Advertisement

ಹಿಮ ಬಾಂಬ್‌: 6 ಸಾವಿರ ವಿಮಾನಗಳ ಸಂಚಾರ ರದ್ದು

09:45 AM Jan 08, 2018 | Team Udayavani |

ವಾಷಿಂಗ್ಟನ್‌: ಅಮೆರಿಕವನ್ನು ಹೆಪ್ಪುಗಟ್ಟಿಸಿರುವ ಹಿಮಪ್ರವಾಹದ ತೀವ್ರತೆ ರವಿವಾರ ಇನ್ನಷ್ಟು ಹೆಚ್ಚಿದ್ದು, ಇಲ್ಲಿನ ಜಾನ್‌ ಎಫ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 6 ಸಾವಿರ ವಿಮಾನಗಳ ಸಂಚಾರ ರದ್ದಾಗಿದೆ. ಗುರುವಾರ ಸ್ಥಗಿತಗೊಂಡಿದ್ದ ವೈಮಾನಿಕ ಸೇವೆಯು ಶುಕ್ರವಾರ ಬೆಳಗ್ಗೆ ಪುನಾರಂಭಗೊಂಡಿತ್ತು. ಆದರೆ, ರವಿವಾರ ಮತ್ತೆ ಹಿಮ ವರ್ಷ ಹೆಚ್ಚಿದ ಕಾರಣ, ವಿಮಾನಗಳ ಸಂಚಾರ ರದ್ದು ಮಾಡಲಾಯಿತು. ಇದರಿಂದಾಗಿ, ಸಾವಿರಾರು ಪ್ರಯಾಣಿಕರು ಅತಂತ್ರರಾಗಿದ್ದಾರೆ. ಎಲ್ಲರೂ ವಿಮಾನ ನಿಲ್ದಾಣದಲ್ಲೇ ರಾತ್ರಿ ಕಳೆಯಬೇಕಾದ ಪರಿಸ್ಥಿತಿ ಎದುರಾಗಿದೆ. ಕುವೈಟ್‌, ಚೀನ ಸೇರಿದಂತೆ ಹಲವು ವಿಮಾನಗಳ ಸಂಚಾರದ ಮೇಲೂ ಇದರ ಪ್ರಭಾವ ಕಂಡುಬಂತು.

Advertisement
Advertisement

Udayavani is now on Telegram. Click here to join our channel and stay updated with the latest news.

Next