Advertisement

ವಿವಿಧ ರಂಗಗಳ ಸಾಧಕ ಬಹುಮುಖ ಪ್ರತಿಭೆ ಚರಣ್‌ರಾಜ್‌

12:14 AM Jul 13, 2019 | mahesh |

ಬದುಕಿನಲ್ಲಿ ನಡೆಯುವ ಘಟನೆ, ಯಾರದೋ ಅಗಮನ ಅಥವಾ ಸಮಯ ನಮ್ಮ ಬದುಕಿನ ಪಥವನ್ನೇ ಬದಲಿಸಿಬಿಡುತ್ತದೆ. ಅದು ಸಾಧನೆಯ ಶಿಖರವನ್ನೇರುಲು ಪ್ರೇರಣೆಯಾಗಬಹುದು ಅಥವಾ ಬದುಕಿನ ಅಂತ್ಯಕ್ಕೆ ನಾಂದಿಯೂ ಅಗಬಹುದು. ಯಶಸ್ಸಿನ ಹಾದಿ ಸುಲಭವಾಗಿರುವುದಿಲ್ಲ. ಅಲ್ಲಿ ಸಾಲು ಸಾಲು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸೋತಾಗ ಮತ್ತೆ ಮುನ್ನುಗುವ ಛಲವಿರಬೇಕು.

Advertisement

ಚರಣ್‌ ರಾಜ್‌ ಕೆ.ಸಿ. ಅವರು ಬಹುಮುಖ ಪ್ರತಿಭೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ತುಡಿತ ಹೊಂದಿದ್ದ ಅವರು ಚಿತ್ರಕಲೆ, ಹಾಡು ಕೇಳುವುದು, ಸಂಗೀತ ವಾದ್ಯಗಳಲ್ಲದೆ ತಬಲ, ನೃತ್ಯ, ಅಭಿನಯದಲ್ಲಿ ಆಸಕ್ತಿ ಹೊಂದಿದ್ದರು. ಇದರಲ್ಲಿ ಹಲವಾರು ವಿಶೇಷ ಸಾಧನೆಯನ್ನು ಮಾಡಿದ್ದಾರೆ. ರಾಜ್ಯಮಟ್ಟದ ಚಿತ್ರಕಲೆ, ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ವಿದ್ಯಾಭ್ಯಾಸದಲ್ಲೂ ರ್‍ಯಾಂಕ್‌ ಪಡೆದಿದ್ದಾರೆ. ಡಾನ್ಸ್‌ನಲ್ಲಿ ತನ್ನ ಪ್ರತಿಭೆಯನ್ನು ಮೆರೆದು ಕೀರ್ತಿ ಪಡೆದುಕೊಂಡಿರುವ ಅವರು ತನ್ನ ತಂದೆಯನ್ನೇ ತಬಲ ಗುರುಗಳಾಗಿ ಸ್ವೀಕರಿಸಿಕೊಂಡು ಕರ್ನಾಟಕ್‌ ಮತ್ತು ಶಾಸ್ತ್ರಿಯ ಪ್ರಕಾರಗಳ ತಬಲವನ್ನು ಕಲಿತು ಹಲವಾರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಬಲವನ್ನು ನುಡಿಸಿದ್ದಾರೆ. ಮ್ಯೂಸಿಕ್‌ ಅಕಾಡೆಮಿ ಕಡೆಯಿಂದ ಹಲವಾರು ಕಡೆಗಳಲ್ಲಿ ತಬಲ ಹಾಗೂ ಗಿಟಾರ್‌ ಅನ್ನು ಪ್ರದರ್ಶಿಸಿ ತಮ್ಮ ಪ್ರತಿಭೆಯನ್ನು ಬಿತ್ತರಿಸುತ್ತಿದ್ದಾರೆ.

