ಶ್ರವಣಬೆಳಗೊಳ: ಭಗವಾನ್ ಬಾಹುಬಲಿ ಸ್ವಾಮಿಗೆ ಮಾಡುವ ಹಾಲಿನ ಅಭಿಷೇಕ ಹರಿದು ಹೋಗುತ್ತದೆ. ಆದರೆ ಕಲಾವಿದರು ಮಾಡುವ ಅಭಿಷೇಕ ಎಲ್ಲಾ ಕಾಲಕ್ಕೂ ಸಲ್ಲುತ್ತದೆ ಎಂದು ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಶ್ರವಣಬೆಳ ಗೊಳದ ವಿಂಧ್ಯಗಿರಿ ತಪ್ಪಲಿನ ಸ್ವಾಗತ ಕಚೇರಿಯಲ್ಲಿ ನಡೆದ ಕಲಾ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಂಧ್ಯಗಿರಿ ಬೆಟ್ಟದಲ್ಲಿರುವ ಭಗವಾನ್ ಬಾಹುಬಲಿ ಸ್ವಾಮಿಯು ಜಗತ್ತಿನಲ್ಲಿರುವ ಎಲ್ಲಾ ಕಲಾವಿದರಿಗೂ ಸ್ಫೂರ್ತಿಯಾಗಿದೆ. ಬಾಹುಬಲಿ ನಿರ್ಮಾ ಣದಲ್ಲಿ ರೇಖಾಚಿತ್ರದ ಹಿನ್ನೆಲೆಯಿದೆ ಎಂದರು.
ತಾಯಿಯ ಇಚ್ಛೆ: ಚಾವುಂಡರಾಯನ ತಾಯಿಯ ಇಚ್ಛೆಯಂತೆ ಫೌದಾನಪುರದಲ್ಲಿರುವ ಬಾಹುಬಲಿ ಸ್ವಾಮಿಯ ದರ್ಶನಕ್ಕೆ ತೆರಳುವಾಗ ಚಂದ್ರಗಿರಿ ಬೆಟ್ಟದಲ್ಲಿ ತಂಗಿದ್ದಾಗ ಕನಸು ಬಿತ್ತು. ಅದರಂತೆ ಚಾವುಂಡರಾಯ ವಿಂಧ್ಯಗಿರಿ ಬೆಟ್ಟದಲ್ಲಿರುವ ದೊಡ್ಡಕಲ್ಲಿಗೆ ಬಾಣ ಬಿಟ್ಟಾಗ ರೇಖಾಚಿತ್ರ ಮೂಡುತ್ತದೆ. ನಂತರ ಬೆಟ್ಟದ ತುದಿಯಲ್ಲಿ ನಿರ್ಮಾಣ ಮಾಡಿ ದರ್ಶನ ಪಡೆದು ತಲಕಾವೇರಿಗೆ ಹಿಂದಿರುಗುತ್ತಾರೆ. ಆದ್ದರಿಂದ ಚಿನ್ನಕ್ಕಿಂತ ಕಲೆಗೆ ಹೆಚ್ಚು ಬೆಲೆಯಿದೆ ಎಂದು ಹೇಳಿದರು. ನಂತರ ಚಿತ್ರಕಲಾ ಪರಿಷತ್ತು ಕಾರ್ಯದರ್ಶಿ ಅಪ್ಪಾಜಿ ಮಾತನಾಡಿ, ಪುರಾಣ ಚರಿತ್ರೆ ಹಾಗೂ ಧರ್ಮಗಳು ಸಹ ಕಲೆಗಳನ್ನು ಬಿಟ್ಟಿಲ್ಲ. ದೇಶದ ವಿವಿಧ ಭಾಗಗಳಿಂದ ಕಲಾವಿದರನ್ನು ಒಗ್ಗೂಡಿಸಿ ಕಾರ್ಯಕ್ರಮ ನಡೆಸುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು.
ಹಿರಿಯ ಕಲಾವಿದ ರಾಮ ಶರ್ಮ, ಕ್ರಾಂತಿಕುಮಾರ್ ಪಾಂಡ್ಯ, ಪುಷ್ಪ ಪಾಂಡ್ಯ, ಸಂಜಯ ಕುಮಾರ್ ಇತರ ಕಲಾವಿದರು ಇದ್ದರು