Advertisement

ಚಾರ್ಕೋಪ್‌ ಕನ್ನಡಿಗರ ಬಳಗ: ರಂಗ ತರಬೇತಿ ಶಿಬಿರಕ್ಕೆ ಚಾಲನೆ

04:44 PM Aug 05, 2019 | Team Udayavani |

ಮುಂಬಯಿ, ಆ. 4: ಚಾರ್ಕೋಪ್‌ ಕನ್ನಡಿಗರ ಬಳಗ ಕಾಂದಿವಲಿ ಇದರ ಸಾಹಿತ್ಯ ಮತ್ತು ಸಾಂಸ್ಕೃತಿಕ ಉಪಸಮಿತಿಯ ವತಿಯಿಂದ ಮೂರು ದಿನಗಳ ಕಾಲ ನಡೆಯಲಿರುವ ರಂಗ ತರಬೇತಿ ಶಿಬಿರಕ್ಕೆ ಆ. 4ರಂದು ಚಾಲನೆ ನೀಡಲಾಯಿತು.

Advertisement

ರಂಗತಜ್ಞ, ಸಂವೇದನಾಶೀಲ ನಾಟಕಕಾರ, ಕವಿ ಸಾ. ದಯಾ ಮತ್ತು ಪ್ರಸಿದ್ಧ ರಂಗಭೂಮಿ, ಸಿನೆಮಾ ಕಲಾವಿದ ಘನಶ್ಯಾಮ ಶ್ರೀವಾಸ್ತವ ಅವರ ಸಹಯೋಗದಲ್ಲಿ ಆಯೋಜಿಸಿರುವ ಮೂರು ದಿನಗಳ ರಂಗ ತರಬೇತಿ ಶಿಬಿರವು ರವಿವಾರ ಸಂಜೆ ಕಾಂದಿವಲಿ ಪಶ್ಚಿಮದ ಪೊಯಿಸರ್‌ ಜಿಮಾVನದ ಸಭಾಗೃಹದಲ್ಲಿ ಉದ್ಘಾಟನೆಗೊಂಡಿತು.

ಮುಖ್ಯ ಅತಿಥಿಯಾಗಿ ಬಂಟರ ಸಂಘ ಮುಂಬಯಿ ಇದರ ಜೋಗೇಶ್ವರಿ-ದಹಿಸರ್‌ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ, ವೆಜ್‌ ಟ್ರೀಟ್‌ನ ಮಾಲಕ ರವೀಂದ್ರ ಎಸ್‌. ಶೆಟ್ಟಿ ಹಾಗೂ ಇತರ ಸಂಪನ್ಮೂಲ ವ್ಯಕ್ತಿಗಳು ದೀಪ ಬೆಳಗಿಸಿ ಶಿಬಿರಕ್ಕೆ ಚಾಲನೆ ನೀಡಿದರು. ಬಳಗದ ಅಧ್ಯಕ್ಷ ಎಂ. ಕೃಷ್ಣ ಎನ್‌. ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಮುಂಡಪ್ಪ ಪಯ್ಯಡೆ, ಎರ್ಮಾಳ್‌ ಹರೀಶ್‌ ಶೆಟ್ಟಿ, ಪೊಯಿಸರ್‌ ಜಿಮಾVನದ ಕರುಣಾಕರ ಶೆಟ್ಟಿ, ಬಳಗದ ಗೌರವ ಪ್ರಧಾನ ಕಾರ್ಯದರ್ಶಿ ರಘುನಾಥ ಶೆಟ್ಟಿ, ಉಪಸಮಿತಿ ಸಂಚಾಲಕ ಭಾಸ್ಕರ ಸರಪಾಡಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಂಗ ಭೂಮಿಯಲ್ಲಿ ಆಸಕ್ತಿವುಳ್ಳವರಿಗೆ, ಕಲಾವಿದರಿಗೆ ಪ್ರೋತ್ಸಾಹಿಸುವ ಹಿನ್ನಲೆಯಲ್ಲಿ, ರಂಗ ತರಬೇತಿ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಳಗದ ಗೋಪಾಲ ತ್ರಾಸಿ, ತನುಜಾ ಭಟ್, ರೂಪಾ ಭಟ್ ಸೇರಿದಂತೆ ಹಲವಾರು ನಾಟಕಾಸಕ್ತರು, ಬಳಗದ ಸದಸ್ಯರು ಹಾಜರಿದ್ದರು.

ಚಿತ್ರ-ವರದಿ: ರೊನಿಡಾ ಮುಂಬಯಿ

Advertisement
Advertisement

Udayavani is now on Telegram. Click here to join our channel and stay updated with the latest news.

Next