ಬೆಂಗಳೂರು: ಮಣ್ಣಿನ ರಸ್ತೆಗಳಾಗಿ ಪರಿವರ್ತನೆಯಾಗಿರುವ ರಾಜಧಾನಿ ಹೃದಯ ಭಾಗದ ಮಾರ್ಗಗಳು, ಎಲ್ಲೆಡೆ ರಾಶಿ ರಾಶಿ ಕಟ್ಟಡ ತ್ಯಾಜ್ಯ, ಕಣ್ಮರೆಯಾಗಿರುವ ಪಾದಚಾರಿ ಮಾರ್ಗ, ಅಳಿದುಳಿದ ರಸ್ತೆಯನ್ನೂ ಆಕ್ರಮಿಸಿರುವ ವಾಹನಗಳು, ನಿಮಿಷ ನಿಮಿಷಕ್ಕೂ ಮೇಲೇಳುವ ಧೂಳಿಗೆ ಮಸುಕಾಗಿರುವ ಕಟ್ಟಡಗಳು…
ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಬಿಎಂಪಿ ವತಿಯಿಂದ ಈಗಾಗಲೇ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಆ ಪೈಕಿ ಕೆಲವು ಕಾಮಗಾರಿಗಳು ಪೂರ್ಣಗೊಂಡಿವೆ. ಆದರೆ, ಗಾಂಧಿನಗರದ ನ್ಯಾಷನಲ್ ಮಾರುಕಟ್ಟೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಪಾಲಿಕೆಯಿಂದ ನಡೆಸುತ್ತಿರುವ ಟೆಂಡರ್ ಶ್ಯೂರ್ ಕಾಮಗಾರಿಯಿಂದ ಜನರು ಹೈರಾಣಾಗಿದ್ದಾರೆ.
ಪಾಲಿಕೆಯಿಂದ ಗಾಂಧಿನಗರದ ಎಸ್.ಸಿ.ರಸ್ತೆ, 5ನೇ ಮುಖ್ಯರಸ್ತೆ, 6ನೇ ಮುಖ್ಯರಸ್ತೆ, 1 ಹಾಗೂ 2ನೇ ಅಡ್ಡರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ಟೆಂಡರ್ ಶ್ಯೂರ್ ಕಾಮಗಾರಿ ಪ್ರಗತಿಯಲ್ಲಿದೆ. ಪರಿಣಾಮ, ಪಾದಚಾರಿ ಮಾರ್ಗಗಳು ಕಾಣೆಯಾಗಿದ್ದು, ಸಂಪೂರ್ಣ ಮಣ್ಣಿನ ರಸ್ತೆಗಳಾಗಿ ಪರಿವರ್ತನೆಯಾಗಿವೆ.
ಏಕಕಾಲದಲ್ಲಿ ಎಲ್ಲ ಕಡೆ ಕಾಮಗಾರಿ: ಪಾಲಿಕೆಯಿಂದ ಪ್ರಮುಖ ಐದು ರಸ್ತೆಗಳಲ್ಲಿ ಏಕಕಾಲದಲ್ಲಿ ಕಾಮಗಾರಿ ನಡೆಸುತ್ತಿರುವುದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ನಿತ್ಯ ನರಕ ಅನುಭವಿಸುವಂತಾಗಿದೆ. ನ್ಯಾಷನಲ್ ಮಾರ್ಕೆಟ್, ಅಣ್ಣಮ್ಮ ದೇವಸ್ಥಾನ ರಸ್ತೆ, ಸುಖಸಾಗರ್ ಮಾಲ್ ಎದುರಿನ ರಸ್ತೆ, ಗುಬ್ಬಿ ವೀರಣ್ಣ ರಂಗ ಮಂದಿರ ಎದುರಿನ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ಏಕಕಾಲದಲ್ಲಿ ಕಾಮಗಾರಿ ನಡೆಯುತ್ತಿದ್ದು, ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿದೆ.
ಮಾರ್ಗದ ಬಹುತೇಕ ಭಾಗ ಅಗೆದಿರುವ ಕಾರಣ, ರಸ್ತೆಗಳು ಚಿಕ್ಕದಾಗಿದ್ದು, ಅಲ್ಲಿ ಮಣ್ಣು ತುಂಬಿಕೊಂಡಿದೆ. ವಾಹನಗಳು
ಸಂಚರಿಸಿದಾಗ ಭಾರೀ ಧೂಳು ಸೃಷ್ಟಿಯಾಗುತ್ತಿದೆ.
