ಬೀದರ: ಔರಾದ ತಾಲೂಕಿನ ತೋರ್ಣಾ, ಠಾಣಾಕುಶನೂರ, ಲಕ್ಷ್ಮೀನಗರ ಹಾಗೂ ಖಂಡಿಕೇರಿ ತಾಂಡಾ ಸೇರಿದಂತೆ ಹಲವೆಡೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಸಂಚರಿಸಿ ಸಂಕಷ್ಟದಲ್ಲಿದ್ದವರಿಗೆ ನೆರವು ನೀಡಿದರು.
ಲಕ್ಷ್ಮೀ ನಗರಕ್ಕೆ ಭೇಟಿ ನೀಡಿದ ವೇಳೆ, ರಾಶಿ ಮಾಡುವ ಯಂತ್ರದಲ್ಲಿ ಸಿಲುಕಿ ಮರಣ ಹೊಂದಿದ್ದ ತುಳಸಿರಾಮ ತುಕಾರಾಮ ಕೈಕಾಡೆ ಹಾಗೂ ರಸ್ತೆ ಅಪಘಾತದಲ್ಲಿ ಎರಡು ಕಾಲುಗಳು ನಿಶಕ್ತಗೊಂಡು ವಿಕಲಚೇತನರಾದ ದತ್ತಾತ್ರಿ ಪಾಂಡುರಂಗ ಧನಗಾರ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರ ಸಮಸ್ಯೆಗಳನ್ನು ಆಲಿಸಿ, ಎರಡು ಕುಟುಂಬದವರಿಗೆ ವಯಕ್ತಿಕ ಧನಸಹಾಯ ಮಾಡಿದರು.
ವಿಕಲಚೇತನರಾದವರಿಗೆ ಸರ್ಕಾರದಿಂದ ಮಾಸಾಶನ ಸೌಲಭ್ಯ ಕಲ್ಪಿಸಿಕೊಡಬೇಕು. ಸಂಕಷ್ಟದಲ್ಲಿರುವ ಕುಟುಂಬಸ್ಥರಿಗೆ ವಿವಿಧ ಇಲಾಖೆಗಳಿಂದ ಇರುವ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಾನು ನಿಮ್ಮೊಂದಿಗಿದ್ದೇನೆ. ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ. ಏನೇ ಸಮಸ್ಯೆ ಇದ್ದರೂ ನನ್ನನ್ನು ನೇರವಾಗಿ ಭೇಟಿ ಮಾಡಬಹುದು ಎಂದು ನೊಂದ ಕುಟುಂಬಸ್ಥರಿಗೆ ಧೈರ್ಯ ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಧೊಂಡಿಬಾ ನರೋಟೆ, ಧನರಾಜ ಒಡೆಯರ್, ವಸಂತ ದೇಸಾಯಿ, ಸಚಿ ನ ರಾಠೊಡ, ದಿಲೀಪ ಸಜ್ಜನಶೆಟ್ಟಿ, ಶ್ರೀಮಂತ ಠಾಕ್ರೆ, ಗಿರೀಶ ಒಡೆಯರ್ ಹಾಗೂ ಇತರರು ಉಪಸ್ಥಿತರಿದ್ದರು.