Advertisement
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಕಬ್ಬು ತೂಕದಲ್ಲಿ ಮೋಸ ಆಗುತ್ತಿದೆ ಎಂದು ಗಾಳಿಯಲ್ಲಿ ಗುಂಡು ಹಾರಿಸುವ ಮಾತು ಯಾರೂ ಆಡಬಾರದು. ದಾಖಲೆ ಸಮೇತ ಸಾಬೀತುಪಡಿಸಬೇಕು. ತೂಕದಲ್ಲಿ ಮೋಸ ಮಾಡುವ ಯಾವುದೇ ಕಾರ್ಖಾನೆ ಇದ್ದರೂ ಕ್ರಮ ಕೈಗೊಳ್ಳಲು ಸರ್ಕಾರ ಸ್ವತಂತ್ರವಾಗಿದೆ ಎಂದರು.
ರೈತರಿಗೆ ತೂಕದಲ್ಲಿ ಮೋಸವಾಗುತ್ತಿರುವ, ಹೊಸ ತಂತ್ರಜ್ಞಾನದ ಯಂತ್ರ ಅಳವಡಿಸುವ ಕುರಿತು ಕಾಂಗ್ರೆಸ್ ಸರ್ಕಾರ ಈಗ ಮಾತನಾಡುತ್ತಿದೆ. ಆದರೆ, ನಮ್ಮ ಕಾರ್ಖಾನೆಯಲ್ಲಿ 15 ವರ್ಷಗಳಿಂದ ನಿರಂತರವಾಗಿ ಹೊಸ ತಂತ್ರಜ್ಞಾನದ, ಎಲೆಕ್ಟಿçಕಲ್ ವೇಬ್ರಿಜ್ ಅಳವಡಿಸಲಾಗಿದೆ. ಎಲ್ಲಾ ಕಾರ್ಖಾನೆಗಳಲ್ಲೂ ಮೂರು ಪಾಳೆಯಲ್ಲಿ ಸಿಬ್ಬಂದಿ ಬದಲಾಗುತ್ತದೆ. ಇಲ್ಲಿ ತೂಕದ ಮಾಡಿದ ಬಳಿಕ, ಕಾರ್ಖಾನೆ ಮಾಲಿಕರು, ವ್ಯವಸ್ಥಾಪಕರು, ಆ ವಾಹನದ ಚಾಲಕರು ಹಾಗೂ ರೈತರಿಗೆ ನೇರವಾಗಿ ಬಿಲ್‌ಗಳು ಮೊಬೆÊಲ್‌ಗೆ ಹೋಗುತ್ತವೆ. ತೂಕದಲ್ಲಿ ಮೋಸ ಮಾಡಲು ಸಾಧ್ಯವೇ ಇಲ್ಲ. ಇಂತಹ ತಂತ್ರಜ್ಞಾನ ನಮ್ಮಲ್ಲಿ 15 ವರ್ಷಗಳಿಂದ ನಡೆದಿದೆ ಎಂದು ಹೇಳಿದರು. ರಾಜ್ಯ ಸರ್ಕಾರ, ಸಕ್ಕರೆ ಕಾರ್ಖಾನೆಗಳಲ್ಲಿ ಯಂತ್ರ ಅಳವಡಿಸುವ ಅಥವಾ ಯಾವುದೇ ಹೊಸ ಕಾರ್ಯಕ್ಕೆ ಮುಂದಾದರೂ ನಾವು ಬೆಂಬಲಿಸಿ, ಸಹಕಾರ ಕೊಡುತ್ತೇವೆ. ಈ ವಿಷಯದಲ್ಲಿ ಸಲಹೆ ಬೇಕಾದರೂ ಕೊಡಲು ಸಿದ್ಧ ಎಂದರು.