ಆತ್ಮಸ್ಥೈರ್ಯ ನಮ್ಮಲ್ಲಿರಲಿ
ನಿರಂತರ ಶ್ರಮದಿಂದ ಮುಂದೆ ಹೋದರೆ ಒಂದಲ್ಲ ಒಂದು ದಿನ ಯಶಸ್ಸು ನಮ್ಮನ್ನೆ ಹುಡುಕಿಕೊಂದು ಬರುವುದು ಮಾತ್ರ ಸುಳ್ಳಲ್ಲ. ಸೋತಾಗ ಎದೆಗುಂದದೆ ಮುನ್ನಡೆಯುವ ಆತ್ಮಸ್ಥೆರ್ಯ ನಮ್ಮದಾಗಬೇಕು. ಇವರು ಸ್ವಂತ ಆಸಕ್ತಿಯಿಂದ ಕನ್ನಡಿಯನ್ನೆ ತನ್ನ ಗುರುವಾಗಿ ಸ್ವೀಕರಿಸಿಕೊಂಡು ಇಷ್ಟದಿಂದ ಕಷ್ಟಪಟ್ಟು ಹಿಪ್‌-ಹಾಪ್‌, ಕಂಟೆಂಪೆರರಿ, ಬಾಲಿವುಡ್‌, ವೆಸ್ಟರ್ನ್, ಲಾಕ್‌ ಆ್ಯಂಡ್‌ ಪಾಪ್‌, ಫೋಕ್‌, ಫ್ರೀಸ್ಟೈಲ್‌ ಮೊದಲಾದ ನೃತ್ಯ ಪ್ರಕಾರವನ್ನು ಕಲಿತುಕೊಂಡಿದ್ದಾರೆ. ಚರಣ್‌ರಾಜ್‌ 5ನೇ ವರ್ಷದಲ್ಲಿಯೇ ರಂಗ ವೇದಿಕೆ ಏರಿ ತಮ್ಮ ಕೀರ್ತಿಯನ್ನು ಪಸರಿಸಿ, ಇದುವರೆಗೆ ಮಡಿಕೇರಿ ಸುಳ್ಯ ಹಾಗೂ ಪುತ್ತೂರಿನಲ್ಲಿ ಸುಮಾರು 100ಕ್ಕೂ ಅಧಿಕ ಶಾಲೆಗಳಿಗೆ ನೃತ್ಯ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಸತತ 3ರಿಂದ 4 ವರ್ಷ ತರಬೇತುದಾರರಾಗಿ ಕೆಲಸ ಮಾಡಿದ ಅನುಭವವಿದೆ.

ಚಾನೆಲ್‌ನಲ್ಲೂ ಪ್ರದರ್ಶನ
ಮೂರ್ನಾಡುವಿನಲ್ಲಿ ತನ್ನದೇ ಡಾನ್ಸ್‌ ಕ್ಲಾಸ್‌ ಅನ್ನು ಪ್ರಾರಂಭಿಸಿದ್ದಾರೆ. ವಸಂತ್‌ ಕಾರ್ಯತೋಡಿ ಅವರ ನೇತೃತ್ವದಲ್ಲಿ ಫ್ಯೂಶನ್‌ ಡಾನ್ಸ್‌ ಕ್ರೂ ಸುಳ್ಯದಲ್ಲಿ ಡಾನ್ಸ್‌ ಕ್ಲಾಸ್‌ ಅನ್ನು ಪ್ರಾರಂಭಿಸಿ ಅವರದೇ ಸಹಭಾಗಿತ್ವದಲ್ಲಿ ಕಲರ್‌ ಸೂಪರ್‌ ಚಾನೆಲ್‌ನಲ್ಲಿ ಪ್ರಸಾರವಾದ ಮಾಸ್ಟರ್‌

ಡ್ಯಾನ್ಸ್‌ರ್‌ ರಿಯಾಲಿಟಿ ಶೋನಲ್ಲಿ ಸುಳ್ಯದ ವಿದ್ಯಾರ್ಥಿನಿ ಮೊನಿಶಾ ಅವರಿಗೆ ತರಬೇತಿ ನೀಡಿ ಸೆಮಿಫೈನಲ್‌ ಸ್ವರ್ಧಿಯಾಗಿ ಉತ್ತಮ ಪ್ರದರ್ಶನವನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅದೇ ಚಾನೆಲ್‌ನಲ್ಲಿ ಪ್ರಸಾರವಾದ ಮಜಾಭಾರತ ಎನ್ನುವ ಶೋನಲ್ಲಿ ತಮ್ಮ ಅಭಿನಯದ ಹೊಳಪನ್ನು ಮೂಡಿಸಿದ್ದಾರೆ. ಪ್ರಸ್ತುತ ಅವರು ಬೆಂಗಳೂರಿನಲ್ಲಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

