ಫ್ಯಾಶನ್ ಲೋಕದಲ್ಲಿ ದಿನೇ ದಿನ ಹೊಸ ಹೊಸ ರೀತಿಯ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ. ಅದಕ್ಕೆ ತಕ್ಕಂತೆ ಫ್ಯಾಶನ್ ಪ್ರಿಯರು ಕೂಡ ಬಗೆಬಗೆಯ ಉಡುಗೆಗೆ ಬೇಡಿಕೆ ಇಡುತ್ತಿರುತ್ತಾರೆ. ಇದಕ್ಕೆ ಪೂರಕ ವೆಂಬ ಹಾಗೆ ಅಕ್ಷರ ಮಾಲೆಗಳು ಸೀರೆಗಳ ಮೇಲೆ ಮೂಡಲಾರಂಭಿ ಸಿದ್ದು ಹೆಂಗಳೆಯರ ಮನ ಗೆದ್ದಿವೆ.
ಟೀ ಶರ್ಟ್‌ಗಳಲ್ಲಿ ಸ್ಲೋಗನ್‌ಗಳಿರುವುದು ಸಾಮಾನ್ಯ. ಆದರೆ ಇದು ಈಗ ಸೀರೆಯ ಮೇಲೂ ಮೂಡಲಾರಂಭಿಸಿದೆ. ಆಲ್ಫಾ ಬೆಟ್ ಪ್ರಿಂಟ್ ಎಂದೇ ಕರೆಯಲ್ಪಡುವ ಈ ಸೀರೆಗಳು ಕಾಟನ್, ನೈಲಾನ್ ಮತ್ತು ಸಿಥೆಂಟಿಕ್ ಮಟಿರಿಯಲ್‌ಗಳಲ್ಲಿ ಹೆಚ್ಚಾಗಿ ಲಭ್ಯವಿದ್ದು, ಜರಿತಾರಿ ಸೀರೆ ಪ್ರಿಯರು ಇದರ ಮೇಲೆಯೂ ತಮಗಿಷ್ಟವಾಗಿರುವ ಕೋಟ್ಸ್ ಅನ್ನು ಬರೆಸಿಕೊಳ್ಳುತ್ತಿದ್ದಾರೆ.
ವಿವಿಧ ಭಾಷೆ
ಕೇವಲ ಕನ್ನಡ ಇಂಗ್ಲಿಷ್ ಎನ್ನದೆ ಹಲವು ಭಾಷೆಗಳ ಅಕ್ಷರಗಳು ಸೀರೆಯ ಮೇಲೆ ಮೂಡಿದೆ. ಸಂದ ರ್ಭಕ್ಕೆ ತಕ್ಕ ಹಾಗೆ ಅಥವಾ ಇಚ್ಛೆಗನುಗುಣವಾಗಿ ಇದನ್ನು ತೊಟ್ಟುಕೊಳ್ಳ ಬಹುದಾಗಿದೆ. ಸಂಗೀತ, ಕಲೆ, ಸಾಹಿತ್ಯಾಸ ಕ್ತರು ಸೀರೆಗಳ ಮೇಲೆ ತಮ್ಮಿಷ್ಟದ ಭಾಷೆಗಳಲ್ಲಿ ಕುಸುರಿಗಳನ್ನು ಮಾಡಿಸಿ ಕೊಳ್ಳಬಹುದಾಗಿದ್ದು, ಸಿಂಪಲ್ ಡಿಸೈನ್, ಎಂಬ್ರಾಯರಿ ವರ್ಕ್ ಗಳಿಂದ ಹೇಳಿ ಮಾಡಿಸಿಕೊಳ್ಳಬಹುದು.
