Advertisement

ಧರ್ಮಾಚರಣೆಯಿಂದ ಶ್ರೇಯಸ್ಸು: ಶೃಂಗೇರಿ ಶ್ರೀ

02:55 AM Jul 19, 2017 | Team Udayavani |

ಮಹಾನಗರ: ವ್ಯಕ್ತಿ ಯಾವುದೇ ಧರ್ಮದಲ್ಲಿದ್ದರೂ ಧರ್ಮಾಚರಣೆ ಬಿಡಬಾರದು. ಧರ್ಮಾಚರಣೆ ಮಾಡಿದವರು ಜೀವನದಲ್ಲಿ ಶ್ರೇಯಸ್ಸು ಪಡೆಯಲು ಸಾಧ್ಯ ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹೇಳಿದರು.

Advertisement

ಶೃಂಗೇರಿ ಮಠದಲ್ಲಿ ನಡೆಯುವ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿ ಮತ್ತು ತತ್ಕರಕಮಲ ಸಂಜಾತ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಅವರ ಚಾತುರ್ಮಾಸ್ಯ ಪ್ರಯುಕ್ತ ಕರ್ಹಾಡ ಬ್ರಾಹ್ಮಣ ಸಮಾಜ ಶೃಂಗೇರಿ ಸಂಪರ್ಕ ಸಮಿತಿ ವತಿಯಿಂದ ಸೋಮವಾರ ಜರಗಿದ ಗುರುದರ್ಶನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಪ್ರತಿಯೊಬ್ಬರಿಗೂ ಧರ್ಮಾಚರಣೆ ಬೇಕಾದ ಎಲ್ಲ ಅವಕಾಶಗಳಿವೆ. ಆದರೆ ಅದನ್ನು ಸದುಪಯೋಗಪಡಿಸಿಕೊಳ್ಳುವ ಗುಣ ಹೊಂದಿರಬೇಕು. ಧರ್ಮದ ಆಚರಣೆ ಜೀವನದ ಪರಮಾರ್ಥವಾಗಬೇಕು. ಈ ಮೂಲಕ ಮನುಷ್ಯ ಜನ್ಮವನ್ನು ಸಾರ್ಥಕವಾಗಿಸಬೇಕು. ಅಲ್ಲದೆ ಧರ್ಮಾಚರಣೆ ಮೂಲಕ ಅಧರ್ಮದ ಕಡೆಗೆ ಹೋಗದಂತೆ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು ಎಂದವರು ಹೇಳಿದರು.

ಶಿಷ್ಯರಾದವರಿಗೆ ಗುರು ಸೇವೆ ಎಂಬುದು, ಗುರುಗಳಾದವರಿಗೆ ಶಿಷ್ಯ ರನ್ನು ಹರಸುವುದು ಬಹುದೊಡ್ಡ ಕರ್ತವ್ಯ. ಗುರುಗಳು ಯಾವತ್ತೂ ಶಿಷ್ಯರ ಹಿತವನ್ನು ಬಯಸುತ್ತಾರೆ. ಅದೇ ರಿತಿ ಶಿಷ್ಯರಾದವರು ಯಾವತ್ತೂ ಗುರುಗಳಿಗೆ ವಿಧೇಯರಾಗಿರುತ್ತಾರೆ ಎಂದರು. ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ನಿಧಿ ಸಮರ್ಪಣೆ
ಕರ್ಹಾಡ ಬ್ರಾಹ್ಮಣ ಸಮಾಜದ ವತಿಯಿಂದ ಶೃಂಗೇರಿಯಲ್ಲಿ ಒಂದು ದಿನದ ಶಾಶ್ವತ ಅನ್ನದಾನ ಸೇವೆಗೆ 1.75 ಲಕ್ಷ ರೂ. ನಿಧಿಯನ್ನು ಜಗದ್ಗುರುಗಳಿಗೆ ಸಮರ್ಪಿಸಲಾಯಿತು.

Advertisement

ಕರ್ಹಾಡ ಬ್ರಾಹ್ಮಣ ಸಮಾಜ ಶೃಂಗೇರಿ ಸಂಪರ್ಕ ಸಮಿತಿ ಅಧ್ಯಕ್ಷ ಆನೆಮಜಲು ವಿಷ್ಣು ಭಟ್‌, ಸಂಚಾಲಕರಾದ ಕೋಳಿಕ್ಕಜೆ ಬಾಲಕೃಷ್ಣ ಭಟ್‌, ಆಟಿಕುಕ್ಕೆ ಹರೀಶ್‌ ಭಟ್‌ ಹಾಗೂ ಸಮಾಜದ ಎಲ್ಲ ಘಟಕಗಳ ಪದಾಧಿಕಾರಿಗಳು, ಸಮಾಜದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next