●ಸುಂದರ್ ಪಟ್ನಾಯಕ್, ಬೀದಿ ಬದಿ ವ್ಯಾಪಾರಿ
Advertisement
ರಾಜಧಾನಿ ಬೆಂಗಳೂರಿನ ಹೃದಯ ಭಾಗವೂ, ಪ್ರಮುಖ ವಾಣಿಜ್ಯ ಪ್ರದೇಶವಾದ ಗಾಂಧಿನಗರದ ಪ್ರಮುಖ ರಸ್ತೆಗಳಲ್ಲಿ ಕಂಡುಬರುತ್ತಿರುವ ದೃಶ್ಯಗಳಿವು.
Related Articles
Advertisement
ಮಾಸ್ಕ್ ಇಲ್ಲದೆ ಉಸಿರಿಲ್ಲ: ಪಾಲಿಕೆಯ ಟೆಂಡರ್‌ಶ್ಯೂರ್ ಕಾಮಗಾರಿ ಹಾಗೂ ಕೆಲ ಖಾಸಗಿಯವರು ನಡೆಸುತ್ತಿರುವ ಕಟ್ಟಡ ನಿರ್ಮಾಣ ಕಾಮಗಾರಿ ಪರಿಣಾಮ, ಗಾಂಧಿನಗರವನ್ನು ಧೂಳು ಆವರಿಸಿದೆ. ಪರಿಣಾಮ, ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವ ಅನಿವಾರ್ಯತೆ ಎದುರಾಗಿದೆ. ಇನ್ನು ಮಳಿಗೆಗಳನ್ನು ದಿನಕ್ಕೆ ಎಷ್ಟು ಬಾರಿ ಸ್ವಚ್ಛಗೊಳಿಸಿದರೂ ಧೂಳು ತುಂಬುತ್ತಿದೆ ಎಂಬುದು ವ್ಯಾಪಾರಿಗಳ ಅಳಲು.
ಗಾಂಧಿನಗರದ ಎಲ್ಲ ರಸ್ತೆಗಳಲ್ಲಿ ಏಕಕಾಲದಲ್ಲಿ ಕಾಮಗಾರಿ ಆರಂಭಿಸಿರುವುದರಿಂದ ಸಮಸ್ಯೆಯಾಗಿದೆ. ಪಾದಚಾರಿಮಾರ್ಗದ ಬಹುತೇಕ ಭಾಗ ಅಗೆದಿರುವ ಕಾರಣ, ರಸ್ತೆಗಳು ಚಿಕ್ಕದಾಗಿದ್ದು, ಅಲ್ಲಿ ಮಣ್ಣು ತುಂಬಿಕೊಂಡಿದೆ. ವಾಹನಗಳು
ಸಂಚರಿಸಿದಾಗ ಭಾರೀ ಧೂಳು ಸೃಷ್ಟಿಯಾಗುತ್ತಿದೆ.
●ಸುಂದರ್ ಪಟ್ನಾಯಕ್, ಬೀದಿ ಬದಿ ವ್ಯಾಪಾರಿ
ವಾಹನಗಳ ಪಾರ್ಕಿಂಗ್‌ಗೆ ಅರ್ಧ ರಸ್ತೆ ಮೀಸಲು
ಗಾಂಧಿನಗರದಲ್ಲಿ ಪ್ರಮುಖ ಟ್ರಾವೆಲ್ಸ್ ಸಂಸ್ಥೆಗಳು, ಪುಸ್ತಕ ಮಳಿಗೆಗಳು, ಮೊಬೈಲ್, ಕ್ಯಾಮೆರಾ, ಚಿತ್ರಮಂದಿರ ಸೇರಿದಂತೆ ಹಲವಾರು ವಾಣಿಜ್ಯ ಚಟುವಟಿಕೆಗಳು ನಡೆಯುವುದರಿಂದ ನಿತ್ಯ ಹತ್ತಾರು ಸಾವಿರ ಜನರು ಬಂದು ಹೋಗುತ್ತಾರೆ. ಅದರಲ್ಲೂ ವಸ್ತುಗಳ ಖರೀದಿಗೆ ಬರುವವರಿಗೆ ಪಾರ್ಕಿಂಗ್ ಸಮಸ್ಯೆ ಕಾಡುತ್ತಿದ್ದು, ಪಾಲಿಕೆಯಿಂದ ಕಾಮಗಾರಿ ನಡೆಸುತ್ತಿರುವ ಜಾಗ ಹಾಗೂ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸಿ ಹೋಗುತ್ತಿದ್ದಾರೆ. ಇದರಿಂದಾಗಿ ಸಂಚಾರ ದಟ್ಟಣೆ ಉಂಟಾಗುತ್ತಿದೆ.