Advertisement
ಚಾರ್ಮಾಡಿ ಘಾಟಿಯಲ್ಲಿ ಗಸ್ತು ತಿರುಗುತ್ತಿದ್ದ ಬಣಕಲ್ ಪೊಲೀಸ್ ಸಬ್ ಇನ್ ಸ್ಪೆಕ್ಚರ್ ಡಿ.ವಿ ರೇಣುಕಾ ಮಾತನಾಡಿ,’ ಚಾರ್ಮಾಡಿ ಘಾಟಿಯಲ್ಲಿ ಮಂಗಳವಾರ ಹಾಸನ ಮೂಲದ ಎಳೆನೀರು ವಾಹನದ ಚಾಲಕ ವಾಹನದಲ್ಲಿದ್ದ ಕಸವನ್ನು ಘಾಟಿಯಲ್ಲಿ ಬಿಸಾಕಿ ಮಂಗಳೂರು ಭಾಗದಿಂದ ಕೊಟ್ಟಿಗೆಹಾರ ಕಡೆಗೆ ತೆರಳಿದ್ದ. ಅದರ ಜಾಡು ಹಿಡಿದು ಚಾರ್ಮಾಡಿ ಘಾಟಿಗೆ ಗಸ್ತಿನಲ್ಲಿದ್ದ ಪಿಎಸ್ ಐ ವಾಹನವನ್ನು ಗೇಟ್ ನಲ್ಲಿ ಹಿಡಿದು ವಾಪಾಸ್ ಕರೆ ತಂದು ಅದೇ ಕಸವನ್ನು ತುಂಬಿಸಿ ಚಾಲಕನಿಗೆ ಬಣಕಲ್ ಠಾಣೆಯಲ್ಲಿ ಕೆಪಿ ಆಕ್ಟ್ ಪ್ರಕಾರ ಕೇಸು ದಾಖಲಿಸಿ ದಂಡ ವಿಧಿಸಿ ಕಸವನ್ನು ಅಲ್ಲಿಂದ ಅವರಿಂದಲೇ ತೆರವು ಗೊಳಿಸಿ ಚಾಲಕನಿಗೆ ತಾನು ಮಾಡಿದ ತಪ್ಪಿನ ಅರಿವು ಮೂಡಿಸಿ ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.ಇದರಿಂದ ಇತರ ವಾಹನದವರು ಈ ರೀತಿ ಮಾಡದಂತೆ ಜಾಗೃತಿ ಮೂಡಿಸಿದ ಪೊಲೀಸರ ಕ್ರಮವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ. Advertisement
Charmadi Ghat ಕಸ ಎಸೆದ ಚಾಲಕನಿಗೆ ಕೇಸ್; ಚಾಲಕನಿಂದಲೇ ಕಸ ತೆರವು
09:01 PM Jul 02, 2024 | Team Udayavani |