Advertisement

ನೀಲಿ ಸಿನಿಮಾ ನಿರ್ಮಾಣ ಪ್ರಕರಣ : ರಾಜ್ ಕುಂದ್ರಾ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆ

02:15 PM Sep 16, 2021 | Team Udayavani |

ಮುಂಬೈ : ನೀಲಿ ಸಿನಿಮಾ ನಿರ್ಮಾಣ ಪ್ರಕರಣದಡಿ ಬಂಧಿತರಾಗಿರುವ ಬಾಲಿವುಡ್ ನಟಿ ಶಿಲ್ಫಾ ಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ವಿರುದ್ಧ 1500 ಪುಟಗಳ ಚಾರ್ಜ್‍ಶೀಟ್‍ನ್ನು ಮುಂಬೈ ಪೊಲೀಸರು ಇಂದು (ಸೆ.16) ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

Advertisement

ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್‍ಐ ವರದಿಗಳ ಪ್ರಕಾರ ನ್ಯಾಯಾಲಯಕ್ಕೆ ಇಂದು ಸಲ್ಲಿಸಲಾಗಿರುವ ಸುಮಾರು 1500 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿ ಸೇರಿದಂತೆ 43 ಸಾಕ್ಷಿಗಳ ಹೇಳಿಕೆ ದಾಖಲಾಗಿದೆ. ನಟಿ ಶರ್ಲಿನ್ ಚೋಪ್ರಾ, ಸೆಜಲ್ ಶಾ ಹಾಗೂ ಸಾಕಷ್ಟು ಮಾಡೆಲ್ ಗಳು ಮತ್ತು ಕುಂದ್ರಾ ಕಂಪನಿಯ ಉದ್ಯೋಗಿಗಳ ಹೇಳಿಕೆಗಳು ಚಾರ್ಜ್‍ ಶೀಟ್‍ನಲ್ಲಿ ದಾಖಲಾಗಿವೆ. ಅದರ ಜೊತೆ ಮತ್ತಿಬ್ಬರ ಆರೋಪಿಗಳ ಹೆಸರುಗಳು ಕೂಡ ಚಾರ್ಜ್ ಶೀಟ್‍ನಲ್ಲಿ ಉಲ್ಲೇಖಗೊಂಡಿವೆ ಎಂದು ವರದಿಗಳು ತಿಳಿಸಿವೆ.

ನೀಲಿ ಸಿನಿಮಾ ನಿರ್ಮಾಣ ಹಾಗೂ ಆ್ಯಪ್‍ ಗಳ ಮೂಲಕ ಅವುಗಳ ಬಿಡುಗಡೆ ಆರೋಪದಲ್ಲಿ ರಾಜ್ ಕುಂದ್ರಾ ಅವರನ್ನು ಮುಂಬೈನ ಕ್ರೈಂ ಬ್ರ್ಯಾಂಚ್‍ನ ಪೊಲೀಸರು ಜುಲೈ 19 ರಂದು ಬಂಧಿಸಿದ್ದಾರೆ. ಸದ್ಯಕ್ಕೆ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ರಾಜ್ ಕುಂದ್ರಾ ಬಂಧನದ ಬಳಿಕ ಅವರ ಪತ್ನಿ ಶಿಲ್ಪಾ ಶೆಟ್ಟಿಯವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದರು. ಕುಂದ್ರಾ ವಿರುದ್ಧ ನಟಿ ಶರ್ಲಿನ್ ಚೋಪ್ರಾ ಅವರು ಬಹಿರಂಗ ಅರೋಪ ಮಾಡಿದರು. ಇದರ ಜೊತೆಗೆ ಹಲವು ಮಾಡೆಲ್‍ಗಳು ಕೂಡ ಈತನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next