Advertisement
ಚಾರ್‌ಕೋಲ್ ಮಾಸ್ಕ್ ಚರ್ಮದ ಕಾಳಜಿ ಮಾಡುತ್ತದೆ. ಚರ್ಮದಲ್ಲಿರುವ ಕಲ್ಮಶಗಳನ್ನು, ರಂಧ್ರಗಳನ್ನು ಮುಚ್ಚಿ ಹಾಕುತ್ತದೆ. ಈ ಮಾಸ್ಕ್ ನಮ್ಮ ಚರ್ಮದಲ್ಲಿನ ಎಣ್ಣೆ ಅಂಶವನ್ನೂ ನಿಯಂತ್ರಿಸುತ್ತದೆ. ಮುಖದಲ್ಲಿನ ಬ್ಲ್ಯಾಕ್ ಹೆಡ್ಸ್ ಮತ್ತು ಮೊಡವೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಚರ್ಮದಿಂದ ಬ್ಯಾಕ್ಟೀರಿಯಾ, ಜೀವಾಣು, ಕೊಳಕು ಮತ್ತು ಎಣ್ಣೆಯನ್ನು ಈ ಮಾಸ್ಕ್ ನಿವಾರಿಸುತ್ತ¤ದೆ. ಚರ್ಮದಲ್ಲಿನ ಸತ್ತ ಜೀವಕೋಶಗಳನ್ನು ತೆಗೆದು ಹಾಕಿ ಹೊಳೆಯುವಂತೆ ಮಾಡುತ್ತದೆ.
Related Articles
ಚಾರ್‌ಕೋಲ್ ಮಾಸ್ಕ್ನ್ನು ನೀವೇ ಮನೆಯಲ್ಲಿ ತಯಾರಿಸಿ ಕೊಳ್ಳಬಹುದು. ನಿಮಗೆ ಬೇಕಾಗು ವುದು ಒಂದು ಟೀ ಸ್ಪೂನ್ ಇದ್ದಿಲು ಪುಡಿ, ಒಂದು ಟೀ ಸ್ಪೂನ್ ಬೆಂಟೋನೈಟ್ ಜೇಡಿಮಣ್ಣು, ಒಂದು ಚಿಟಿಕೆ ಅಡುಗೆ ಸೋಡಾ ಮತ್ತು ಒಂದು ಟೀ ಸ್ಪೂನ್ ತೆಂಗಿನ ಎಣ್ಣೆ. ಇವುಗಳನ್ನು ಒಂದು ಬಟ್ಟಲಿನಲ್ಲಿ ಸೇರಿಸಿ, ಪೇಸ್ಟ್ ತಯಾರಿಸಿ. ನಂತರ ಈ ಪೇಸ್ಟ್ ಅನ್ನು ಬ್ರಷ್‌ನಿಂದ ಮುಖಕ್ಕೆ ಹಚ್ಚಿ 10 ನಿಮಿಷಗಳ ಕಾಲ ಬಿಡಿ. ನಂತರ ನಿಮ್ಮ ಮುಖವನ್ನು ತೊಳೆಯಿರಿ.
Advertisement