ಎಐ ಕ್ಷೇತ್ರವು ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಾಣುತ್ತಿದೆ. ಈ ಸಂದರ್ಭದಲ್ಲಿ ವೈದ್ಯರು ಪತ್ತೆಹಚ್ಚಲು ಸಾಧ್ಯವಾಗದ್ದನ್ನು ಚಾಟ್‌ಜಿಪಿಟಿ ರೋಗ ಪತ್ತೆಹಚ್ಚಿರುವುದು ಐಎ ಕ್ಷೇತ್ರದ ಪ್ರಮುಖ ಮೈಲುಗಲ್ಲು ಎಂದು ಬಣ್ಣಿಸಲಾಗಿದೆ.
Advertisement
ಅಲೆಕ್ಸ್(4) ಕಳೆದ ಹಲವು ದಿನಗಳಿಂದ ನಿರಂತರವಾಗಿ ಹಲ್ಲು ನೋವಿನಿಂದ ಬಳಲುತ್ತಿದ್ದ. ಜತೆಗೆ ಆತನ ಬೆಳವಣಿಗೆಯು ಕುಂಠಿತಗೊಂಡಿತ್ತು. ಪ್ರತಿದಿನ ನೋವು ನಿವಾರಕ ಗುಳಿಗೆಗಳನ್ನು ತೆಗೆದುಕೊಳ್ಳಬೇಕಾಯಿತು. ಮಗುವಿನ ಆರೋಗ್ಯವನ್ನು ಸರಿಪಡಿಸಲು ತಾಯಿ ಕರ್ಟ್ನಿ 17 ವೈದ್ಯರನ್ನು ಸಂಪರ್ಕಿಸಿದರು. ಎಲ್ಲ ರೀತಿಯ ಆರೋಗ್ಯ ತಪಾಸಣೆ ಮತ್ತು ಪರೀಕ್ಷೆಯನ್ನು ಮಾಡಿಸಿದರು. ಆದರೂ ರೋಗ ಮಾತ್ರ ಪತ್ತೆಯಾಗಲಿಲ್ಲ. ಅಂತಿಮವಾಗಿ ಒಂದು ದಿನ ಈ ಬಗ್ಗೆ ತಿಳಿಯಲು ಚಾಟ್‌ಜಿಪಿಟಿ ಮೊರೆಹೋದರು. ಅದರಿಂದ ಮಗು ಅಪರೂಪದ “ಟೆಥರ್ಡ್ ಕಾರ್ಡ್ ಸಿಂಡ್ರೋಮ್’ನಿಂದ ಬಳಲುತ್ತಿರುವುದು ತಿಳಿಯಿತು. ಇದು ಅಪರೂಪದ ಕಾಯಿಲೆಯಾಗಿದೆ. ಇದರ ಆಧಾರದಲ್ಲಿ ಅಲೆಕ್ಸ್‌ಗೆ ತಾಯಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ವೈದ್ಯರು ಪತ್ತೆಹಚ್ಚಲು ಸಾಧ್ಯವಾಗದನ್ನು ಎಐ ಸಾಧಿಸಿದ್ದು, ಆರೋ ಗ್ಯ ಕ್ಷೇತ್ರದಲ್ಲಿ ಅಚ್ಚರಿ ಮತ್ತು ನೂತನ ಸಾಧ್ಯತೆಗಳಿಗೆ ದಾರಿ ಮಾಡಿಕೊಟ್ಟಿದೆ.