Advertisement

ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಹೆಚ್ಚುತ್ತಿದೆ ಅಪಘಾತ

10:54 AM Jun 14, 2020 | sudhir |

ಬೆಳ್ತಂಗಡಿ: ಮಳೆಗಾಲ ಸಮೀಪಿಸುತ್ತಿರುವ ಮುನ್ನವೇ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ.
ಶನಿವಾರ ಸ್ನೇಹಿತರು ಸೇರಿ ಧರ್ಮಸ್ಥಳಕ್ಕೆ ಭೇಟಿ ನೀಡಿ ಚಿಕ್ಕಮಗಳೂರು ಮಾರ್ಗವಾಗಿ ಬೆಂಗಳೂರು ತೆರಳುವ ಕಾರು ಹಾಗೂ ತರಕಾರಿ ಸಾಗಾಟದ ಗೂಡ್ಸ್‌ ಮಿನಿ ಟೆಂಪೊ ಪರಸ್ಪರ ಢಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಟೆಂಪೊ ಚರಂಡಿಗೆ ಬಿದ್ದಿದೆ. ಅದೃಷ್ಟವಶಾತ್‌ ಇಬ್ಬರೂ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.

Advertisement

22 ಸಣ್ಣಪುಟ್ಟ ಅಪಘಾತ
ಕಳೆದ ಎರಡು ವಾರಗಳ ಅವಧಿಯಲ್ಲಿ ಈ ರಸ್ತೆಯಲ್ಲಿ 22 ಸಣ್ಣಪುಟ್ಟ ಅಪಘಾತಗಳ ಸಹಿತ 6 ತೀವ್ರಸ್ವರೂಪದಲ್ಲಿ ವಾಹನಗಳು ಅಪಘಾತಕ್ಕೀಡಾಗಿವೆ.

ಚಾರ್ಮಾಡಿ ಘಾಟ್‌ ರಸ್ತೆಯ ಆರಂಭದಿಂದ 11 ತಿರುವುಗಳಿಗೆ ಇತ್ತೀಚೆಗೆ ಹೆದ್ದಾರಿ ಇಲಾಖೆಯಿಂದ ಮರು ಡಾಮರೀಕರಣ ಮಾಡಲಾಗಿತ್ತು. ಈ ಡಾಮರೀಕರಣ ಅತೀ ನುಣುಪಾಗಿದ್ದು, ಮಳೆಗೆ ತೇವಾಂಶವಿರುವ ರಸ್ತೆಯಲ್ಲಿ ವಾಹನಗಳು ಬ್ರೇಕ್‌ ಅಳವಡಿಸಿದರೂ ನಿಯಂತ್ರಣಕ್ಕೆ ಬಾರದೆ ಅಪಘಾತ ಸಂಭವಿಸುತ್ತಿದೆ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ.
ಇದಲ್ಲದೇ ಲಾಕ್‌ಡೌನ್‌ ಅವಧಿಯಲ್ಲಿ ವಾಹನಗಳ ಸಂಖ್ಯೆ ಇಳಿಮುಖವಾಗಿದ್ದರಿಂದ ಅಗತ್ಯ ಓಡಾಟ ನಡೆಸುವ ವಾಹನಗಳ ಅತೀವೇಗದ ಚಾಲನೆಯಿಂದ ಅಪಘಾತಗಳು ಹೆಚ್ಚುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next