ಮೂಡುಬಿದಿರೆ: ಶ್ರೀ ಜೈನ ಮಠಾಧೀಶ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಅವರ ಪಟ್ಟಾಭಿಷೇಕದ 24ನೇ ವರ್ಧಂತಿ ಉತ್ಸವ ಮಂಗಳವಾರ ಬೆಳಗ್ಗೆ ಗುರುಗಳ ಬಸದಿಯಲ್ಲಿ ಜರಗಿತು.
ಭ| ಪಾರ್ಶ್ವನಾಥ ಸ್ವಾಮಿಗೆ ವಿಶೇಷ ಅಭಿಷೇಕ, 24 ತೀರ್ಥಂಕರರು, ಸರಸ್ವತಿ, ಪದ್ಮಾವತಿ ಪೂಜೆ, ಮಹಾಮಂಗಳಾರತಿ ನಡೆದವು. 18ಬಸದಿಗಳ ಅರ್ಚಕರಿಂದ ಶ್ರೀ ಜಿನ ಗಂಧೋದಕ ಪ್ರಸಾದ ಸ್ವೀಕರಿಸಿ ಸ್ವಾಮೀಜಿ ಆಶೀರ್ವಚನವಿತ್ತರು.
ಜಗತ್ತಿನಲ್ಲಿ ಪರಸ್ಪರ ನಂಬಿಕೆ ಉತ್ಸಾಹದ ಕೊರತೆಯಿಂದ ದುಃಖ ಉಂಟಾಗುವುದು. ಪರಸ್ಪರ ಅರಿತು ಕೂಡಿ ಬಾಳಿದಾಗ, ಧರ್ಮ ಜಾಗೃತಿಯ ಕಾರ್ಯದಲ್ಲಿ ತೊಡಗಿಸಿಕೊಂಡ ಸಜ್ಜನರು ಸುಖಶಾಂತಿ ನೆಮ್ಮದಿ ಪಡೆಯುವರು ಎಂದು ಹೇಳಿದರು.
ಬಸದಿಗಳ ಮೊಕ್ತೇಸರರಾದ ಪಟ್ಣ ಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್, ಆದರ್ಶ್ ಅರಮನೆ, ಮಾಜಿ ಸಚಿವ ಕೆ. ಅಭಯಚಂದ್ರ, ಶಂಭವ್ ಕುಮಾರ್, ಮಠ ದವ್ಯವಸ್ಥಾಪಕ ಸಂಜಯಂತ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಮಧ್ಯಾಹ್ನ ಮುನಿರಾಜ್ ರೆಂಜಾಳ ತಾಳಮದ್ದಳೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ| ಉಮಾನಾಥ ಶೆಣೈ, ಕೃಷ್ಣರಾಜ ಹೆಗ್ಡೆ ಉಪಸ್ಥಿತದ್ದರು. ಪ್ರಭಾತ್ ಬಲಾ°ಡ್ ನಿರ್ವಹಿಸಿದರು.