Advertisement

ಖಾಕಿ ತಂಡ ಸೇರಿದ ಛಾಯಾಸಿಂಗ್‌

12:22 PM May 26, 2019 | Team Udayavani |

ಚಿರಂಜೀವಿ ಸರ್ಜಾ “ಖಾಕಿ’ ಚಿತ್ರದ ಹೀರೋ ಎಂದು ಈ ಹಿಂದೆ ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಅವರಿಗೆ ತಾನ್ಯಾ ಹೋಪ್‌ ನಾಯಕಿಯಾಗಿದ್ದಾರೆ ಅಂತಾನೂ ತಿಳಿಸಲಾಗಿತ್ತು. ಆ ಚಿತ್ರದ ಚಿತ್ರೀಕರಣ ಯಾವಾಗ ಶುರುವಾಗಲಿದೆ, ಮತ್ತೆ ಆ ಚಿತ್ರತಂಡವನ್ನು ಯಾರೆಲ್ಲಾ ಸೇರಿಕೊಂಡಿದ್ದಾರೆ ಎಂಬ ಮಾಹಿತಿ ಮಾತ್ರ ಗೌಪ್ಯವಾಗಿತ್ತು. ಈಗ “ಖಾಕಿ’ ಚಿತ್ರಕ್ಕೆ ನಟಿಯೊಬ್ಬರ ಆಗಮನವಾಗುತ್ತಿದೆ. ಅವರು ಬೇರಾರೂ ಅಲ್ಲ, ಛಾಯಾಸಿಂಗ್‌. ಹೌದು, ಕನ್ನಡದ ಬಹುತೇಕ ಚಿತ್ರಗಳಲ್ಲಿ ನಟಿಸಿ, ಗುರುತಿಸಿಕೊಂಡಿದ್ದ ಛಾಯಾಸಿಂಗ್‌ ಸ್ವಲ್ಪ ಗ್ಯಾಪ್‌ ತೆಗೆದುಕೊಂಡಿದ್ದರು. ತಮ್ಮ ಮದುವೆ ಬಳಿಕ “ಮಫ್ತಿ’ಯಲ್ಲಿ ಕಾಣಿಸಿಕೊಂಡ ಛಾಯಾಸಿಂಗ್‌, ಮತ್ತೆ ಯಾವ ಕನ್ನಡ ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ. ಈಗ “ಖಾಕಿ’ ಚಿತ್ರದ ಮೂಲಕ ಎಂಟ್ರಿಕೊಡುತ್ತಿದ್ದಾರೆ. ಅಂದಹಾಗೆ, ಅವರಿಲ್ಲಿ ಪೊಲೀಸ್‌ ಅಧಿಕಾರಿ ಪಾತ್ರ ನಿರ್ವಹಿಸುತ್ತಿದ್ದಾರೆ ಎಂಬುದಷ್ಟೇ ಈ ಹೊತ್ತಿನ ಸುದ್ದಿ. ಸದ್ಯಕ್ಕೆ “ಖಾಕಿ’ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ. “ಕೆಂಗೇರಿ ಸಮೀಪ ಇರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ಚಿತ್ರೀಕರಣ ನಡೆಯುತ್ತಿದೆ. ಅದೇ ಜಾಗದಲ್ಲಿ 15 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಒಂದೇ ಏರಿಯಾದಲ್ಲಿ ಕ್ಲೈಮ್ಯಾಕ್ಸ್‌ ಸೇರಿದಂತೆ ಇತರೆ ದೃಶ್ಯಗಳನ್ನು ಚಿತ್ರೀಕರಿಸಲಾಗುವುದು’ ಎಂದು ನಿರ್ಮಾಪಕ ತರುಣ್‌ ಶಿವಪ್ಪ ಹೇಳಿದ್ದಾರೆ.

