Advertisement

ಗ್ರಾಮ ಪಂಚಾಯತ್ ಚುನಾವಣೆ ತಪ್ಪಿಸಲು ಅಧ್ಯಾದೇಶ?

01:04 AM Oct 19, 2020 | mahesh |

ಬೆಂಗಳೂರು: ಗ್ರಾಮ ಪಂಚಾಯತ್‌ ಚುನಾವಣೆಯು ಸರಕಾರಕ್ಕೆ “ಕಬ್ಬಿಣದ ಕಡಲೆ’ಯಾಗಿದೆ. ಕೋವಿಡ್ ಮುಂದಿಟ್ಟು ಚುನಾವಣೆಗಳನ್ನು ಮುಂದೂ ಡುವ ಪ್ರಯತ್ನದಲ್ಲಿ ರುವ ಸರಕಾರ, ಇದಕ್ಕಾಗಿ ಅಧ್ಯಾದೇಶದ ಮೊರೆ ಹೋಗಲು ಚಿಂತಿಸುತ್ತಿದೆ.

Advertisement

ಚುನಾವಣೆಗಳನ್ನು ಮುಂದೂಡಲು ಅಧ್ಯಾದೇಶ ಹೊರಡಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲು ರಾಜ್ಯ ಸರಕಾರ ಆಲೋಚಿಸುತ್ತಿದೆ ಎನ್ನಲಾಗುತ್ತಿದೆ. ಚುನಾವಣೆಯನ್ನು ಮುಂದೂಡಲಾಗದು ಎಂಬ ಆಯೋಗದ ನಿಲುವಿಗೆ ಹೈಕೋರ್ಟ್‌ ಒಪ್ಪಿದರೆ, ಚುನಾವಣೆ ನಡೆಸುವುದು ಸರಕಾರಕ್ಕೆ ಅನಿವಾರ್ಯವಾಗಲಿದೆ.

ಸಂವಿಧಾನದ ಪ್ರಕಾರ ಪಂಚಾ ಯತ್‌ಗಳ ಅವಧಿ ಮುಕ್ತಾಯ ಗೊಳ್ಳುವುದಕ್ಕೆ ಮೊದಲು ಚುನಾವಣ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ. ಅಲ್ಲದೆ, ಆಡಳಿತಾಧಿಕಾರಿಗಳನ್ನು ಗರಿಷ್ಠ 6 ತಿಂಗಳ ಅವಧಿಗೆ ಮಾತ್ರ ನೇಮಕ ಮಾಡಬಹುದು. ಒಂದೊಮ್ಮೆ ಚುನಾವಣೆಗಳನ್ನು ಮುಂದೂಡಲೇ ಬೇಕೆಂದರೆ ಅದಕ್ಕೆ ಕೇಂದ್ರ ಸರಕಾರ ಅಧ್ಯಾದೇಶ ಹೊರಡಿಸಬೇಕಾಗುತ್ತದೆ.

ಕೇವಲ ಒಂದು ರಾಜ್ಯಕ್ಕಾಗಿ ಅಧ್ಯಾ ದೇಶ ತರಲು ಸಾಧ್ಯವಿಲ್ಲ. ಹಾಗಾಗಿ, ಈಗಾಗಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಮುಂದೂಡುವ ತೀರ್ಮಾನಕ್ಕೆ ಬಂದಿರುವ ರಾಜ್ಯಗಳು ಮತ್ತು ಶೀಘ್ರದಲ್ಲೇ ಚುನಾವಣೆ ನಡೆಯಲಿರುವ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನಕ್ಕೆ ರಾಜ್ಯ ಸರಕಾರ ಮುಂದಾಗಿದೆ.

ಈ ಬಗ್ಗೆ ಅನ್ಯ ರಾಜ್ಯಗಳಿಗೆ ಪತ್ರ ಬರೆಯಲು ಅಧಿಕಾರಿಗಳಿಗೆ ಹೇಳಲಾ ಗಿದ್ದು, ರಾಜಕೀಯ ಒಮ್ಮತಾಭಿಪ್ರಾಯ ಮೂಡಿಸಲು ಪಕ್ಷಗಳ ನಡುವೆ ಪ್ರಯತ್ನ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ .

Advertisement

ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಕೂಡ ಚುನಾವಣೆ ಬೇಡ ಎನ್ನುತ್ತಿದ್ದಾರೆ. ಆಯೋಗ ಮತ್ತು ಹೈಕೋರ್ಟ್‌ ಚುನಾವಣೆ ಮಾಡಬೇಕು ಎಂದು ಹೇಳಿದರೆ, ಮಾಡಲೇ ಬೇಕಾಗುತ್ತದೆ. ಅಧ್ಯಾದೇಶ ಬಗ್ಗೆ ಯೋಚಿಸಿಲ್ಲ.
-ಕೆ.ಎಸ್‌. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ

ಇದು ಸಂವಿಧಾನ ಮತ್ತು ಕಾನೂನು ಸೂಕ್ಷ್ಮ ವಿಚಾರ. ಕೇಂದ್ರ ಸರಕಾರ ಅಧ್ಯಾದೇಶ ತರುವುದು ಕಷ್ಟ. ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆ ಮತ್ತು ರಾಷ್ಟ್ರೀಯ ವಿಪತ್ತು ಆಧಾರದಲ್ಲಿ ಹಲವು ರಾಜ್ಯಗಳ ಎಲ್ಲ ಚುನಾವಣೆಗಳಿಗೆ ಸಂಬಂಧಿಸಿ ತೀರ್ಮಾನ ಕೈಗೊಳ್ಳಬಹುದು.
– ಅಶೋಕ ಹಾರನಹಳ್ಳಿ, ಮಾಜಿ ಅ.ಜನರಲ್‌.

ಆಯೋಗ ಮತ್ತು ನ್ಯಾಯಾಲಯ ಚುನಾವಣೆ ನಡೆಸಬೇಕು ಎನ್ನುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಸದ್ಯ ಬೇಡ ಎಂಬುದು ನಮ್ಮ ಅಭಿಪ್ರಾಯ. ಸದ್ಯ ಕೋರ್ಟ್‌ ಕೇಸ್‌ ಬಗ್ಗೆ ನಾವು ಗಮನ ಹರಿಸುತ್ತಿದ್ದೇವೆ.
– ಎಲ್‌.ಕೆ. ಅತೀಕ್‌, ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಇಲಾಖೆ.

ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next