Advertisement

ಭಾರತಕ್ಕೆ ಕಠಿನ ಸವಾಲು: ಚಾಪೆಲ್‌

08:18 AM May 09, 2020 | Sriram |

ಮುಂಬಯಿ: ಮುಂಬರುವ ಆಸ್ಟ್ರೇಲಿಯ ಪ್ರವಾಸ ಭಾರತದ ಪಾಲಿಗೆ ಅತ್ಯಂತ ಕಠಿನವಾಗಲಿದೆ ಎಂಬುದಾಗಿ ಕಾಂಗರೂ ನಾಡಿನ ಮಾಜಿ ನಾಯಕ ಇಯಾನ್‌ ಚಾಪೆಲ್‌ ಅಭಿಪ್ರಾಯಪಟ್ಟಿದ್ದಾರೆ. ಸ್ಟೀವನ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ಅವರನ್ನು ಬೇಗ ಔಟ್‌ ಮಾಡದ ಹೊರತು ಮೇಲುಗೈ ಸಾಧಿಸಲು ಸಾಧ್ಯವಿಲ್ಲ ಎಂದಿದ್ದಾರೆ.

Advertisement

“ನಾನು ವರ್ಷಾಂತ್ಯದ ಭಾರತ- ಆಸ್ಟ್ರೇಲಿಯ ಸರಣಿಯನ್ನು ಎದುರು ನೋಡುತ್ತಿದ್ದೇನೆ. ಕಳೆದ ಸಲ ಆಸ್ಟ್ರೇಲಿಯದಲ್ಲಿ ಸರಣಿ ಗೆದ್ದ ಆತ್ಮ ವಿಶ್ವಾಸದೊಂದಿಗೆ ಭಾರತ ತಂಡ ಆಗಮಿಸಲಿದೆ. ಆದರೆ ಈ ಸಲದ ಸವಾಲು ಸುಲಭದ್ದಲ್ಲ. ಸ್ಮಿತ್‌, ವಾರ್ನರ್‌ ಈ ಬಾರಿ ಆಸ್ಟ್ರೇಲಿಯ ತಂಡದಲ್ಲಿದ್ದಾರೆ’ ಎಂದರು.

“ಕಳೆದ ಸಲ ಭಾರತ ಸರಣಿ ಗೆದ್ದರೂ ತಂಡದ ಬ್ಯಾಟಿಂಗ್‌ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ವಾರ್ನರ್‌, ಸ್ಮಿತ್‌ ಕ್ರೀಸಿಗೆ ಅಂಟಿಕೊಂಡು ಆಡಿದರೆ ಆಸ್ಟ್ರೇಲಿಯ ಗೆಲ್ಲುತ್ತದೆ. ಇವರಿಬ್ಬರ ವಿಕೆಟ್‌ಗಳನ್ನು ಬೇಗನೇ ಕಿತ್ತರೆ ಭಾರತ ಗೆಲ್ಲುತ್ತದೆ’ ಎಂದು 76ರ ಹರೆಯದ ಇಯಾನ್‌ ಚಾಪೆಲ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next