Advertisement
ರಾಜಸ್ಥಾನ ಮೂಲದ ಪೂರನ್ ಸಿಂಗ್ ಚೌವ್ಹಾಣ್(25), ನರೇಂದ್ರ (32), ಧರ್ಮೇಂದರ್(21) ಹಾಗೂ ಹರಿಯಾಣ ಮೂಲದ ಧರ್ಮವೀರ್(24) ಬಂಧಿತರು.
Related Articles
Advertisement
ಆರೋಪಿಗಳು ಹೆಸರಾಂತ ಕೋರಿಯರ್ ಸಂಸ್ಥೆಗಳಾದ ಗತಿ, ವಿಆರ್‌ಎಲ್ ಹಾಗೂ ಇತರೆ ಪ್ರತಿಷ್ಠಿತ ಸಂಸ್ಥೆಗಳ ಹೆಸರಿನ ಗೂಗಲ್ ವೆಬ್‌ಪೇಜ್‌ನಲ್ಲಿ ತಮ್ಮ ಮೊಬೈಲ್ ನಂಬರ್ ಹಾಗೂ ವಿಳಾಸ ಉಲ್ಲೇ ಖೀಸಿ ಜಾಹೀರಾತು ನೀಡುತ್ತಿದ್ದರು. ಸಾರ್ವಜನಿಕರು ಕೋರಿ ಯರ್ ಕಳುಹಿಸಲು ಗೂಗಲ್‌ನಲ್ಲಿ ಶೋಧಿಸಿದಾಗ ಆರೋಪಿಗಳ ಮೊಬೈಲ್ ಸಂಖ್ಯೆ ಸಿಗುತ್ತಿತ್ತು. ಈ ಸಂಖ್ಯೆಗೆ ಕರೆ ಮಾಡಿದಾಗ, ವಾಹನಗಳನ್ನು ನಿಗದಿತ ಸ್ಥಳಕ್ಕೆ ಸಾಗಿಸುವುದಾಗಿ ಮನೆಗಳಿಗೆ ಬಂದು ವಾಹನವನ್ನು ಪ್ಯಾಕ್ ಮಾಡಿಕೊಂಡು ಹೋಗುತ್ತಿದ್ದರು. ಬಳಿಕ ವಾಹನ ಸಾಗಿಸದೆ ಮತ್ತಷ್ಟು ಹಣಕ್ಕೆ ಬೇಡಿಕೆ ಇರಿಸುತ್ತಿದ್ದರು. ತಾವು ಕೇಳಿದಷ್ಟು ಹಣ ನೀಡಿದ ಬಳಿಕ ವಾಹನವನ್ನು ನಿಜವಾದ ಕೋರಿಯರ್ ಸಂಸ್ಥೆಗೆ ವಾಹನ ತಲುಪಿಸುತ್ತಿ ದ್ದರು. ಬಳಿಕ ಕೋರಿಯರ್ ಸಂಸ್ಥೆಯವರು ವಾಹನ ಡೆಲಿವರಿ ನೀಡಿ, ಸಂಬಂಧಪಟ್ಟವರಿಂದ ಹಣ ಪಡೆಯುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಆರೋಪಿಗಳು ನಗರದ ಹಲವೆಡೆ ಇದೇ ಮಾದರಿಯಲ್ಲಿ ಹಲವರಿಗೆ ವಂಚಿಸಿರುವ ಸಾಧ್ಯತೆಯಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಮಾರ್ಗದರ್ಶನದಲ್ಲಿ ಸೆನ್ ಠಾಣೆ ಇನ್‌ಸ್ಪೆಕ್ಟರ್ ಸಂತೋಷ್ ರಾಮ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.