Advertisement
ಈ ಪರಿಸ್ಥಿತಿ ಹೀಗೆಯೇ ಮುಂದುವರಿ ದರೆ ನೀರಿಗೆ ಬರ ಉಂಟಾಗಲಿದೆ, ಅಂತರ್ಜಲವೂ ಇಳಿಯಲಿದೆ. ಹಸುರೀಕರಣಕ್ಕೆ ಒತ್ತು ನೀಡದಿದ್ದರೆ ಮುಂದಿನ ತಲೆಮಾರು ಇನ್ನಷ್ಟು ತೊಂದರೆ ಅನುಭವಿಸುವುದು ನಿಶ್ಚಿತ. ವಾಯು ಮಾಲಿನ್ಯವೂ ಮಿತಿ ಮೀರುತ್ತದೆ. ಇದನ್ನು ತಡೆಗಟ್ಟಲು ಇರುವ ಏಕೈಕ ಉಪಾಯವೆಂದರೆ ಗಿಡಗಳ ನಾಟಿ ಎಂದರಿತ ಕಾಣಿಯೂರು ಗ್ರಾ.ಪಂ. ಆಡಳಿತ ರಸ್ತೆಯ ಬದಿಯಲ್ಲಿ ಸಾಲು ಗಿಡಗಳನ್ನು ನೆಟ್ಟು ಪೋಷಣೆಗೆ ಮುಂದಾಗಿದೆ.
ಉತ್ತಮ ಹಾಗೂ ಸ್ವಚ್ಛ ಪರಿಸರ ರೂಪಿಸುವತ್ತ ಪ್ರತಿಯೊಬ್ಬರೂ ಮನಸ್ಸು ಮಾಡಿದಾಗ ಮಾತ್ರ ನಮ್ಮ ಜೀವನ ಶೈಲಿ ಸುಧಾರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಕಾಣಿಯೂರು ಗ್ರಾ.ಪಂ. ವತಿಯಿಂದಲೇ ಪರಿಸರ ಸಂರಕ್ಷಣೆಯ ಕಾರ್ಯ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಪರಿಕಲ್ಪನೆಯನ್ನು ಆಂದೋಲನದ ರೂಪವಾಗಿ ನಡೆಸಲು ಚಿಂತನೆ ನಡೆದಿದೆ. ಗ್ರಾಮದ ಕೊಳವೆ ಬಾವಿಗಳಿಗೆ ಮಳೆ ನೀರಿಂಗಿಸುವ ಕಾರ್ಯವೂ ನಡೆಯಲಿದೆ ಎಂದು ಕಾಣಿಯೂರು ಗ್ರಾ.ಪಂ. ಸದಸ್ಯ, ಸಾಲು ಗಿಡಗಳ ನಾಟಿಯ ನೇತೃತ್ವ ವಹಿಸಿದ್ದ ಗಣೇಶ್ ಉದನಡ್ಕ ಹೇಳಿದ್ದಾರೆ.
Related Articles
Advertisement