Advertisement

ಚಾರ್ಲಿ ಪೋಸ್ಟರ್‌ ಬಂತು

12:02 PM May 29, 2018 | |

ರಕ್ಷಿತ್‌ ಶೆಟ್ಟಿ ನಾಯಕರಾಗಿರುವ “ಅವನೇ ಶ್ರೀಮನ್ನಾರಾಯಣ’ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಈ ಸಿನಿಮಾದಲ್ಲಿ ರಕ್ಷಿತ್‌ ಶೆಟ್ಟಿಯವರ ಗೆಟಪ್‌ ಕೂಡಾ ವಿಭಿನ್ನ ಶೈಲಿಯಲ್ಲಿರಲಿದೆ. ಈ ನಡುವೆಯೇ ರಕ್ಷಿತ್‌ ಶೆಟ್ಟಿ ನಟನೆಯ ಮತ್ತೂಂದು ಸಿನಿಮಾದ ಸಿದ್ಧತೆ ಕೂಡಾ ನಡೆದಿದೆ. ಅದು “777 ಚಾರ್ಲಿ’. ಈ ಚಿತ್ರವನ್ನು ರಕ್ಷಿತ್‌ ಶೆಟ್ಟಿ ತಮ್ಮ ಪರಂವಾ ಸ್ಟುಡಿಯೋದಡಿ ನಿರ್ಮಿಸುತ್ತಿದ್ದಾರೆ.

Advertisement

ಈ ಹಿಂದೆ “ಕಿರಿಕ್‌ ಪಾರ್ಟಿ’ ಚಿತ್ರದ ನಿರ್ಮಾಣದಲ್ಲಿ ರಕ್ಷಿತ್‌ ಜೊತೆ ಕೈ ಜೋಡಿಸಿದ್ದ ಜಿ.ಎಸ್‌.ಗುಪ್ತಾ ಕೂಡಾ “ಚಾರ್ಲಿ’ ನಿರ್ಮಾಣದಲ್ಲಿದ್ದಾರೆ. ಉಳಿದಂತೆ ಪುಷ್ಕರ್‌ ಫಿಲಂಸ್‌ “ಚಾರ್ಲಿ’ಗೆ ಬೆಂಬಲವಾಗಿದೆ. ಈಗಾಗಲೇ ಚಿತ್ರದ ಮೊದಲ ಟೈಟಲ್‌ ಪೋಸ್ಟರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರವನ್ನು ಕಿರಣ್‌ ರಾಜ್‌ ನಿರ್ದೇಶನ ಮಾಡುತ್ತಿದ್ದಾರೆ.

ಇವರಿಗಿದು ಚೊಚ್ಚಲ ಸಿನಿಮಾ. ಅಂದಹಾಗೆ, “777 ಚಾರ್ಲಿಯ ಮನುಷ್ಯ ಹಾಗೂ ಪ್ರಾಣಿಯ ಬಾಂಧವ್ಯದ ಸುತ್ತ ನಡೆಯುವ ಸಿನಿಮಾ. ಯಾವುದೋ ಒಂದು ಕಾರಣಕ್ಕೆ ಬೇಸರಗೊಂಡು ಆಗಿ ಏಕಾಂಗಿಯಾಗಿರುವ ನಾಯಕನಿಗೆ ನಾಯಿಯೊಂದು ಸಿಗುತ್ತದೆ. ಆ  ನಾಯಿ ಆತನ ಲೈಫ್ಗೆ ಎಂಟ್ರಿಕೊಟ್ಟ ತಕ್ಷಣ ಆತ ಸಂಪೂರ್ಣ ಬದಲಾಗುತ್ತಾನೆ.ಆ ಬದಲಾವಣೆಗೆ ಕಾರಣ ಏನು,

ಆ ಪ್ರಕ್ರಿಯೆಯಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದು ಚಿತ್ರದ ಕಥೆ. ಚಿತ್ರದಲ್ಲಿ ಲಾಬ್ರಾಡಾರ್‌ ನಾಯಿಯೊಂದು ಪ್ರಮುಖವಾಗಿದ್ದು, ಈಗಾಗಲೇ ಅದಕ್ಕೆ ಬೇಕಾದ ತರಬೇತಿ ನೀಡಲಾಗಿದೆ. ರಕ್ಷಿತ್‌ ಶೆಟ್ಟಿ ಕೂಡಾ “ಚಾರ್ಲಿ’ ಬಗ್ಗೆ ಎಕ್ಸೆ„ಟ್‌ ಆಗಿದ್ದು, ಚಿತ್ರೀಕರಣಕ್ಕಾಗಿ ಎದುರು ನೋಡುತ್ತಿದ್ದಾರೆ. ಜೂನ್‌ನಿಂದ ಚಿತ್ರೀಕರಣ ಆರಂಭವಾಗಲಿದೆ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next