Advertisement
ಮೆಟ್ರೋಪಾಲಿಟನ್ ಪೊಲೀಸ್ ಸೇವೆ ಸಂಸ್ಥೆ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಆರು ವಾರಗಳ ಕಾಲ ಅವಧಿಯಲ್ಲಿ ಅಂದರೆ ಏಪ್ರಿಲ್ 19ರ ವರೆಗೆ ಕೌಟುಂಬಿಕ ದೌರ್ಜನ್ಯ ಪ್ರಕರಣದಡಿ ಒಟ್ಟು 4 ಸಾವಿರಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಆ ಮೂಲಕ ದೇಶದಲ್ಲಿ ಕೋವಿಡ್-19 ಬಿಕ್ಕಟ್ಟು ಪ್ರಾರಂಭವಾದಾಗಿನಿಂದ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಲಂಡನ್‌ನಲ್ಲಿ ಕೌಟುಂಬಿಕ ದೌರ್ಜನ್ಯ ಘಟನೆಗಳ ಪ್ರಮಾಣದಲ್ಲಿ ಶೇ.9 ರಷ್ಟು ಹೆಚ್ಚಾಗಿದೆ ಎಂದು ಪೊಲೀಸರು ತಿಳಿಸಿದ್ದು, 2019 ರಲ್ಲಿ 17,275 ಪ್ರಕರಣಗಳು ದಾಖಲಾಗಿದ್ದವು. ಆದರೆ ಪ್ರಸಕ್ತ ವರ್ಷದಲ್ಲಿ ಇದರ ಪ್ರಮಾಣ 18,800 ಕ್ಕಿಂತ ಹೆಚ್ಚಾಗಿದೆ. ನಿಯಮಗಳೇ ಮುಳುವು
ಸದ್ಯ ಎದುರಾಗಿರುವ ಸಾಂಕ್ರಾಮಿಕ ಪಿಡುಗನ್ನು ತಡೆಗಟ್ಟಲು ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಲಾಕ್‌ಡೌನ್ ನಿರ್ಬಂಧಗಳನ್ನು ಹೇರಿದ್ದು, ಮನೆಯಲ್ಲಿಯೇ ಇರುವಂತೆ ಸೂಚಿಸ ಲಾಗಿದೆ. ಇಷ್ಟು ದಿನ ಕೆಲಸ ಕಾರ್ಯ ಎಂದು ದಿನದ ಮುಕ್ಕಾಲು ಭಾಗ ಹೊರಗೆ ಕಳೆಯುತ್ತಿದ್ದ ದಂಪತಿ ಒಟ್ಟಿಗೆ ಸಮಯ ಕಳೆಯುತ್ತಿದ್ದಾರೆ. ಪರಿಣಾಮ ಸತಿ- ಪತಿಯರ ನಡುವೆ ಮನಸ್ತಾಪ ಹೆಚ್ಚುತ್ತಿದೆ. ದುರದೃಷ್ಟವಶಾತ್ ಇಂತಹ ವೇಳೆಯೇ ಕೌಟುಂಬಿಕ ದೌರ್ಜನ್ಯ, ಕಿರುಕುಳ ಮತ್ತಿತ್ತರ ಅಪರಾಧ ಪ್ರಕರಣಗಳು ದಾಖಲಾ ತಿಯೂ ಹೆಚ್ಚಾಗುತ್ತಿದ್ದು, ಇಂತಹ ಬೆಳವಣಿ ಗೆಯಾಗಲು ಲಾಕ್‌ಡೌನ್ ನಿಯಮಗಳೇ ಕಾರಣವಾಗುತ್ತಿದೆ ಎನ್ನುತ್ತಾರೆ ಕೆಲವರು.
Related Articles
ಗ್ರಾಮೀಣ ಪರಿಸರದ ಜನರು ಇದಕ್ಕೆಲ್ಲ ಹೊಂದಿಕೊಂಡಿದ್ದಾರೆ. ನಗರದ ಜನ ಮಾತ್ರ ಮೋಜು ಮಸ್ತಿಯಲ್ಲಿ ಕಾಲ ಕಳೆಯುತ್ತಿದ್ದು, ಈಗ ಮನೆಯೊಳಗೆ ಪರಸ್ಪರ ಹೊಂದಾಣಿಕೆ ಇಲ್ಲದೆ ಮನಸ್ತಾಪಗಳು ಹೆಚ್ಚಾಗುತ್ತಿವೆ ಎಂದು ವರದಿಯಾಗಿವೆ.
Advertisement