Advertisement
ರವಿವಾರ ನಗರದ ಪ್ರವಾಸಿಗೃಹದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 14ರಂದು ಸಂಜೆ 5:30ಕ್ಕೆ ಸಾಂಸ್ಕೃತಿಕ ಹಾಗೂ ಜಾನಪದ ಕಲಾ ಮಹೋತ್ಸವ ಕಾರ್ಯಕ್ರಮದ ಉದ್ಘಾಟನೆ ಜರುಗಲಿದೆ. ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶ್ರೀ ಶಾಂತಭೀಷ್ಮಚೌಡಯ್ಯ ಸ್ವಾಮೀಜಿ ಉಪಸ್ಥಿತಿಯಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಬಾಗಲಕೋಟೆ ಬಸವಲಿಂಗ ಸ್ವಾಮೀಜಿ, ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಸಿಂದಗಿಯ ಶಾಂತಗಂಗಾಧರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅಥಣಿಯ ಶಶಿಕಾಂತ ಪಡಸಲಗಿ ಸಮ್ಮುಖ ವಹಿಸುವರು. ಶಾಸಕ ಅರುಣಕುಮಾರ ಪೂಜಾರ ಉದ್ಘಾಟಿಸುವರು. ವಿಪ ಸದಸ್ಯ ಎನ್. ರವಿಕುಮಾರ ಅಧ್ಯಕ್ಷತೆ ವಹಿಸುವರು. ವಿಪ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ನೇತೃತ್ವ ವಹಿಸುವರು. ಶಾಸಕ ಬಿ. ನಾರಾಯಣರಾವ್, ವಿಪ ಸದಸ್ಯ ಶ್ರೀನಿವಾಸ ಮಾನೆ, ಜಿಪಂ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ, ಮಾಜಿ ಸಚಿವರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ ಇತರರು ಪಾಲ್ಗೊಳ್ಳುವರು ಎಂದರು.
Related Articles
Advertisement
ಜ್ಯೂನಿಯರ್ ರಾಜಕುಮಾರ ಖ್ಯಾತಿ ಅಶೋಕ ಬಸ್ತಿ ಅವರಿಂದ ವಿಭಿನ್ನ ಪಾತ್ರಗಳ ಅಭಿನಯ ನಡೆಯಲಿದೆ. ಒಡಿಸ್ಸಿ ನೃತ್ಯಪಟು ಮಮತಾ ಓಜಾ, ಅಸ್ಸಾಂನ ಬಿಹುನೃತ್ಯ, ಮಣಿಪುರದ ಟಾಂಗ್ಯಾ, ಛತ್ತೀಸ್‌ಗಡದ ಶಂಖವಾದನ, ರಾಜಸ್ಥಾನದ ಚಕ್ರಿ ಹಾಗೂ ಕೇರಳದ ಮೋಹಿನಿ ಅಟ್ಟಂ ನೃತ್ಯ, ತಮಿಳುನಾಡಿನ ಕಾವಡಿ ನೃತ್ಯ, ಆಂಧ್ರದ ತಪ್ಪಟ್ಟಗುಲ್ಲು, ಒರಿಸ್ಸಾದ ಒಟ್ಟಿಸ್ಸೀ ಮತ್ತು ಲಂಬಾಣಿ ನೃತ್ಯಗಳು ಪ್ರದರ್ಶನಗೊಳ್ಳಲಿವೆ. ಜಾದು ಕಲಾವಿದ ಕುದ್ರೋಳಿ ಗಣೇಶ ಅವರಿಂದ ಜಾದು ಪ್ರದರ್ಶನ, ತಿಪ್ಪೇಶ ಲಕ್ಕಿಕೋನಿ ಅವರಿಂದ ಜನಪದ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಅಧ್ಯಕ್ಷ ಮಂಜುನಾಥ ಭೋವಿ, ಅಂಬಿಗರಚೌಡಯ್ಯ ಗುರುಪೀಠದ ಕಾರ್ಯಾಧ್ಯಕ್ಷ ಅಶೋಕ ವಾಲಿಕಾರ, ಗಂಗಾಮತ ಸಮಾಜದ ಜಿಲ್ಲಾ ಉಪಾಧ್ಯಕ್ಷ ಪರಶುರಾಮ ಸೊನ್ನದ, ತಾಲೂಕಾಧ್ಯಕ್ಷ ಬಸವರಾಜ ಕಳಸೂರ, ಪ್ರಕಾಶ ಅಂಬಿಗೇರ, ಕರಬಸಪ್ಪ ಹಳದೂರ, ರಾಜು ಕಲ್ಲೂರ ಇತರರು ಇದ್ದರು.