ಚಾರ್ಜ್ ಶೀಟ್ ಎಂದರೆ ಪೋಲೀಸ್ ಭಾಷೆಯಲ್ಲಿ ತನಿಖಾ ವರದಿ. ಈಗ ಅದೇ ಹೆಸರಿನಲ್ಲಿ ಸಿನಿಮಾವೊಂದು ಸೆಟ್ಟೇರಿದೆ. ಒಂದು ಮರ್ಡರ್ ಮಿಸ್ಟ್ರಿ ಸುತ್ತ ನಡೆಯುವ ಸಸ್ಪೆನ್ಸ್, ಕ್ರೈಮ್ ಥ್ರಿಲ್ಲರ್ ಕಥಾಹಂದರ ಇಟ್ಟುಕೊಂಡು ಯುವ ಪ್ರತಿಭೆಗಳ ತಂಡವೊಂದು “ಚಾಜ್‌ಶೀಟ್’ ಹೆಸರಿನಲ್ಲಿ ಸಿನಿಮಾ ಮಾಡುತ್ತಿದೆ.
ಇತ್ತೀಚೆಗೆ ಈ ಚಿತ್ರ ಸೆಟ್ಟೇರಿದ್ದು, ಈ ಚಿತ್ರವನ್ನು ಡಾ. ಸುನೀಲ್ ಕುಂಬಾರ್ ಅವರು ನಿರ್ಮಿಸುತ್ತಿದ್ದು,ಕಥೆಯನ್ನು ಕೂಡ ಅವರೇ ಬರೆದಿದ್ದಾರೆ. ಜೊತೆಗೆಪಾತ್ರವೊಂದರಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಗುರುರಾಜ್ ಕುಲಕರ್ಣಿ ನಿರ್ದೇಶನ ಮಾಡುತ್ತಿದ್ದಾರೆ. ಬಾಲಾಜಿ ಶರ್ಮ,ಸಾಗರ್ ಹಾಗೂ ಚೈತ್ರಾ ಕೋಟೂರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ಮಾಪಕ ಸುನೀಲ್‌ಕುಂಬಾರ್, “ಲಾಕ್‌ಡೌನ್ ಸಂದರ್ಭದಲ್ಲಿ ಹುಟ್ಟಿದ ಕಥೆ ಇದಾಗಿದ್ದು, ವಿಶೇಷ ನಿರೂಪಣೆಯಿರುವ ಚಿತ್ರ. ಇದಾಗಿದೆ.ಸಿನಿಮಾ ನೋಡುತ್ತಿರುವವರಿಗೆ ಕಥೆ ಏನೆಂದು ಅರ್ಥವಾಗುತ್ತದೆ. ಆದರೆ ಅಲ್ಲಿರುವವರಿಗೆ ಏನು ನಡೆಯುತ್ತೆಂದು ಗೊತ್ತಿರುವುದಿಲ್ಲ. ಪಶ್ಚಿಮ ಬೆಂಗಾಳದ ಉಮಾ ಚಕ್ರಬೋರ್ತಿ ಹಾಗೂ ಚೆನ್ನೈನ ಎಸ್.ಆರ್.ರಾಜನ್ ನಾವು ಮೂರು ಜನ ನಿರ್ಮಾಪಕರು ಸೇರಿ ಈ ಚಿತ್ರ ಮಾಡುತ್ತಿದ್ದೇವೆ. ಇವರಿಗೆ ಕನ್ನಡ ಭಾಷೆ ಬರದಿದ್ದರೂ ಅಭಿಮಾನದಿಂದ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಆದರೆ ಸಂಪೂರ್ಣ ಕನ್ನಡದ ಕಲಾವಿದರೇ ಸೇರಿ ಮಾಡುತ್ತಿರುವ ಚಿತ್ರ’ ಎಂದು ವಿವರಿಸಿದರು.
ನಿರ್ದೇಶಕ ಗುರುರಾಜ್ ಕುಲಕರ್ಣಿ ಮಾತನಾಡಿ, “ಈ ಚಿತ್ರದ ಕಥೆ, ಟೈಟಲ್ ನಿರ್ಮಾಪಕರದ್ದು. ನಾನು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದೇನೆ. ಶಾಲಾಹುಡುಗಿಯೊಬ್ಬಳ ಕೊಲೆಯಾಗಿರುತ್ತದೆ. ಆ ಕೊಲೆಯತನಿಖೆಯ ಸುತ್ತ ನಡೆಯುವ ಕಥೆಯೇ ಚಾರ್ಜ್ ಶೀಟ್. ಉತ್ತರ ಕರ್ನಾಟಕದಲ್ಲಿ ಒಳ್ಳೊಳ್ಳೇ ಕಲಾವಿದರಿದ್ದು, ಬಹುತೇಕರನ್ನು ಚಿತ್ರದಲ್ಲಿ ಬಳಸಿಕೊಳ್ಳುತ್ತಿದ್ದೇವೆ’ ಎಂದು ಹೇಳಿದರು.
ನಾಯಕ ನಟ ಬಾಲಾಜಿ ಶರ್ಮ ಮಾತನಾಡಿ, “ಮೂಲತಃ ನಾನೊಬ್ಬ ಫೋಟೋಗ್ರಾಫರ್. ಹಲವಾರು ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದು, ಇದರಲ್ಲಿ ಪೊಲೀಸ್ ಪಾತ್ರ ಮಾಡುತ್ತಿದ್ದೇನೆ. ಈಹಿಂದೆ “ಸಾಮರ್ಥ್ಯ’ ಚಿತ್ರದಲ್ಲಿಸುನಿಲ್ ಅವರ ಜೊತೆ ಅಭಿನಯಿಸಿದೆ’ ಎಂದರು.
ನಾಯಕಿ ಚೈತ್ರಾ ಕೋಟೂರು ಪೊಲೀಸ್ ಇನ್ಸ್‌ಪೆಕ್ಟರ್‌ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಈ ಚಿತ್ರದಲ್ಲಿ 2ಫೈಟ್‌ಗಳನ್ನು ಸಂಯೋಜಿಸುತ್ತಿದ್ದಾರಂತೆ. ಚಿತ್ರಕ್ಕೆ ರಂಗಸ್ವಾಮಿ ಅವರ ಛಾಯಾಗ್ರಹಣ, ಎಂ.ತೀಥೋì ಅವರ ಸಂಗೀತ ಸಂಯೋಜನೆ ಇದೆ.