Advertisement

ಚಾರುಕೀರ್ತಿ ಭಟ್ಟಾರಕ ಶ್ರೀಗಳನ್ನು ಕಾಣಬೇಕಿದ್ದರೆ 12 ವರ್ಷ ಕಾಯಬೇಕಿತ್ತು!

12:00 AM Mar 24, 2023 | Team Udayavani |

ಕಾರ್ಕಳ: ಹೆಚ್ಚು ಭಕ್ತಿ, ಅತೀ ಕಡಿಮೆ ಭಯ, ಅಪಾರ ಪ್ರೀತಿ, ಅಭಿಮಾನ… ಇದು ಗುರುವಾರ ಜಿನೈಕ್ಯರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಯವರನ್ನು ಜಾತಿ, ಮತ ಭೇದವಿಲ್ಲದೆ ಎಲ್ಲರೂ ಪ್ರೀತಿಸಲು ಕಾರಣ. ಶ್ರೀಗಳು ಮಹಾಮಸ್ತಕಾಭಿಷೇಕದ ಸಂದರ್ಭ ಹೊರತು ಇತರ ಸಮಯದಲ್ಲಿ ಮಾಧ್ಯಮದವರಿಗೆ ಲಭ್ಯರಾಗುತ್ತಿರಲಿಲ್ಲ; ಅವರನ್ನು ಕಾಣಲು ಮತ್ತೆ 12 ವರ್ಷ ಕಾಯಬೇಕಿತ್ತು ಎನ್ನುತ್ತಾರೆ ಶ್ರೀಗಳ ಹತ್ತಿರದಿಂದ ಬಲ್ಲವರು. ಶ್ರೀಗಳ ಅನೇಕ ಮಂದಿ ಸ್ನೇಹಿತರು ಬಾಲ್ಯದ ಅನುಭವ, ಒಡನಾಟವನ್ನು “ಉದಯವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೂ ಅವರದು ಶಿಸ್ತುಬದ್ಧ ನಡವಳಿಕೆ. ಗಂಭೀರ ಸ್ವಭಾವ, ಜತೆಗಿರು ವವರನ್ನು ಅತಿಯಾಗಿ ಪ್ರೀತಿಸುತ್ತಿದ್ದರು ಎಂದು 7ನೇ ತರಗತಿಯ ಸಹಪಾಠಿ ಎನ್‌. ಸುಕುಮಾರ ಜೈನ್‌ ಮೂಡುಬಿದಿರೆ ಹೇಳಿದರು.

Advertisement

ಗೆಳೆಯನ ಶಿಷ್ಯನಾದೆ: ಶ್ರೀ ಭುಜಬಲಿ ಬ್ರಹ್ಮಚರ್ಯ ಆಶ್ರಮದಲ್ಲಿ ಓದುತ್ತಿರುವಾಗ ಆತ್ಮೀಯ ಗೆಳೆಯರಾಗಿದ್ದೆವು. ಅದೇ ಗೆಳೆತನ ಕೊನೆಗೆ ನನ್ನನ್ನು ಅವರ ಶಿಷ್ಯನನ್ನಾಗಿಸಿತು. ಕಾರ್ಕಳಕ್ಕೆ ಬಂದಾಗ ಅವರ ಪ್ರಾಥಮಿಕ ಶಾಲಾ ಗುರುಗಳಾದ ಜಿ. ಜಗತ್ಪಾಲ ಶೆಟ್ಟಿ ಅವರನ್ನು ಗೌರವಿಸಿ ಅಭಿನಂದಿಸಿದ್ದರು ಎಂದು ಕಾರ್ಕಳದ ಎಂ. ಶಿಶುಪಾಲ ಜೈನ್‌ ನೆನಪಿಸಿಕೊಂಡರು. ಚಿಕ್ಕವರಿದ್ದಾಗಲೇ ಸರಳ, ಸಜ್ಜನಿಕೆ ಅವರಲ್ಲಿತ್ತು. ಧರ್ಮದ ಬಗ್ಗೆ ಅಪಾರ ಗೌರವ, ಮೋಹ ಹೊಂದಿದ್ದರು. ಅವರ ಬಾಲ್ಯದ ಗುರಿಯು ಮುಂದೆ ಅವರನ್ನು ಓರ್ವ ಶ್ರೇಷ್ಠ ವ್ಯಕ್ತಿಯನ್ನಾಗಿಸಿತು ಎಂದು ಇನ್ನೋರ್ವ ಸಹಪಾಠಿ ಎಸ್‌. ಸಾಂತಪ್ಪ ಜೈನ್‌ ಮೈಸೂರು ಸ್ಮರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next