Advertisement
2ನೇ ತಿರುವಿನಿಂದ ಅಣ್ಣಪ್ಪ ಬೆಟ್ಟದವರೆಗೆ 20ಕ್ಕೂ ಹೆಚ್ಚು ಕಡೆ ಸಣ್ಣ ಪ್ರಮಾಣದಲ್ಲಿ ಭೂಕುಸಿತವಾಗಿದ್ದು, 2, 7, 8 ತಿರುವು ಮಧ್ಯೆ 5ಕಡೆ ಸಂಭವಿಸಿದ ಬೃಹದಾಕಾರದ ಮಣ್ಣು ಕುಸಿತ ಹಾಗೂ ಕಲ್ಲನ್ನು ಸಂಪೂರ್ಣ ತೆರವುಗೊಳಿಸಲಾಗಿದೆ. ಘಾಟಿ ಮಧ್ಯ 30ಕ್ಕೂ ಹೆಚ್ಚು ಮರಗಳು ಉರುಳಿವೆ.
ಅಪಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ಪೊಲೀಸ್ ವ್ಯಾನ್ ಹಾಗೂ ಕಕ್ಕಿಂಜೆ ಕ್ಲಸ್ಟರ್‌ನ ಎಸ್‌ಕೆಎಸ್‌ಎಫ್ ತಂಡ ಆ್ಯಂಬುಲೆನ್ಸ್ ಮುಖೇನ ಗಸ್ತು ತಿರುಗುತ್ತಿದೆ. ತಹಶೀಲ್ದಾರ್ ಗಣಪತಿ ಶಾಸ್ತ್ರಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು, ಹೆದ್ದಾರಿ ಇಂಜಿನಿಯರ್‌ಗಳು ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದರು. ವಿದ್ಯುತ್ ವ್ಯತ್ಯಯದಿಂದ ಕೊಟ್ಟಿಗೆಹಾರದಲ್ಲಿ ವಾರಗಳಿಂದ ನೆಟ್ವರ್ಕ್ ಇಲ್ಲದೆ ಜನಸಾಮಾನ್ಯರು ಪರದಾಡುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.