Advertisement
ಚಾಟ್ ಜಿಪಿಟಿ ದುರ್ಬಳಕೆಗಾಗಿ ಚೀನದಲ್ಲಿ ಬಂಧನವಾದ ಮೊದಲ ಪ್ರಕರಣ ಇದಾಗಿದೆ. ಹಾಂಗ್ ಎಂಬಾತ ಚಾಟ್‌ಜಿಪಿಟಿ ಬಳಸಿ, “ಸ್ಥಳೀಯ ರೈಲೊಂದು ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ 9 ಮಂದಿ ಮೃತಪಟ್ಟಿದ್ದಾರೆ’ ಎಂಬ ನಕಲಿ ಸುದ್ದಿಯನ್ನು ಎಐ ತಂತ್ರಜ್ಞಾನದ ಸಹಾಯ ದಿಂದ ಸೃಷ್ಟಿಸಿದ್ದಾನೆ. ಇದನ್ನು ಬೈಜಿಯಾಹೋ ಎಂಬ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಇದನ್ನು ಚೀನ ಸೈಬರ್ ಅಪರಾಧ ವಿಭಾಗದ ಅಧಿಕಾರಿಗಳು ಗಮನಿಸುವ ವೇಳೆಗೆ, 20ಕ್ಕೂ ಹೆಚ್ಚು ಮಂದಿ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದು, 15,000ಕ್ಕೂ ಹೆಚ್ಚು ವೀವ್‌ಗಳು ಪಡೆದಿತ್ತು. ಇದನ್ನು ಅನಂತರ ಡಿಲೀಟ್ ಮಾಡಲಾಗಿದೆ. Advertisement
ಚಾಟ್‌ಜಿಪಿಟಿ ದುರ್ಬಳಕೆ: ಮೊದಲ ಅರೆಸ್ಟ್
01:24 AM May 09, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.