Advertisement

“ರಥ ಚಲಿಸುವ ಧರ್ಮ ಸಭಾ ಮಂಟಪ’ : ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

10:50 PM Feb 27, 2021 | Team Udayavani |

ಮೂಡುಬಿದಿರೆ: ಬಡಗ ಬಸದಿ ರಥೋತ್ಸವವು ಮೂಡುಬಿದಿರೆ ಶ್ರೀ ಜೈನಮಠಾಧೀಶ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಶುಕ್ರವಾರ ರಾತ್ರಿ ಜರಗಿತು.

Advertisement

ಭಟ್ಟಾರಕ ಸ್ವಾಮೀಜಿ ತಮ್ಮ ಆಶೀರ್ವ ಚನದಲ್ಲಿ, “ಬಸದಿ ಸಮವಸರಣದ ಸ್ಥಿರ ಪ್ರತೀಕ; ರಥ ಚಲಿಸುವ ಧರ್ಮ ಸಭಾ ಮಂಟಪ. ಭಗವಂತನನ್ನು ರಥದಲ್ಲಿ ಇರಿಸಿ ಉತ್ತಮ ವಿಚಾರಗಳೆಂಬ ಹಗ್ಗ ವನ್ನು ಎಳೆದು ಮೋಕ್ಷ ಮಾರ್ಗದಲ್ಲಿ ಮುನ್ನಡೆಯಲು ರಥೋತ್ಸವ ಪ್ರೇರಣೆ ನೀಡುತ್ತದೆ ಎಂದು ನುಡಿದರು.

ಡಿ. ಸುರೇಂದ್ರ ಕುಮಾರ್‌ ಧರ್ಮಸ್ಥಳ ಅವರು ಧಾರ್ಮಿಕ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಕೋವಿಡ್‌ ಸಂದರ್ಭ ಜೈನ ಸಂಘಟ ನೆಗಳು ವಿವಿಧೆಡೆ ಆಹಾರ ಸಾಮಗ್ರಿ ವಿತರಣೆ ಸಹಿತ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡು ಗಮನ ಸೆಳೆವ ಕಾರ್ಯ ಮಾಡಿವೆ ಎಂದು ಅವರು ಶ್ಲಾಘಿಸಿದರು.

ಡಿ. ಸುರೇಂದ್ರ ಕುಮಾರ್‌, ಪಟ್ಟಾಭಿ ಷೇಕದ ರಜತ ಸಂಭ್ರಮದಲ್ಲಿರುವ ಅಳದಂ ಗಡಿ ಅರಸರಾದ ಡಾ| ಪದ್ಮಪ್ರಸಾದ್‌ ಅಜಿಲ ಅವರನ್ನು ಸ್ವಾಮೀಜಿಯವರು “ಪರಂಪರಾ ಭೂಷಣ’ ಬಿರುದು ನೀಡಿ ಹರಸಿದರು.

ವಿವಿಧ ರಂಗಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಪ್ರವೀಣ್‌ ಇಂದ್ರ ವೇಣೂರು, ಸುರೇಶ ದೇವಾಡಿಗ, ಮಕ್ಕಿಮನೆ ಸುದೇಶ್‌, ವೀರೇಂದ್ರ ಕಂಬ್ಳಿ ಅವರನ್ನು ಸ್ವಾಮೀಜಿ ಅಭಿನಂದನ ಪತ್ರ ನೀಡಿ ಹರಸಿದರು.

Advertisement

ಸಮ್ಮಾನ
ತುಳು ನಾಮಫಲಕ ವಿನ್ಯಾಸಕಾರ ಜಿ.ವಿ.ಎಸ್‌. ಉಳ್ಳಾಲ ಹಾಗೂ ದಾನಿ ರಾಜೇಶ್‌ ಆಳ್ವ ಅವರನ್ನು ಸ್ವಾಮೀಜಿ ಅಭಿನಂದಿಸಿ ಹರಸಿದರು.

ಮಾಜಿ ಸಚಿವ ಅಭಯಚಂದ್ರ, ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಸುದೇಶ್‌ ಕುಮಾರ್‌, ದಿನೇಶ್‌ ಕುಮಾರ್‌ ಬೆಟೆRàರಿ, ಆದರ್ಶ್‌ ಕೊಂಡೆಮನೆತನ ಹಾಗೂ ಭರತ್‌ ಇಂದ್ರ, ಉಪಸ್ಥಿತರಿದ್ದರುಪ್ರಭಾತ್‌ ಬಲಾ°ಡು ನಿರೂಪಿಸಿದರು. ನೇಮಿರಾಜ್‌ ವಂದಿಸಿದರು.

ನೃತ್ಯ ವೈವಿಧ್ಯ
ಧವಲತ್ರಯ ಜೈನ ಕಾಶಿ ಟ್ರಸ್ಟ್‌ ವತಿಯಿಂದ ಮಕ್ಕಿ ಮನೆ ಬಳಗದ 60 ಜನ ಮಕ್ಕಳ ತಂಡದ ಭಾರತೀಯ ನೃತ್ಯ ವೈವಿ ಧ್ಯಮಯ ಕಾರ್ಯಕ್ರಮ ನೆರವೇರಿತು.

ಉತ್ಸವ 1008 ಭ| ಚಂದ್ರನಾಥ ಸ್ವಾಮಿಗೆ ಶ್ರೀ ಮಠದ ವತಿಯಿಂದ 108 ಕಲಶ ಅಭಿಷೇಕ, ಶ್ರೀ ಬಲಿ ಸರ್ವಾಹ್ನ ಯಕ್ಷ ವಿಹಾರ ಉತ್ಸವ ಮಹಾ ಮಂಗಳ.

ತುಳು ಲಿಪಿ ನಾಮಫಲಕ ಅನಾವರಣ
ರಾಜೇಶ್‌ ಆಳ್ವ, ತುಳು ವರ್ಲ್ಡ್ ನೀಡಿರುವ, “ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ, ಮೂಲ ಸಂಘ, ಕುಂದ ಕುಂದ ಅಮ್ನಾಯ ಸ್ಥಾಪನೆ ಜಗದ್ಗುರು ಅದ್ಯಶ್ರೀ ಚಾರುಕೀರ್ತಿ 1221 ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸಂಸ್ಥಾನ’ ಎಂದು ತುಳು ಲಿಪಿಯಲ್ಲಿ ಬರೆಯಲಾದ ನಾಮ ಫಲಕವನ್ನು ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅನಾವರಣ ಗೊಳಿಸಿ, ಮೆರವಣಿಗೆಯಲ್ಲಿ ಬಡಗ ಬಸದಿಯ ವರೆಗೆ ಒಯ್ದು ರಥೋತ್ಸವ ಧಾರ್ಮಿಕ ಸಭೆಯಲ್ಲಿ ಲೋಕಾರ್ಪಣೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next