Advertisement

ಕುಲಪತಿಗೆ ವಂಚನೆ

12:03 PM Jul 25, 2018 | Team Udayavani |

ಬೆಂಗಳೂರು: ಎಟಿಎಂ ಕಾರ್ಡ್‌ ಅವಧಿ ಮುಕ್ತಾಯವಾಗಿದೆ ಎಂದು ನಂಬಿಸಿ ಗದಗ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಕುಲಪತಿ ಡಾ ಬಿ.ತಿಮ್ಮೇಗೌಡ ಅವರಿಗೆ 69 ಸಾವಿರ ರೂ. ವಂಚಿಸಿರುವ ಘಟನೆ ನಡೆದಿದೆ.

Advertisement

ನಗರದ ರಾಜರಾಜೇಶ್ವರಿ ನಗರದಲ್ಲಿ ವಾಸವಾಗಿರುವ ತಿಮ್ಮೇಗೌಡ ಅವರಿಗೆ ಕೆಲ ದಿನಗಳ ಹಿಂದೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಎಸ್‌ಬಿಐ ಬ್ಯಾಂಕ್‌ನ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದಾನೆ.

ನಂತರ ನಿಮ್ಮ ಹಾಗೂ ನಿಮ್ಮ ಮಗಳ ಎಟಿಎಂ ಕಾರ್ಡ್‌ ಅವಧಿ ಮುಕ್ತಾಯವಾಗಿದೆ. ಕೆಲ ತಾಂತ್ರಿಕ ಸಮಸ್ಯೆಯಿದ್ದು ಸರಿಪಡಿಸಬೇಕು. ಎಟಿಎಂ ಕಾರ್ಡ್‌ಗಳ ನಂಬರ್‌ ಕೊಡಿ ಎಂದು ಕೇಳಿದ್ದಾನೆ.

ಬ್ಯಾಂಕ್‌ ಸಿಬ್ಬಂದಿಯೇ ಕರೆ ಮಾಡಿರಬಹುದೆಂದು ಭಾವಿಸಿದ ಕುಲಪತಿ, ತಮ್ಮ ಹಾಗೂ ಪುತ್ರಿಯ ಎಟಿಎಂ ಕಾರ್ಡ್‌ನ ನಂಬರ್‌ ಹಾಗೂ ಓಟಿಪಿ ನಂಬರ್‌ ನೀಡಿದ್ದಾರೆ. ಇದಾದ ಕೆಲವೇ ನಿಮಿಷಗಳಲ್ಲಿ ಇಬ್ಬರ ಖಾತೆಯೂ ಸೇರಿ ಆರೋಪಿ 69,999 ರೂ. ಹಣವನ್ನು ಹಂತ ಹಂತವಾಗಿ ವರ್ಗಾವಣೆ ಮಾಡಿಕೊಂಡಿದಾನೆ. ತಿಮ್ಮೇಗೌಡರು ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next