Advertisement

Panaji: ಇ-ವಾಹನಗಳು ಹೆಚ್ಚಾದಂತೆ ಚಾರ್ಜಿಂಗ್‌ ಕೇಂದ್ರಗಳನ್ನೂ ಹೆಚ್ಚಿಸಲಾಗುವುದು: ಇಂಧನ ಸಚಿವ

03:39 PM Jun 10, 2023 | Team Udayavani |

ಪಣಜಿ: ಖಾಸಗಿ ಕಂಪನಿ ರಾಜ್ಯದಲ್ಲಿ 40 ವಾಹನ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಿದೆ. ಇ-ವಾಹನಗಳ ಸಂಖ್ಯೆ ಹೆಚ್ಚಾದಂತೆ ಅದರ ಚಾರ್ಜಿಂಗ್‌ ಕೇಂದ್ರಗಳೂ ಹೆಚ್ಚಾಗುತ್ತವೆ ಎಂದು ಇಂಧನ ಸಚಿವ ಸುದಿನ್ ಧವಳೀಕರ್ ಮಾಹಿತಿ ನೀಡಿದರು.

Advertisement

ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು-ಗೋವಾದಲ್ಲಿ ವಾಹನಗಳ ಸಂಖ್ಯೆ ಜನಸಂಖ್ಯೆಗೆ ಸರಿಸಮಾನವಾಗಿದ್ದರೂ ಇ-ವಾಹನಗಳ ಸಂಖ್ಯೆ ಕಡಿಮೆ ಎಂದರು.

ಚಾರ್ಜಿಂಗ್‌ ಸೆಂಟರ್ ಅನ್ನು ರಾಜ್ಯದ ಪ್ರತಿ ಪೆಟ್ರೋಲ್ ಪಂಪ್‍ಗಳಲ್ಲಿ ಪರಿಚಯಿಸಲು ಪ್ರಯತ್ನಿಸಲಾತ್ತಿದೆ. ಪ್ರತಿ ಚಾರ್ಜಿಂಗ್‌ ಸೆಂಟರ್ ಗೆ ಸುಮಾರು 20 ಲಕ್ಷ ರೂ. ವೆಚ್ಚವಾಗುವುದರಿಂದ ವಾಹನಗಳ ಸಂಖ್ಯೆ ಕಡಿಮೆ ಇರುವುದರಿಂದ ಈ ಕೇಂದ್ರಗಳನ್ನು ಸ್ಥಾಪಿಸಲು ಯಾರೂ ಮುಂದೆ ಬರುತ್ತಿಲ್ಲ. ಪ್ರಸ್ತುತ ಪ್ರತಿ ಕದಂಬ ಬಸ್ ನಿಲ್ದಾಣದಲ್ಲಿ ಚಾರ್ಜಿಂಗ್‌ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಇ-ವಾಹನಗಳ ಸಂಖ್ಯೆ ಹೆಚ್ಚಾದಂತೆ ಪ್ರತಿ ಪೆಟ್ರೋಲ್ ಪಂಪ್‍ನಲ್ಲಿ ಕೇಂದ್ರ ತೆರೆಯಲಾಗುವುದು. ಹೀಗಾಗಿ ಇ-ವಾಹನ ಚಾಲಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಪ್ರಸ್ತುತ, ಜನರು ಇ-ವಾಹನಗಳನ್ನು ಖರೀದಿಸುವತ್ತ ಒಲವು ತೋರುತ್ತಿದ್ದಾರೆ. ಯಾವುದೇ ಪ್ರಕೃತಿ ವಿಕೋಪದಿಂದ ವಿದ್ಯುತ್ ವ್ಯತ್ಯಯವಾದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ, ಆದರೆ ವಿದ್ಯುತ್ ಇಲಾಖೆಯ ಸಂಪೂರ್ಣ ವ್ಯವಸ್ಥೆಯು ಸವಾಲುಗಳನ್ನು ಎದುರಿಸಲು ಸಿದ್ಧವಾಗಿದೆ ಎಂದು ಹೇಳಿದರು.

ಲೈನ್‍ಮೆನ್‍ಗಳ ನೇಮಕಾತಿ!

Advertisement

ಮುಂಗಾರು ಪೂರ್ವ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ವಿದ್ಯುತ್ ವ್ಯತ್ಯಯ ತಪ್ಪಿಸಲು ಇಲಾಖೆಯ ಎಲ್ಲ ಸಿಬ್ಬಂದಿ ಹಾಗೂ ಯಂತ್ರೋಪಕರಣಗಳನ್ನು ಹಾಕಲಾಗಿದೆ. ಪ್ರಸ್ತುತ ಭೂಗತ ವಿದ್ಯುತ್ ಮಾರ್ಗ ನಿರ್ಮಾಣ ಹಂತದಲ್ಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 40 ಕೋಟಿ ರೂ.ಗಳ ಕಾಮಗಾರಿಗಳು ನಡೆಯುತ್ತಿವೆ. ವಿದ್ಯುತ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಆದ್ದರಿಂದ, ಆಗಸ್ಟ್ ವೇಳೆಗೆ ಸುಮಾರು 200 ರಿಂದ 250 ನೌಕರರು (ಲೈನ್‍ಮೆನ್) ಸೇವೆಯಲ್ಲಿರುತ್ತಾರೆ ಎಂದರು.

ಸೌರಶಕ್ತಿಗೆ ರಿಯಾಯಿತಿ

ಸೌರ ವಿದ್ಯುತ್ ಯೋಜನೆ ಮೂಲಕ ರಾಜ್ಯದಲ್ಲಿ ಸುಮಾರು 150 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಈ ಯೋಜನೆಯು ಪ್ರಸ್ತುತ 37 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ಮನೆಗೆ ಸೌರಶಕ್ತಿಗಾಗಿ ಅರ್ಜಿ ಸಲ್ಲಿಸುವವರಿಗೆ ಶೇ 50 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಈ ವಿನಾಯಿತಿಯು ಕೈಗಾರಿಕೀಕರಣಕ್ಕೆ ಅಲ್ಲ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next