Advertisement

ಚಿತ್ರದಲ್ಲಿ ನಾಯಕನದು ಕೇಬಲ್‌ ಹುಡುಗ ಪಾತ್ರ. ಚಿತ್ರದಲ್ಲಿ ಮಾಸ್‌ ಅಂಶಗಳು ಹೈಲೈಟ್‌. ಚಿತ್ರದ ಶೀರ್ಷಿಕೆಗೆ “ಪವರ್‌ ಆಫ್ ಕಾಮನ್‌ ಮ್ಯಾನ್‌’ ಎಂಬ ಅಡಿಬರಹವಿದೆ. “ಖಾಕಿ’ ಅಂದಾಕ್ಷಣ, ಎಲ್ಲರಿಗೂ ಪೊಲೀಸ್‌ ನೆನಪಾಗುತ್ತಾರೆ. ಅದು ನಿಜ. ಆದರೆ, “ಖಾಕಿ’ ಹಾಕಿದ ಪೊಲೀಸರಷ್ಟೇ, ಅಲ್ಲ, ಒಬ್ಬ ಕಾಮನ್‌ ಮ್ಯಾನ್‌ ಕೂಡ ಪೊಲೀಸ್‌ ಕೆಲಸಕ್ಕೆ ಸಾಥ್‌ ಕೊಡಬಹುದು. ಅವರೊಂದಿಗೆ ಸಮಾಜದ ಸುಧಾರಣೆಗೆ ಮುಂದಾಗಬಹುದು ಎಂಬ ಒನ್‌ಲೈನ್‌ ಚಿತ್ರಕ್ಕಿದೆ. ಒಂದೇ ಹಂತದಲ್ಲಿ 55 ದಿನಗಳ ಕಾಲ ಚಿತ್ರೀಕರಣ ನಡೆಸಲಾಗುವುದು. ಈಗ ನಾಯಕ ಚಿರಂಜೀವಿ ಸರ್ಜಾ ಮತ್ತು ನಾಯಕಿ ತಾನ್ಯಾ ಹೋಪ್‌ ಕಾಂಬಿನೇಷನ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಮುಂದಿನ 10 ದಿನಗಳಲ್ಲಿ ಛಾಯಾಸಿಂಗ್‌ ಅವರ ಭಾಗದ ದೃಶ್ಯಕ್ಕೆ ಚಾಲನೆ ಸಿಗಲಿದೆ. ಅವರಿಲ್ಲಿ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಮಿಂಚಲಿದ್ದಾರೆ ಎಂಬುದು ಚಿತ್ರತಂಡದ ಮಾತು.

“ಖಾಕಿ’ ಚಿತ್ರವನ್ನು ನವೀನ್‌ ಕೃಷ್ಣ ರೆಡ್ಡಿ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ “ಮಾಸ್‌ ಲೀಡರ್‌’ ಮತ್ತು “ರೋಜ್‌’ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ನವೀನ್‌ ಕೃಷ್ಣ ರೆಡ್ಡಿ ಅವರಿಗೆ ಇದು ಮೊದಲ ಚಿತ್ರ. ಇನ್ನು, ಶಿವರಾಜಕುಮಾರ್‌ ಅಭಿನಯದ “ಮಾಸ್‌ ಲೀಡರ್‌’, ಶರಣ್‌ ಅಭಿನಯದ “ವಿಕ್ಟರಿ-2′ ಚಿತ್ರವನ್ನು ನಿರ್ಮಿಸಿದ್ದ ತರುಣ್‌ ಶಿವಪ್ಪ ಅವರು ಈ ಚಿತ್ರದ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. “ಖಾಕಿ’ ಚಿತ್ರಕ್ಕೆ ತಮಿಳಿನ “ನ್ಯೂ’ ಚಿತ್ರದ ನಿರ್ದೇಶಕ ವಿದ್ಯಾಧರ್‌ ಕಥೆ ಬರೆದಿದ್ದು, ಬಾಲು ಛಾಯಾಗ್ರಹಣ ಮಾಡುತ್ತಿ¨ªಾರೆ. “ಸಂಕಷ್ಟಕರ ಗಣಪತಿ’ ಸಂಗೀತ ನಿರ್ದೇಶಕ ಋತ್ವಿಕ್‌ ಸಂಗೀತವಿದೆ.ಅಂದಹಾಗೆ, “ಖಾಕಿ’ ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ತಯಾರಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next