ಮುಂಬಯಿ: ಚಾರ್‌ಕೋಪ್ ಕನ್ನಡಿಗರ ಬಳಗ ಕಾಂದಿವಲಿ ಇದರ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ಸೆ. 24ರಂದು ಬೆಳಗ್ಗೆಯಿಂದ ಚಾರ್‌ಕೋಪ್ ಸೆಕ್ಟರ್-6 ರಲ್ಲಿರುವ ಹರ್ಯಾಣ ಭವನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನೆರವೇರಿತು.
ಸಮಾರಂಭದಲ್ಲಿ ಸಂಸ್ಥೆಯ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಸ್ಥಳೀಯ ತುಳು-ಕನ್ನಡಪರ ಸಂಘಟನೆಗಳಾದ ಕರ್ನಾಟಕ ಸಂಘ ಮೀರಾರೋಡ್ ಅಧ್ಯಕ್ಷ ಉದಯ ಹೆಗ್ಡೆ ಎಲಿಯಾಳ, ವಸಾಯಿ ಕರ್ನಾಟಕ ಸಂಘದ ಅಧ್ಯಕ್ಷ ಓ. ಪಿ. ಪೂಜಾರಿ, ಸಂಸ್ಥೆಯಲ್ಲಿ ವಿಶೇಷ ಸಾಧನೆಗೈದ ಸದಸ್ಯರು ಮತ್ತು ಬಳಗದ ಹಿತೈಷಿಗಳಾದ ಪತ್ತನಾಜೆ ತುಳುಚಲನಚಿತ್ರದ ನಾಯಕಿ ರೇಷ್ಮಾ ಶೆಟ್ಟಿ, ರಂಗನಿರ್ದೇಶಕ, ಕಲಾಜಗತ್ತು ವಿಜಯಕುಮಾರ್ ಶೆಟ್ಟಿ, ಪುರೋಹಿತ, ಸಮಾಜ ಸೇವಕ ಧನಂಜಯ ಶಾಂತಿ ಅವರನ್ನು ಗಣ್ಯರು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ಗೌರವಿಸಿ ಶುಭಹಾರೈಸಿದರು.
ವಾರ್ಷಿಕ ಅಡ್ಯಾರು ನಡಿಗುತ್ತು ತಿಮ್ಮಪ್ಪ ಶೆಟ್ಟಿ ಸ್ಮಾರಕ ಪ್ರಶಸ್ತಿಯನ್ನು ಸಾಂತಾಕ್ರೂಜ್ ಕನ್ನಡ ಸಂಘದ ಅಧ್ಯಕ್ಷ, ಸಮಾಜ ಸೇವಕ, ಧಾರ್ಮಿಕ ಮತ್ತು ರಾಜಕೀಯ ಧುರೀಣ ಎಲ್. ವಿ. ಅಮೀನ್, ಕೆ. ಕೆ. ಸುವರ್ಣ ಸ್ಮಾರಕ ಪ್ರಶಸ್ತಿಯನ್ನು ಹಿರಿಯ ರಂಗ ನಟ, ನಿರ್ದೇಶಕ ಸುಂದರ ಮೂಡಬಿದ್ರೆ, ಭಾರತಿ ಕೊಡ್ಲೆಕರ್ ಸ್ಮಾರಕ ಪ್ರಶಸ್ತಿಯನ್ನು ರಂಗನಟಿ ರೂಪಾ ವಿ. ಭಟ್ ಅವರಿಗೆ ಗಣ್ಯರ ಸಮ್ಮುಖದಲ್ಲಿ ಪ್ರದಾನಿಸಲಾಯಿತು. ಪ್ರಶಸ್ತಿಯು ಶಾಲು, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನೊಳಗೊಂಡಿತ್ತು.
ಸಮಾರಂಭದಲ್ಲಿ ತುಳು-ಕನ್ನಡಪರ, ಜಾತೀಯ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳಾದ ಪದ್ಮನಾಭ ಎಸ್. ಪಯ್ಯಡೆ, ಸುರೇಂದ್ರ ಕುಮಾರ್ ಹೆಗ್ಡೆ, ಮುಂಡಪ್ಪ ಎಸ್. ಪಯ್ಯಡೆ, ವಿಜಯ ಆರ್. ಭಂಡಾರಿ, ಸಂಜೀವ ಶೆಟ್ಟಿ, ಭಾರತಿ ಕೊಡ್ಲೆàಕರ್ ಪುತ್ರರಾದ ನಾಗರಾಜ್, ವಿವೇಕ್, ಹರೀಶ್ ಎನ್. ಶೆಟ್ಟಿ, ಕರುಣಾಕರ ಕಾಪು, ಸುರೇಶ್ ಶೆಟ್ಟಿ ಕೇದಗೆ, ಸುಕುಮಾರ್ ಶೆಟ್ಟಿ, ದೇವದಾಸ್ ಕುಲಾಲ್, ಶಾಂತಾ ಭಟ್, ಪಯ್ನಾರು ರಮೇಶ್ ಶೆಟ್ಟಿ, ಯಶವಂತ ದೇವಾಡಿಗ, ಕೃಷ್ಣ ಜಿ. ಶೆಟ್ಟಿ ಅವರನ್ನು ಬಳಗದ ವತಿಯಿಂದ ಗೌರವಿಸಲಾಯಿತು. ಸಮಾರಂಭದಲ್ಲಿ ಗಣ್ಯರು, ಅತಿಥಿಗಳು, ಬಳಗದ ಪದಾಧಿಕಾರಿಗಳು, ವಿಶ್ವಸ್ಥರು, ಉಪಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಚಿತ್ರ-ವರದಿ : ರಮೇಶ್ ಉದ್ಯಾವರ