Advertisement

ಚಪ್ಪರದಕಲ್ಲು ಅಭಿವೃದ್ಧಿಗೆ ಕಾಯಕಲ್ಪ ಅಗತ್ಯ

03:30 PM Jun 01, 2022 | Team Udayavani |

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇತಿಹಾಸ ಪುಟಗಳಲ್ಲಿ ಸೇರಿರುವ ಚಪ್ಪರದಕಲ್ಲು ಒಂದು ಅದ್ಬುತ ಸ್ಥಳವಾಗಿದ್ದು, ಅಭಿವೃದ್ಧಿ ಕಾರ್ಯಕಲ್ಪ ಮಾಡಿ ಪ್ರವಾಸಿಗರನ್ನು ಆಕರ್ಷಿಸಬೇಕು ಎಂದು ಇತಿಹಾಸ ಸಂಶೋಧಕರು ಹಾಗೂ ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.

Advertisement

ಪ್ರಸ್ತುತ ಚಪ್ಪರದಕಲ್ಲೆಂದೇ ಪ್ರಸಿದ್ಧವಾಗಿರುವ ಈ ಸ್ಥಳವು ನೀಲಗಿರಿ ತೋಪಿನಲ್ಲಿ ಮರೆ ಯಾಗು ತ್ತಿರುತ್ತದೆ. ಕಳೆದ ನಾಲ್ಕುವರೆ ದಶಕಗಳ ಹಿಂದೆಯೇ ಎಡ ಕಲ್ಲು ಗುಡ್ಡದ ಮೇಲೆ ಚಲನಚಿತ್ರವನ್ನು ಚಿತ್ರೀಕರಿಸಲಾಗಿತ್ತು. ಜತೆಗೆ ಈ ಸ್ಥಳದಲ್ಲಿ ಧಾರವಾಹಿಗಳನ್ನು ಸಹ ಚಿತ್ರೀಕರಿ ಸಲಾಗುತ್ತದೆ. ಸುಮಾರು 140 ಅಡಿ ಅಗಲ, 25 ಅಡಿ ಎತ್ತರದ ಹತ್ತು ಕಲ್ಲುಗಳನ್ನು ಬಳಸಿಕಲ್ಲಿನ ಚಪ್ಪರ ನಿರ್ಮಿಸಲಾಗಿದೆ. ಒಂದು ಕಡೆ ಸಭಾಂಗಣ, ಮತ್ತೂಂದೆಡೆ ಗರ್ಭಗುಡಿ ಆಕಾರವಿದೆಬಂಡೆಯೂ ಸೇಬು ಹಣ್ಣಿನ ಆಕಾರದಲ್ಲಿದ್ದು, ಬಹಳ ಆಕರ್ಷಣೀಯ ಪ್ರೇಕ್ಷಣೀಯ ಸ್ಥಳವಾಗಿದೆ.

ತಾಲೂಕು ಜನರ ಒತ್ತಾಸೆ: ಇಂತಹ ಐತಿಹಾಸಿಕ ನೆಲೆ ಹೊಂದಿರುವ ಚಪ್ಪರದಕಲ್ಲು ಸ್ಥಳವನ್ನು ಅಭಿ  ವೃದ್ಧಿಪಡಿಸಿದರೆ ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ. ಇತಿಹಾಸದ ಜತೆಯಲ್ಲಿ ವಿಶ್ರಾಂತಿಧಾಮವನ್ನಾಗಿಯೂ ಪರಿವರ್ತಿಸಬಹುದಾಗಿದೆ. ಮರೆಯಾಗಿರುವ ಚಪ್ಪರದಕಲ್ಲು ಜನರ ಮುಂದಿಡಲು ಜಿಲ್ಲಾಡಳಿತ ಮುಂದಾಗಬೇಕೆನ್ನುವುದು ದೇವನಹಳ್ಳಿ ತಾಲೂಕು ಜನರ ಒತ್ತಾಯವಾಗಿದೆ.

ಚಪ್ಪರದಕಲ್ಲು ಒಂದು ಅದ್ಬುತ ಸ್ಥಳವಾಗಿದ್ದು, ಇದನ್ನು ಅಭಿವೃದ್ಧಿಗೊಳಿಸಬೇಕು. ಮುಂದಿನ ಪೀಳಿಗೆಗೆಇಂತಹ ಸ್ಮಾರಕ ಉಳಿಯಬೇಕು.ಇತಿಹಾಸದ ಮೆಲುಕನ್ನು ಪ್ರತಿಯೊಬ್ಬರೂ ಹಾಕುವ ಕೆಲಸ ಮಾಡಬೇಕು. – ಬಿಟ್ಟಸಂದ್ರ ಬಿ.ಜಿ.ಗುರುಸಿದ್ದಯ್ಯ, ಇತಿಹಾಸ ಸಂಶೋಧಕ

Advertisement

Udayavani is now on Telegram. Click here to join our channel and stay updated with the latest news.

Next