Advertisement

ನೃತ್ಯ ನಿರ್ದೇಶಕರಾಗಿ ಆಯ್ಕೆ
ಅವರಿಗೆ ಈಗಲೇ ಧಾರಾವಾಹಿ, ಸಿನೆಮಾ ಹಾಗೂ ರಿಯಾಲಿಟಿ ಶೋಗಳಿಂದ ಅವಕಾಶಗಳು ಒದಗಿ ಬಂದಿದ್ದು, ಎರಡು ಕಾಮಿಡಿ ಶೋಗಳಲ್ಲಿ ಅಭಿನಯಿಸಿದ್ದಾರೆ. ಅದು ಚಂದನ ಚಾನೆಲ್‌ನ ವೀಕೆಂಡ್‌ ಕಾಮಿಡಿ ಹಾಗೂ ಆಯುಷ್‌ ಚಾನೆಲ್‌ನ ತರೆಲ ನನ್‌ ಮಕ್ಳು ಶೋನಲ್ಲಿ ಅಭಿನಯಿಸಿದ್ದಾರೆ. ಈ ಶೋಗಳು ಸದ್ಯದಲ್ಲೇ ತೆರೆಗೆ ಬರಲಿದೆ. ಹಾಗೆಯೇ 2ರಿಂದ 3 ಸಿನೆಮಾಗಳಿಗೆ ನೃತ್ಯ ನಿರ್ದೇಶಕನಾಗಿ ಆಯ್ಕೆಯಾಗಿದ್ದಾರೆ.

ನಟನೆ ಆಸಕ್ತಿಯ ಕ್ಷೇತ್ರ
ಸ.ಹಿ.ಪ್ರಾ. ಶಾಲೆ ಮೂರ್ನಾಡುವಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಪಡೆದು ಪದವಿ ಪೂರ್ವ ಶಿಕ್ಷಣವನ್ನು ಮೂರ್ನಾಡುವಿನಲ್ಲಿಯೇ ಮುಗಿಸಿದ್ದಾರೆ. ತನ್ನ ಮಗ ಇಷ್ಟಪಡುವ ಕ್ಷೇತ್ರಕ್ಕೆ ಹೊಗಿ ಹೆಜ್ಜೆ ಗುರುತನ್ನು ಪರಿಚಯಿಸಬೇಕು ಎಂದು ತಂದೆ, ತಾಯಿ ಆಸೆ ಕೂಡ ಆಗಿದೆ. ಅವರು ಮಡಿಕೇರಿಯ ಮೂರ್ನಾಡುವಿನಲ್ಲಿ ತಬಲ ನುಡಿಸುವ, ತರಬೇತುದಾರ ಚಂದ್ರ ಮತ್ತು ನಳಿನಿ ದಂಪತಿ ಪುತ್ರ. ಅವರಿಗೆ ನೃತ್ಯ ನಿರ್ದೇಶಕ ಆಗುವ ಆಸೆ, ಚಿಕ್ಕ ವಯಸ್ಸಿನಲ್ಲಿಯೇ ಡ್ಯಾನ್ಸ್‌ ಹಾಗೂ ನಟನಾ ಕ್ಷೇತ್ರಗಳು ತುಂಬಾ ಇಷ್ಟ ಹಾಗೂ ಆಸಕ್ತಿದಾಯಕ ಕ್ಷೇತ್ರ. ಈಗಾಗಲೇ ಕೆಲವೊಂದು ಅವಕಾಶಗಳು ಒದಗಿ ಬಂದಿದೆ. ಭವಿಷ್ಯದಲ್ಲಿ ಅತ್ಯುತ್ತಮ ನೃತ್ಯ ನಿರ್ದೇಶಕ ಆಗುವ ಆಸೆ ಹೊತ್ತಿರುವ ಅವರಿಗೆ ಇನ್ನೂ ಅವಕಾಶ ಒದಗಿಬರಲಿ.

– ಕೀರ್ತಿ, ಪುರ, ಪತ್ರಿಕೋದ್ಯಮ ವಿದ್ಯಾರ್ಥಿನಿ
ಸಂತ ಫಿಲೋಮಿನ ಕಾಲೇಜು ದರ್ಬೆ, ಪುತ್ತೂರು.

Advertisement

Udayavani is now on Telegram. Click here to join our channel and stay updated with the latest news.

Next