲ ವೃದ್ಧಿ: ಕೃಷಿ ಹೊಂಡಗಳಿಂದ ಭೂಮಿಯಲ್ಲಿ ನೀರು ಇಂಗಿದರೆ ತೆಂಗಿನ ಮರಕ್ಕೆ ಸಹಾಯ ವಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಉತ್ತಮ ಫಸಲು ನಿರೀಕ್ಷೆಯಲ್ಲಿದ್ದಾರೆ.
ಕೋವಿಡ್ ವೇಳೆ ಸರ್ಕಾರಉದ್ಯೋಗ ಖಾತ್ರಿ ಯೋಜನೆ ಯಲ್ಲಿಕೃಷಿ ಹೊಂಡ ನಿರ್ಮಿಸುವಂತೆ ಆದೇಶಿಸಿತ್ತು. ಪ್ರತಿ ಗ್ರಾಪಂ ಪಿಡಿಒಗಳಿಗೆ ಗುರಿ ನಿಗದಿ ಮಾಡಿ ದ್ದ ರಿಂದ 700 ಹೆಚ್ಚುಕೃಷಿ ಹೊಂಡ ತಾಲೂ ಕಿನಲ್ಲಿ ನಿರ್ಮಾಣವಾಗಿವೆ. ಕೃಷಿ ಹೊಂಡದ ಲಾಭ ಏನೆಂಬುದು ಈಗ ತಿಳಿಯುತ್ತಿದೆ.
– ಸುನೀಲ್, ತಾಪಂ ಇಒ
ಕೃಷಿ ಹೊಂಡಗಳಿಗೆ ಹಣ ವ್ಯಯಿಸುವುದಕ್ಕಿಂತ ಹಳ್ಳಕೊಳ್ಳಗಳು, ಕೆರೆಕಟ್ಟೆಗಳಲ್ಲಿ ನೀರು ಸಂಗ್ರಹವಾಗುವಕೆಲಸವನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಾಗಿದೆ. ಗ್ರಾಮದ ಗೋಕಟ್ಟೆಗೆ ನೀರು ಬಂದಿದ್ದು ಸುತ್ತಲಿನ 60ಕ್ಕೂ ಹೆಚ್ಚು ಬಾವಿಗಳಲ್ಲಿ ಅಂತರ್ಜಲ ವೃದ್ಧಿ ಸಿದೆ
. –ಎ.ಎನ್.ಜಯರಾಮ್, ಅಣ್ಣೇನಹಳ್ಳಿ ಗ್ರಾಮದ ಕೃಷಿಕ
-ಶಾಮಸುಂದರ್ ಕೆ.ಅಣ್ಣೇನಹಳ್ಳಿ