Advertisement
ಈರುಳ್ಳಿಯು ಪಿತ್ತಹರ ಕಫಹರ. ಈರುಳ್ಳಿಯ ಬೀಜ ವಾತಹರ. ಇದು ರಜಸ್ ಮತ್ತು ತಮೋಗುಣವನು ವೃದ್ಧಿಸುತ್ತದೆ. ಈರುಳ್ಳಿಯಲ್ಲಿ ಶರ್ಕರಪಿಷ್ಟ , ಪ್ರೊಟೀನ್, ಕ್ಯಾಲಿÏಯಂ, ಕಬ್ಬಿಣ ಸಣ್ತೀ , ಜೀವಸತ್ವ ಎಬಿಸಿಗಳನ್ನು ಹೊಂದಿದೆ.
Related Articles
Advertisement
4. ಈರುಳ್ಳಿಯನ್ನು ಕತ್ತರಿಸಿ ಬೆಲ್ಲ , ತುಪ್ಪ ಬೆರೆಸಿ ಸೇವಿಸಿದರೆ ದೇಹದ ತೂಕ ವೃದ್ಧಿಯಾಗುತ್ತದೆ. ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
5. ಈರುಳ್ಳಿಯ ಬೀಜಗಳಿಂದ ಚಹಾ ಮಾಡಿ ಸೇವಿಸಿದರೆ ನಿದ್ರಾಜನಕವಾಗಿದೆ.
6. ಈರುಳ್ಳಿಯ ರಸವನ್ನು ಕಣ್ಣಿಗೆ ಕಾಡಿಗೆಯಂತೆ ಲೇಪಿಸಿದರೆ ಕಣ್ಣಿನ ದೋಷಗಳು ನಿವಾರಣೆಯಾಗುತ್ತವೆ.
7. ಈರುಳ್ಳಿಯನ್ನು ಕತ್ತರಿಸಿ ನೀರಿನಲ್ಲಿ ಕುದಿಸಿ ಆರಿದ ಬಳಿಕ ಕಾಳುಮೆಣಸಿನ ಹುಡಿ, ಜೇನು ಬೆರೆಸಿ ಸೇವಿಸಿದರೆ ಕೆಮ್ಮು ದಮ್ಮು ಶಮನವಾಗುತ್ತದೆ.
8. ಈರುಳ್ಳಿಯನ್ನು ಕತ್ತರಿಸಿ ಹಸಿಯಾಗಿ ಊಟಕ್ಕೆ ಮೊದಲು ಸೇವಿಸಿದರೆ ಜೀರ್ಣಶಕ್ತಿ ಮತ್ತು ಪಚನಶಕ್ತಿವೃದ್ಧಿಯಾಗುತ್ತದೆ. 9. ಚಮಚ ಈರುಳ್ಳಿ ರಸಕ್ಕೆ 4 ಚಿಟಿಕೆ ಇಂಗು ಬೆರೆಸಿ ಸೇವಿಸಿದರೆ ಹೊಟ್ಟೆ ಉಬ್ಬರ, ಹೊಟ್ಟೆನೋವು ಶಮನವಾಗುತ್ತದೆ. 10. ಕಿವಿಯಲ್ಲಿ ನೋವಿರುವಾಗ ಈರುಳ್ಳಿ ರಸವನ್ನು ಕುದಿಸಿ 2 ಹುಂಡು ದಿನಕ್ಕೆ 3-4 ಬಾರಿ ಹಾಕಿದರೆ ಕಿವಿಯ ನೋವು ಉರಿಯೂತ ಶಮನವಾಗುತ್ತದೆ. 11. ಈರುಳ್ಳಿ ಹೂವುಗಳನ್ನು ಸೇವಿಸಿದರೆ ರುಚಿ ಮತ್ತು ಜೀರ್ಣಶಕ್ತಿ ವೃದ್ಧಿಯಾಗುತ್ತದೆ. 12. ಬಲಹೀನತೆ, ಅಶಕ್ತಿ ಇರುವಾಗ ಈರುಳ್ಳಿ ರಸ 3 ಚಮಚ, ತುಪ್ಪ 3 ಚಮಚ ಬೆರೆಸಿ ನಿತ್ಯ ಸೇವಿಸಿದರೆ ಬಲ್ಯ ಮತ್ತು ಶಕ್ತಿಕಾರಕ. 13. ಪುಟ್ಟ ಈರುಳ್ಳಿಯನ್ನು ಸೇವಿಸಿದರೆ ಋತುಚಕ್ರ ಸಮಸ್ಯೆ ಇರಲ್ಲ. 14. ಸುಣ್ಣದ ತಿಳಿನೀರು ಮತ್ತು ಈರುಳ್ಳಿ ರಸ ಸಮ ಪ್ರಮಾಣದಲ್ಲಿ ಬೆರೆಸಿ ಸೇವಿಸಿದರೆ ಕಾಲರಾ ರೋಗ ಬೇಗ ವಾಸಿಯಾಗುತ್ತೆ. 15. ಮೂತ್ರದಲ್ಲಿ ಸೋಂಕು ಇರುವಾಗ ಈರುಳ್ಳಿ ಜ್ಯೂಸ್ ನಿತ್ಯ ಸೇವಿಸಿದರೆ ಮೂತ್ರದ ಸೋಂಕು ಮೂತ್ರದಲ್ಲಿ ಉರಿ, ಮೂತ್ರದಲ್ಲಿನ ಕಲ್ಲು ನಿವಾರಣೆಯಾಗುತ್ತದೆ.