ಸ್ವರ್ಣದ ಉಡುಗೆ
ಪ್ಲೆ„ನ್ ಸೀರೆಗಳು ಮಾತ್ರವಲ್ಲ ದೊಡ್ಡ ದೊಡ್ಡ ಪಟ್ಟೆ ಸೀರೆಗಳ ಮೇಲೂ ಸ್ವರ್ಣದಿಂದ ಘೋಷವಾಕ್ಯಗಳನ್ನು ಬರೆಸಿಕೊಳ್ಳುತ್ತಿದ್ದು ವಿನ್ಯಾಸಕರು ಇದಕ್ಕೆ ಕಡಿಮೆ ಇಲ್ಲವೆಂಬಂತೆ ಅತ್ಯುತ್ತಮ ಹಾಗೂ ವಿಭಿನ್ನ ಕಲಾಕೃತಿಯಲ್ಲಿ ಅಕ್ಷರಗಳನ್ನು ಮೂಡಿಸುತ್ತಿದ್ದಾರೆ. ಇತ್ತೀಚೆಗೆ ಮದುವೆಗಳಿಗೆಂದೇ ಸೀರೆಗಳ ಮೇಲೆ ಚಿನ್ನದ ದಾರದಲ್ಲಿ ಸೆರಗು ಬಾರ್ಡರ್‌ಗಳ ಮೇಲೆ ಸ್ಲೋಗನ್ ಬರೆಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಬೆಳ್ಳಿ ನೂಲುಗಳಲ್ಲಿ ಕೂಡ ಬರೆಸುತ್ತಿದ್ದು, ಇದು ಸೀರೆಗೆ ಗ್ರ್ಯಾಂಡ್ ಲುಕ್ ಕೊಡುತ್ತಿದೆ. ಇತ್ತೀಚೆಗೆ ದೀಪಿಕಾ ಪಡುಕೋಣೆ ತಮ್ಮ ಮದುವೆ ಸೀರಿಯಲ್ಲಿ “ಸದಾ ಸೌಭಾಗ್ಯವತೀ ಭವ’ ಎಂಬ ಆಶೀರ್ವಚನ ಮಂತ್ರವನ್ನು ಬರೆದಿದ್ದು, ಎಲ್ಲರ ಆಕರ್ಷಣೆಗೆ ಕಾರಣವಾಗಿತ್ತು.
ಇಂಥ ಸೀರೆ ಗಳು ಆನ್ ಲೈನ್‌ಗಳಲ್ಲಿ ಲಭ್ಯ ವಿದೆ. ಸಾವಿರ ರೂ. ನಿಂದ ಆರಂಭವವಾಗಿ ಲಕ್ಷಾಂತರ ರೂ. ಬೆಲೆ ಬಾಳುವ ಸೀರೆಗಳು ಲಭ್ಯವಿವೆೆ. ಜರಿತಾರಿ ಸೀರೆಗಳಲ್ಲಿ ಅಕ್ಷರ ಮಾಲೆಗಳು ಬರುವುದು ಕಡಿಮೆ. ಇದು ದುಬಾರಿಯೂ ಆಗಿದೆ. ಹೀಗಾಗಿ ಸೀರೆ ತಯಾರಿಸುವವರಲ್ಲಿ ಹೇಳಿದರೆ ನಮಗೆ ಪ್ರಿಯವಾದ ಸ್ಲೋಗನ್‌ಗಳನ್ನು ಸೀರೆಯ ಮೇಲೆ ಬರೆಸಬಹುದು.
ತಾರೆ ಯರಿಗೂ ಇಷ್ಟ ಈಗ ಅತಿ ಹೆಚ್ಚು ಬೇಡಿಕೆಯಲ್ಲಿರುವ ಇಂಥ ಸೀರೆಯನ್ನು ಸಿನೆಮಾತಾರೆಯರೂ ಕೂಡ ಮೆಚ್ಚಿಕೊಂಡಿದ್ದು ಪಾರ್ಟಿ, ಸಿನೆಮಾ ಪ್ರಮೋಶನ್, ಮದುವೆ ಸಮಾರಂಭಗಳಲ್ಲಿ ಇಂಥ ಸೀರೆ ತೊಟ್ಟು ಮಿಂಚುತ್ತಿದ್ದಾರೆ. ಅದಲ್ಲದೆ ಕೆಲ ವರು ಇಷ್ಟ ಪಟ್ಟು ಸ್ಲೋಗನ್ ಮತ್ತು ವಾಕ್ಯಗಳನ್ನು ಬರೆಸಿಕೊಂಡಿರುವುದು ಸಾಮಾನ್ಯರಿಗೂ ಅಚ್ಚರಿ ಮೂಡಿಸುವಂತೆ ಮಾಡುತ್ತಿದೆ.
ಟೀ ಶರ್ಟ್‌ಗಳಲ್ಲಿದ್ದ ಅಕ್ಷರ ಮಾಲೆಗಳು ಈಗ ಸೀರೆಯನ್ನೂ ಅಲಂಕರಿಸಿದ್ದು ಫ್ಯಾಶನ್ ಲೋಕದಲ್ಲಿ ಹೊಸ ಟ್ರೆಂಡ್ ಆಗಿ ಬೆಳೆಯುತ್ತಿದೆ.
ಪ್ರೀತಿ ಭಟ್