ಲಂಡನ್: ಬ್ರಿಟನ್ ರಾಣಿ ಎಲಿಜಬೆತ್ II ರ ಮರಣದ ನಂತರ ಐತಿಹಾಸಿಕ ಸಮಾರಂಭದಲ್ಲಿ ಚಾರ್ಲ್ಸ್ III ಅವರನ್ನು ಶನಿವಾರ ಬ್ರಿಟನ್‌ನ ಹೊಸ ರಾಜ ಎಂದು ಘೋಷಿಸಲಾಗಿದೆ.
73 ವರ್ಷದ ಚಾರ್ಲ್ಸ್ ಅವರು ಅಧಿಕೃತವಾಗಿ ಹೊಸ ರಾಜನಾಗಿ ಪ್ರತಿಜ್ಞೆ ಮಾಡಿದರು, “ಸಾರ್ವಭೌಮತ್ವದ ಕರ್ತವ್ಯಗಳು ಮತ್ತು ಗುರುತರ ಜವಾಬ್ದಾರಿಯ ಬಗ್ಗೆ ಆಳವಾದ ಅರಿವಿದೆ” ಎಂದು ಹೇಳಿದರು.
ಪ್ರಧಾನ ಮಂತ್ರಿ ಲಿಜ್ ಟ್ರಸ್ ಮತ್ತು ಎಲ್ಲಾ ಅಧಿಕಾರಿಗಳು, ಚಾರ್ಲ್ಸ್ ಅವರ ಪತ್ನಿ ಕ್ಯಾಮಿಲ್ಲಾ, ಹಿರಿಯ ಮಗ ಮತ್ತು ಉತ್ತರಾಧಿಕಾರಿ ವಿಲಿಯಂ ಸೇರಿದಂತೆ ನೂರಾರು ಖಾಸಗಿ ಕೌನ್ಸಿಲರ್‌ಗಳು ಅದ್ದೂರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗುರುವಾರ ನಿಧನ ಹೊಂದಿದ ತಾಯಿಯನ್ನು ನೆನೆದು ”ಜೀವಮಾನದ ಪ್ರೀತಿ ಮತ್ತು ನಿಸ್ವಾರ್ಥ ಸೇವೆಯ ಉದಾಹರಣೆಯನ್ನು ನೀಡಿದರು. ಅದನ್ನು ನಾವು ಅನುಕರಿಸುತ್ತೇನೆ” ಎಂದು ಚಾರ್ಲ್ಸ್ ಭರವಸೆ ನೀಡಿದರು.
96 ನೇ ವಯಸ್ಸಿನಲ್ಲಿ ಬಾಲ್ಮೋರಲ್‌ನಲ್ಲಿ ರಾಣಿಯ ನಿಧನದ ನಂತರ ಚಾರ್ಲ್ಸ್ III ಅವರು ಸ್ವಯಂ ರಾಜನಾದರೂ ಹೊಸ ರಾಜನ ಸಾರ್ವಭೌಮತ್ವವನ್ನು ಕೌನ್ಸಿಲ್ ಗುರುತಿಸುವ ಕ್ರಮ ಶತಮಾನಗಳ ಹಳೆಯ ಔಪಚಾರಿಕತೆಯಾಗಿದೆ.