Advertisement
ಕರ್ನಾಟಕ ಸರ್ಕಾರದಿಂದ ಜಿಲ್ಲಾ ಪಂಚಾಯತ್ ಮುಖಾಂತರ ಪ್ರತಿ ಪಂಚಾಯತ್ ಮಟ್ಟದಲ್ಲಿನ ಹಳ್ಳ ಕೊಳ್ಳಗಳಿಗೆ ನಿರ್ಮಿಸುತ್ತಿರುವ ಆರ್ಚ್ ಚೆಕ್ ಡ್ಯಾಂಗಳು ಇತ್ತೀಚೆಗೆ ಸುರಿದ ಮಳೆಗೆ ತುಂಬಿವೆ. ರೈತರು ಇಲ್ಲಿ ಸಂಗ್ರಹವಾಗಿರುವ ನೀರನ್ನು ತಮ್ಮ ಹೊಲಗಳಲ್ಲಿ ಬಾಡುತ್ತಿರುವ ಬೆಳೆಗಳಿಗೆ ಹಾಯಿಸುವ ಮೂಲಕ ಇದರ ಲಾಭ ಪಡೆಯುತ್ತಿದ್ದಾರೆ. ಅಳಿದುಳಿದ ಬೆಳೆಗಳ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ.
2017-18ನೇ ಸಾಲಿನಲ್ಲಿ ತಾಲೂಕಿನಲ್ಲಿ ಒಟ್ಟು 216 ಚೆಕ್ ಡ್ಯಾಂಗಳು ಅನುಮೋದನೆಯಾಗಿ ಬಂದಿದ್ದು, ಅದರಲ್ಲಿ ಈಗಾಗಲೇ 80 ಕಾಮಗಾರಿ ಮುಕ್ತಾಯವಾಗಿವೆ. ಇನ್ನು 41 ಪ್ರಗತಿಯಲ್ಲಿವೆ. 89 ಕಾಮಗಾರಿ ಪ್ರಾರಂಭಿಸಬೇಕಾಗಿದೆ. ತಕರಾರಿನಿಂದ ಐದು ಅರ್ಧಕ್ಕೆ ನಿಂತಿವೆ. ಈಗಾಗಲೇ ತಾಲೂಕಿನಾದ್ಯಂತ ನಿರ್ಮಿಸಿರುವ ಚೆಕ್ ಡ್ಯಾಂಗಳಲ್ಲಿ ಯಾವ ಯಾವ ಪ್ರದೇಶಗಳಲ್ಲಿ ಸರಿಯಾಗಿ ಮಳೆಯಾಗಿ ಹಳ್ಳಕೊಳ್ಳ ತುಂಬಿ ಹರಿದಿವೆ. ಅಲ್ಲಿ ನೀರು ಸಂಪೂರ್ಣವಾಗಿ ತುಂಬಿವೆ ಎಂದು ಜಿಲ್ಲಾ ಪಂಚಾಯತ್ ರೋಣ ಉಪ ವಿಭಾಗದ ಮುಖ್ಯ ಅಭಿಯಂತರ ಎಸ್.ಎಸ್. ಕರಮಳ್ಳಿ ತಿಳಿಸಿದ್ದಾರೆ.
Related Articles
ತಾಲೂಕಿನಲ್ಲಿ ಹಿಂಗಾರು ಬೆಳೆಯಾಗಿ ಜೋಳ, ಕಡಲೆ, ಸೂರ್ಯಕಾಂತಿ, ಗೋಧಿ, ಕುಸುಬಿ ಇನ್ನಿತರ ಬೆಳೆ ಬೆಳೆಯಲಾಗಿದೆ. ಸುಮಾರು 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ, 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳ, 5ರಿಂದ 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ, ಸುಮಾರು ಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗೋಧಿ, ಕುಸುಬಿ ಇತ್ಯಾದಿಗಳನ್ನು ಬೆಳೆಯಲಾಗಿದೆ.
Advertisement
ಸರ್ಕಾರ ರೈತರಿಗಾಗಿ ಅನೇಕ ಯೋಜನೆ ಜಾರಿಗೆ ತಂದಿದೆ. ಆದರೆ ರೈತರು ಅವುಗಳನ್ನು ದುರುಪಯೋಗ ಮಾಡಿಕೊಳ್ಳದೆ ಸರಿಯಾಗಿ ಬಳಸಿಕೊಂಡರೆ ರೈತರು ಬರಗಾಲವನ್ನು ಸಹಜವಾಗಿ ಎದುರಿಸಬಹುದು. ಕೃಷಿ ಹೊಂಡಗಳಿರಲಿ, ಚೆಕ್ ಡ್ಯಾಂಗಳಿರಲಿ ಇವುಗಳ ಉದ್ದೇಶ ಜಲ ಸಂಪತ್ತನ್ನು ಸಂಗ್ರಹ ಮಾಡುವುದು. ಆದ್ದರಿಂದ ಇವುಗಳನ್ನು ನಿರ್ಮಿಸಿಕೊಳ್ಳುವುದರಿಂದ ಒಂದು ಜಲ ಸಂಪತ್ತನ್ನು ರಕ್ಷಣೆ ಮಾಡಿದಂತಾಗುತ್ತದೆ. ಇನ್ನೊಂದು ರೈತರಿಗೆ ಮಳೆ ಕೈಕೊಟ್ಟಾಗ ನೀರನ್ನು ಬೆಳೆಗಳಿಗೆ ಬಳಸಿಕೊಂಡತ್ತಾಗುತ್ತದೆ. ಆದ್ದರಿಂದ ರೈತರು ಇಂತಹ ಯೋಜನೆಗಳಿಗೆ ಒತ್ತನ್ನು ನೀಡಬೇಕು.ಶರಣಪ್ಪ ಹದ್ಲಿ, ರಾಜ್ಯ ಕೃಷಿ ಪ್ರಶಸ್ತಿ ಪುರಸ್ಕೃತ ಯಚ್ಚರಗೌಡ ಗೋವಿಂದಗೌಡ್ರ