Advertisement

ಏಡ್ಸ್‌ ಜಾಗೃತಿ ಜಾಥಾಕ್ಕೆ ಚರಂತಿಮಠ ಚಾಲನೆ

01:11 PM Dec 02, 2019 | Suhan S |

ಬಾಗಲಕೋಟೆ: ವಿಶ್ವ ಏಡ್ಸ್‌ ದಿನದ ಅಂಗವಾಗಿ ಸಮುದಾಯಗಳು ವ್ಯತ್ಯಾಸವನ್ನುಂಟು ಮಾಡುತ್ತವೆ ಎಂಬ ಘೋಷ ವಾಕ್ಯದೊಂದಿಗೆ ಹಮ್ಮಿಕೊಂಡಜಾಗೃತಿ ಜಾಥಾಕ್ಕೆ ಬಾಗಲಕೋಟೆ ಶಾಸಕಡಾ| ವೀರಣ್ಣ ಚರಂತಿಮಠ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

Advertisement

ರವಿವಾರ ರಾಜ್ಯ ಏಡ್ಸ್‌ ಪ್ರಿವೆನಷನ್‌ ಸೊಸೈಟಿ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಏಡ್ಸ್‌ಪ್ರತಿಬಂಧಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಜಾಗೃತಿ ಜಾಥಾ ಜಿಲ್ಲಾ ಆಸ್ಪತ್ರೆಯ ಆವರಣದಿಂದಪ್ರಾರಂಭವಾಗಿ ಮುಖ್ಯರಸ್ತೆ ಮೂಲಕನಗರಸಭೆ, ಎಸ್‌ಬಿಐ ಬ್ಯಾಂಕ್‌, ಎಲ್‌ಐಸಿ ವೃತ್ತ, ಪೊಲೀಸ್‌ ಪ್ಯಾಲೇಸ್‌, ನವನಗರ ಬಸ್‌ ನಿಲ್ದಾಣ ಮಾರ್ಗವಾಗಿ ಸಂಚರಿಸಿ ಜಿಲ್ಲಾಡಳಿತಭವನಕ್ಕೆ ಮುಕ್ತಾಯಗೊಂಡಿತು.

ಜಾಥಾದಲ್ಲಿ ಸಜ್ಜಲಶ್ರೀ ನರ್ಸಿಂಗ್‌ ಮಹಾವಿದ್ಯಾಲಯ, ಪಿ.ಎನ್‌. ಎಂ.ಎನ್‌ ದಂತ ವೈದ್ಯಕೀಯ ಮಹಾವಿದ್ಯಾಲಯ, ಅರುಣೋದಯಪ್ಯಾರಾ ಮೆಡಿಕಲ್‌ ಕಾಲೇಜ, ಬಸವೇಶ್ವರ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ಜಿಲ್ಲಾ ಆಸ್ಪತ್ರೆಯ ಪ್ಯಾರಾ ಮೆಡಿಕಲ್‌ಕಾಲೇಜ, ಕಿರಿಯ ಮಹಿಳಾ ಆರೋಗ್ಯಸಹಾಯಕಿಯರ ತರಬೇತಿ ಕೇಂದ್ರ, ಆಯುರ್ವೇಧ ಮಹಾವಿದ್ಯಾಲಯ ಹೋಮಿಯೋಪತಿ ಮಹಾವಿದ್ಯಾಲಯ ಸೇರಿದಂತೆ ಇತರೆ ಕಾಲೇಜಿನ ಒಟ್ಟು ಅಂದಾಜು 500 ವಿದ್ಯಾರ್ಥಿಗಳುಪಾಲ್ಗೊಂಡಿದ್ದರು. ಜಾಥಾದುದ್ದಕ್ಕೂ ಘೋಷಣೆ ಕೂಗಿದರು.

ಜಾಥಾ ಕಾರ್ಯಕ್ರಮದ ಮಧ್ಯದಲ್ಲಿ ನರೇನೂರಿನ ಸಂಗನಬಸಯ್ಯ ಹಿರೇಮಠ ಗೀಗೀ ಪದ ತಂಡವು ಎಚ್‌ಐವಿ ಏಡ್ಸ್‌ ಕುರಿತು ಜಾಗೃತಿ ಗೀತೆಗಳನ್ನು ಹಾಡಿದರು.ಎಲ್‌ಐಸಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು. ಇದೇ ಸಂದರ್ಭದಲ್ಲಿ ಎಚ್‌ಐವಿ ಏಡ್‌ ಕುರಿತು ಡಿ. 2ಮತ್ತು3ರಂದು ಹಮ್ಮಿಕೊಂಡ ಮನೆ ಮನೆ ಸಮಗ್ರ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಜಾಗೃತಿ ಜಾಥಾದಲ್ಲಿ ಜಿಪಂ ಸಿಇಒ ಗಂಗೂಬಾಯಿ ಮಾನಕರ, ಜಿಪಂ ಜಿಲ್ಲಾ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಸುಜಾತಾ ಸಿಂಗಾಡೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಅನಂತ ದೇಸಾಯಿ, ಜಿಲ್ಲಾ ಶಸ್ತ್ರ ಚಿಕಿತ್ಸಕಡಾ| ಪ್ರಕಾಶ ಬಿರಾದಾರ, ಡಾ| ಬಿ.ಜಿ.ಹುಬ್ಬಳ್ಳಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ|ಜಯಶ್ರೀ ಎಮ್ಮಿ, ಜಿಲ್ಲಾ ಕುಷ್ಟರೋಗನಿಯಂತ್ರಣಾಧಿಕಾರಿ ಡಾ|ಕುಸುಮಾಮಾಗಿ ಸೇರಿದಂತೆ ರೆಡ್‌ಕ್ರಾಸ್‌ ಸಂಸ್ಥೆ, ಚೈತನ್ಯ ಮಹಿಳಾ ಸಂಘ, ಮಿಲನ ಸಂಘ, ಕೆಎಚ್‌ಪಿಟಿ, ವಿಹಾನ ಸಿಎಸ್‌ಸಿಯೋಜನೆಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next