Advertisement

CHC; ದಿಢೀರ್ ಭೇಟಿ ನೀಡಿ ಸಿಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಕಂದಕೂರ

04:38 PM Mar 06, 2024 | Team Udayavani |

ಯಾದಗಿರಿ: ಯರಗೋಳ ವ್ಯಾಪ್ತಿಯ ಅರಿಕೇರಾ (ಬಿ) ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ದಿಢೀರ್ ಭೇಟಿ ನೀಡಿ, ರೋಗಿಗಳ ಜತೆ ಮಾತನಾಡಿ, ಅಲ್ಲಿನ ಅವ್ಯವಸ್ಥೆ,ಸಿಬಂದಿಗಳ ನಿರ್ಲಕ್ಷತನ ನೋಡಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ವಿಜಯ್ ಕುಮಾರ್ ಪಾಟೀಲ್ ವಿರುದ್ಧ ಕಿಡಿ ಕಾರಿದರು, ಕುಡಿಯಲು ನೀರಿಲ್ಲ, ಔಷಧಿಗಳಿಲ್ಲದೆ ರೋಗಿಗಳಿಗೆ ಹೇಗೆ ಚಿಕಿತ್ಸೆ ಕೊಡುತ್ತೀರಿ,? ದನದ ಕೊಟ್ಟಿಗೆಯಾಗಿದೆ, ಶಾಸಕನಾಗಿ ನಾನು ಆಗಮಿಸುತ್ತಿದ್ದೇನೆ ಎಂದು ನೀವು ಆಸ್ಪತ್ರೆಗೆ ಆಗಮಿಸಿದ್ದೀರಾ..? ಎಂದು ಪ್ರಶ್ನಿಸಿದರು.

ನಿಮಗೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ನಿಮ್ಮ ಮನೆಗೆ ಹೋಗಿ ಎಂದರು. ನರ್ಸ್ ಸಿಬಂದಿಯನ್ನು ಕರೆದು ಮಾತನಾಡಿಸಿ ಹೇಗೆ ಚಿಕಿತ್ಸೆ ನೀಡುತ್ತೀರಿ? ರೋಗಿಗಳಿಗೆ ಗ್ಲೂಕೋಸ್ ಡ್ರಿಪ್ ಹಚ್ಚುವ ಪದ್ಧತಿ ಹೀಗೇನಾ? ಎಂದು ಪ್ರಶ್ನಿಸಿದಾಗ, ಸಿಬಂದಿ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾದರು.

ಗ್ರಾಮದ ಪ್ರಮುಖರು ಆಸ್ಪತ್ರೆ ವೈದ್ಯಕೀಯ ಸಿಬಂದಿಗಳು, ಆಸ್ಪತ್ರೆಯಲ್ಲಿ ಇರುವುದಿಲ್ಲ, ಚಿಕಿತ್ಸೆ ದೂರದ ಮಾತು ಎಂದು ತಮ್ಮ ಅಳಲನ್ನು ಶಾಸಕರ ಎದುರಿಗೆ ತೋಡಿಕೊಂಡರು. ಶಾಸಕರು ಸಿಬ್ಬಂದಿಯ ಹಾಜರಿ ಪುಸ್ತಕ, ಔಷಧಿ ಕೋಣೆ, ವೀಕ್ಷಿಸಿದರು, ತಾಲೂಕ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಬಸವರಾಜ್ ಶರಬೈ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕಲ್ಯಾಣಕುಮಾರ್, ನಿರ್ಮಿತಿ ಕೇಂದ್ರದ ಕಿರಣ್ ಕುಮಾರ್, ಗ್ರಾಮ ಪಂಚಾಯತಿ ಅಧ್ಯಕ್ಷ ಬಸಮ್ಮ, ಉಪಾಧ್ಯಕ್ಷ ಅನುಷಾ, ಸದಸ್ಯರಾದ ಹಣಮಂತ, ಯಸುಮಿತ್ರ, ಪ್ರಭುಗೌಡ, ಶಾಂತಪ್ಪ,ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next