Advertisement

ಚಾಟ್‌ ಜಿಪಿಟಿ ಪ್ರತಿಸ್ಪರ್ಧಿ ಗೂಗಲ್‌ ಬಾರ್ಡ್‌ ಬಿಡುಗಡೆ 

10:02 PM May 11, 2023 | Team Udayavani |

ನವದೆಹಲಿ: ಎಐ ತಂತ್ರಜ್ಞಾನ ಆಧರಿತ ಚಾಟ್‌ ಜಿಪಿಟಿಯ ಪ್ರತಿಸ್ಪರ್ಧಿಯಾಗಿ ಭಾರತದಲ್ಲಿ ಗೂಗಲ್‌ನ ಎಐ ಚಾಟ್‌ಬೋಟ್‌ ಬಾರ್ಡ್‌ ಬಿಡುಗಡೆಗೊಂಡಿದೆ. ಈ ಹಿಂದೆಯೇ ಗೂಗಲ್‌ ಬಾರ್ಡ್‌ ಅನ್ನು ಬಿಡುಗಡೆಗೊಳಿಸಿತ್ತಾದರೂ, ಕೆಲ ತಾಂತ್ರಿಕ ಕಾರಣಗಳಿಂದ ಬಳಕೆದಾರರು ಈ ಸೇವೆ ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ, ಇದೀಗ ಗೂಗಲ್‌ ಬಳಕೆದಾರರು ಈ ವೆಬ್‌ಸೈಟ್‌ ಬಳಸಬಹುದಾಗಿ ಎಂದು ಸಂಸ್ಥೆ ತಿಳಿಸಿದೆ. ಈ ಮೂಲಕ ಭಾರತ ಸೇರಿದಂತೆ 180 ದೇಶಗಳಲ್ಲಿ ಇನ್ನು ಮುಂದೆ ಎಐ ಬಾರ್ಡ್‌ ಸೇವೆ ಲಭ್ಯವಿರಲಿದೆ.

Advertisement

ಗೂಗಲ್‌ ಪ್ರಸಕ್ತ ಅತ್ಯಾಧುನಿಕ ಭಾಷಾ ಮಾದರಿಯಾಗಿರುವ ಪಾಮ್‌2 ವ್ಯವಸ್ಥೆಯನ್ನು ಬಾರ್ಡ್‌ ಆಧರಿಸಿದ್ದು, ಬಳಕೆದಾರರ ಪ್ರಶ್ನೆಗೆ ಸೂಕ್ತವಾಗಿ ಉತ್ತರಿಸುವ ಸಾಮರ್ಥ್ಯವನ್ನು ಹೊಂದಿದೆ. ಆದಾಗ್ಯೂ, ಮುಂದಿನ ದಿನಗಳಲ್ಲಿ ಸಂವಹನವನ್ನು ಸುಧಾರಿಸುವ ನಿಟ್ಟಿನಲ್ಲಿ ಜಿಮಿನಿ ಎನ್ನುವ ನೂತನ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಯೋಜಿಸಲಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಗೂಗಲ್‌ ಅಕೌಂಟ್‌ ಮೂಲಕ //bard.google.com ವೆಬ್‌ಸೈಟ್‌ ಲಾಗಿನ್‌ ಆಗುವ ಮೂಲಕ ಟ್ರೈ ಬಾರ್ಡ್‌ ಎನ್ನುವ ಆಪ್ಶನ್‌ ಆಯ್ಕೆಮಾಡಿ ಬಳಿಕ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next