Advertisement
ಈ ಹಿಂದೆ ಇಲ್ಲಿ ಮುಖ್ಯ ರಸ್ತೆಯಿಂದ ಸುಮಾರು 30 ಮೀ. ನಷ್ಟು ದೂರದಲ್ಲಿ ಪೊಲೀಸ್ ಚೆಕ್‌ಪೋಸ್ಟ್ ಇತ್ತು. ಅಷ್ಟು ದೂರದಿಂದ ಪೊಲೀಸ್ ಸಿಬಂದಿ ವಾಹನಗಳ ಬಳಿ ತಪಾಸಣೆಗೆ ಬರುವಾಗ ವಾಹನಗಳು ತೆರಳಿ ಆಗುತ್ತಿತ್ತು. ಸಿಬಂದಿ ರಸ್ತೆ ಬದಿಯಲ್ಲಿ ಬಿಸಿಲು, ಗಾಳಿ, ಮಳೆ, ಚಳಿಯನ್ನು ಲೆಕ್ಕಿಸದೆ ನಿಂತು ಅಥವಾ ಕುರ್ಚಿ ಹಾಕಿ ಕುಳಿತುಕೊಳ್ಳುವ ಪರಿಸ್ಥಿತಿ ಇತ್ತು. ಲಾಕ್‌ಡೌನ್ ಸಮಯದಲ್ಲಿ ವಾಹನ ತಪಾಸಣೆ ಮಾಡುವ ಸಿಬಂದಿಗೆ ಶೀಟ್ ಹಾಕಿ ತಾತ್ಕಾಲಿಕ ಶೆಡ್ ಒಂದನ್ನು ಚಾರ್ಮಾಡಿ ಗ್ರಾ.ಪಂ. ನಿರ್ಮಿಸಿ ಕೊಟ್ಟು ಸಹಕರಿಸಿತ್ತು.
ಚೆಕ್‌ಪೋಸ್ಟ್‌ಗೆ ಇರುವ ಗೇಟ್ ಮುರಿದು ಬಿದ್ದು ದುರಸ್ತಿ ಕಾಣದ ಕಾರಣ ಚೆಕ್‌ಪೋಸ್ಟ್ ಜಾಗದಲ್ಲಿ ಬಣ್ಣ, ಸ್ಟಿಕರ್ ಮಾಸಿದ್ದ ಬ್ಯಾರಿಕೇಡ್‌ಗಳನ್ನು ರಸ್ತೆಗೆ ಅಳವಡಿಸಲಾಗಿತ್ತು. ಇದರಿಂದ ವಾಹನ ಸವಾರರಿಗೆ ಭಾರೀ ತೊಂದರೆ ಆಗುತ್ತಿತ್ತು. ಈಗ ಮುರಿದು ಬಿದ್ದ ಗೇಟ್‌ದುರಸ್ತಿ ಪಡಿಸಿ ಅಳವಡಿಸಲಾಗಿದೆ.
Related Articles
ಹಿಂದಿನ ಇಲ್ಲಿಯ ವ್ಯವಸ್ಥೆಯಿಂದ ವಾಹನ ಸವಾರರು ಹಾಗೂ ಪೊಲೀಸರು ತೊಂದರೆ ಅನುಭವಿಸುವುದನ್ನು ಮನಗಂಡು, ನೂತನ ಪೊಲೀಸ್ ಚೆಕ್‌ಪೋಸ್ಟ್ ನಿರ್ಮಿಸುವುದರೊಂದಿಗೆ ಮುರಿದು ಬಿದ್ದಿದ್ದ ಗೇಟ್‌ನ್ನು ಅಳವಡಿಸಲಾಗಿದೆ. ಹೊಸ ಗೇಟ್ ನಿರ್ಮಿಸಲು ಮೇಲಧಿಕಾರಿಗಳಿಗೆ ಕೋರಿಕೆ ಸಲ್ಲಿಸಲಾಗಿದೆ.
– ಪವನ್ ನಾಯಕ್, ಪಿ.ಎಸ್.ಐ.,
ಧರ್ಮಸ್ಥಳ ಪೊಲೀಸ್ ಠಾಣೆ
Advertisement