ಚೇಜ್.. ಸ್ಯಾಂಡಲ್ ವುಡ್ ನಲ್ಲಿ ಸಖತ್ ಟಾಕ್ ಕ್ರಿಯೇಟ್ ಮಾಡಿದ್ದ ಚಿತ್ರ. ಚಿತ್ರ ಘೋಷಣೆಯಾದಾಗಿನಿಂದ ಚೇಜ್ ನಲ್ಲಿ ಏನೋ ಸಖತ್ ಕಂಟೆಂಟ್ ಇದೆ ಅನ್ನೋ ಖಾತರಿಯನ್ನ ಚೇಜ್ ಮಾಡುವಂತೆ ಮಾಡಿದ್ದ ಚಿತ್ರ. ವಿಲೋಕ್ ಶೆಟ್ಟಿ ನಿರ್ದೇಶನದ ಚೇಜ್ ಟೈಟಲ್, ಪೋಸ್ಟರ್, ಟೀಸರ್,ಹಾಡು ಗಳಿಂದಲೇ ಭರಪೂರ ನಿರೀಕ್ಷೆಯನ್ನ ಹುಟ್ಟಿಸಿತ್ತು. ಈಗ ಇನ್ನೇನು ಇದೇ 15 ಕ್ಕೆ ಚಿತ್ರ ರಾಜ್ಯಾದ್ಯಂತ ತೆರೆಗೆ ಬರಲಿದೆ ಅನ್ನೋ ಸಮಾಧಾನ ಚಿತ್ರ ಪ್ರೇಮಿಗಳಲ್ಲಿ ಮೂಡಿತ್ತು. ಈ ಸಮಯದಲ್ಲೇ ಚಿತ್ರದ ಟ್ರೈಲರ್ ರಿಲೀಸ್ ಮಾಡಿರುವ ತಂಡ ಚೇಜ್ ಚಿತ್ರದ ಹೂರಣದ ಮೇಲೆ ಬೆಳಕು ಹಾಯಿಸಿ ಚಿತ್ರ ನೋಡುವ ಕುತೂಹಲಕ್ಕೆ ಕಿಚ್ಚು ಹೊತ್ತಿಸಿದೆ.
ಹೌದು ರಿಲೀಸ್ ಆದ ಟ್ರೈಲರ್ ಒಮ್ಮೆ ನೋಡಿದ್ರೆ, ಅಯ್ಯೋ ಪೂರ್ತಿ ಸಿನೆಮಾ ನೋಡಲು ಇನ್ನು ಎರಡ್ಮೂರು ದಿನ ಕಾಯಬೇಕಾ ಅನ್ನೋ ಪ್ರಶ್ನೆ ಮೂಡಿಸುವಂತಿದೆ. ಕ್ರೈಂ, ಸಸ್ಸೇನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚೇಜ್ ನ ಟ್ರೈಲರ್ ನಲ್ಲಿ ಮರ್ಡರ್ ಮಿಸ್ಟ್ರಿ ಕಥೆಯ ಎಳೆ ಮೈ ಜುಮ್ಮೆನಿಸುವಂತಿದೆ. ಮಿಸ್ಸಿಂಗ್, ಪೊಲೀಸ್, ಕಂಪ್ಲೇಂಟ್, ಕೊಲೆ, ಪ್ರೀತಿ-ಪ್ರೇಮ, ಪಾರ್ಟಿ ಇನ್ಯಾವುದೋ ಜಾಲ ಹೀಗೆ ಪಾತ್ರಗಳು ತೆರೆದುಕೊಂಡು ಚುರುಕಿನ ಸಂಭಾಷಣೆಯೊಂದಿಗೆ ಗಮನಸೆಳೆಯುತ್ತಿದೆ. ಟ್ರೈಲರ್ ನೋಡಿದ್ಮೇಲಂತೂ ಚಿತ್ರ ನೋಡುವ ಕೌತುಕ ಹೆಚ್ಚೋದು ಸತ್ಯ. ಯಾಕಂದ್ರೆ ಕೇವಲ ಒಂದು ಟ್ರೈಲರ್ ನಲ್ಲೇ ಪ್ರೇಕ್ಷಕರನ್ನ ತುದಿ ಸೀಟಿಗೆ ತಂದು ಕೂರಿಸುವಂತಿರುವಾಗ ಇನ್ನೂ ಸಿನೆಮಾ ಹೇಗಿರಬೇಡ ಎಂಬ ಚರ್ಚೆಗಳು ಶುರುವಾಗಿವೆ. ಸದ್ಯ ಎಲ್ಲರಿಗೂ ಟ್ರೈಲರ್ ಇಷ್ಟವಾಗ್ತಿದ್ದು, ರಿಲೀಸ್ ಆದ ಕೆಲವೇ ಸಮಯದಲ್ಲಿ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ತಿದೆ. ಈ ಮೂಲಕ ಚಿತ್ರ ರಿಲೀಸ್ ಗೂ ಮೊದಲೇ ನಿರ್ದೇಶಕ ವಿಲೋಕ್ ಶೆಟ್ಟಿ ಸಿನೆಮಾ ಹಾಗು ತಂಡಕ್ಕೆ ಮೊದಲ ಜಯ ಸಿಕ್ಕಂತಾಗಿದೆ.
ತಾರಾಗಣದಲ್ಲಿರುವ ರಾಧಿಕಾ ನಾರಾಯಣ್, ಅವಿನಾಶ್ ನರಸಿಂಹರಾಜು, ರಾಜೇಶ್ ನಟರಂಗ, ಶೀತಲ್ ಶೆಟ್ಟಿ, ಸುಶಾಂತ್ ಪೂಜಾರಿ ಮುಂತಾದವರ ಪಾತ್ರಗಳೂ ಟ್ರೈಲರ್ ನಲ್ಲಿ ಕುತೂಹಲ ಹುಟ್ಟಿಸಿವೆ. ಸಿಂಪ್ಲಿಫನ್ ಮೀಡಿಯಾ ನೆಟ್ವರ್ಕ್ ಬ್ಯಾನರ್ ನಡಿ ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಬಂಡವಾಳ ಹೂಡಿದ್ದು, ಶಿವ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಕಾರ್ತಿಕ್ ಆಚಾರ್ಯ ಸಂಗೀತ ಸಾರಥ್ಯ, ಶ್ರೀ ಕ್ರೇಜಿ ಮೈಂಡ್ಸ್ ಸಂಕಲನ, ಅನಂತ ರಾಜ್ ಅರಸ್ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ಪ್ರಮೋದ್ ಶೆಟ್ಟಿ, ಅರ್ಜುನ್ ಯೋಗೇಶ್ ರಾಜ್, ಸುಶಾಂತ್ ಪೂಜಾರಿ, ಸುಧಾ ಬೆಳವಾಡಿ, ರಾಜೇಶ್ ನಟರಂಗ, ಅರವಿಂದ್ ಬೋಳಾರ್, ರೆಹಮಾನ್ ಹಾಸನ್ ಒಳಗೊಂಡ ದೊಡ್ಡ ಕಲಾವಿದರ ದಂಡೇ ಈ ಚಿತ್ರದಲ್ಲಿದ್ದು ಇದೇ ಜುಲೈ 15 ಕ್ಕೆ ತೆರೆಯ ಮೇಲೆ ಅನಾವರಣಗೊಳ್ಳಲಿದೆ.
ಈ ಚಿತ್ರವನ್ನು ಮನೋಹರ್ ಸುವರ್ಣ ನಿರ್ಮಾಣ ಮಾಡಿದ್ದಾರೆ. ಪ್ರಶಾಂತ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅನಂತ್ ರಾಜ್ ಅರಸ್ ಛಾಯಾಗ್ರಹಣ, ಕಾರ್ತಿಕ್ ಆಚಾರ್ಯ ಹಿನ್ನೆಲೆ ಸಂಗೀತ ಮತ್ತು ಸಂಗೀತ ನಿರ್ದೇಶನ, ಶ್ರೀ ಕ್ರೇಜಿಮೈಂಡ್ಸ್ ಸಂಕಲನ, ಅವಿನಾಶ್ ಎಸ್ ದಿವಾಕರ್ ಕಲಾ ನಿರ್ದೇಶನ, ಸುನೀಲ್ ಕಟಾಬು ಉಪ ನಿರ್ದೇಶನ, ಡಿಫರೆಂಟ್ ಡ್ಯಾನಿ, ಚೇತನ್ ರಮ್ಶಿ ಡಿಸೋಜಾ ಮತ್ತು ವಿನೋದ್ ಸಾಹಸ ನಿರ್ದೇಶನ, ವಿಜಯ ರಾಣಿ ಮತ್ತು ಸುಶಾಂತ್ ಪೂಜಾರಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ರಾಧಿಕಾ ನಾರಾಯಣ್, ಅವಿನಾಶ್, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ರಾಜೇಶ್ ನಟರಂಗ, ಅರವಿಂದ್ ರಾವ್, ಪ್ರಮೋದ್ ಶೆಟ್ಟಿ, ಅರವಿಂದ್ ಬೋಳಾರ್, ಶ್ವೇತಾ ಸಂಜೀವುಲು, ರೆಹಮಾನ್ ಹಾಸನ್, ವೀಣಾ ಸುಂದರ್, ಸುಧಾ ಬೆಳವಾಡಿ, ಉಷಾ ಭಂಡಾರಿ, ಸುಂದರ್, ಸತೀಶ್ ಸಿದ್ಧಾರ್ಥ ಮಾಧ್ಯಮಿಕ, ಪ್ರಿಯಾ ಶಟಮರ್ಶನ್ ಮುಂತಾದವರ ಬೃಹತ್ ತಾರಾಗಣವಿದೆ.