Advertisement
ಪುಷ್ ಅಪ್ಸ್ಪುಷ್ ಅಪ್ಸ್‌ಗಳು ಅತ್ಯಂತ ಸರಳ ವ್ಯಾಯಮ. ನಿಮ್ಮ ಕೈಗಳನ್ನು ನೆಲಕ್ಕೆ ಊರಿ ಕಾಲುಗಳನ್ನು ಉದ್ದಕ್ಕೆ ಚಾಚಿ ದೇಹ ಮತ್ತು ಕುತ್ತಿಗೆಯನ್ನು ನೇರವಾಗಿಸಬೇಕು. ನಿಧಾನವಾಗಿ ದೇಹವನ್ನು ಮೇಲೆ ಕೆಳಗೆ ಮಾಡಬೇಕು. ಕೈಗಳ ಸ್ನಾಯುಗಳು ಸದೃಢವಾಗುತ್ತವೆ. ಎದೆ ಮತ್ತು ಹೊಟ್ಟೆಯ ಭಾಗ ಗಟ್ಟಿಯಾಗುತ್ತದೆ.
ಎದೆಯ ಭಾಗದಲ್ಲಿ ಎರಡು ಕೈ ಜೋಡಿಸಿ ಸಮಸ್ಕಾರ ಮಾಡುವ ಭಂಗಿಯಲ್ಲಿ ನೇರವಾಗಿ ನಿಂತುಕೊಳ್ಳಬೇಕು. ಅನಂತರ ಕಾಲುಗಳನ್ನು ಸ್ವಲ್ಪ ಅಗಲಗೊಳಿಸಿ ಮಂಡಿಯ ಮೇಲೆ ಕುಳಿತು ಮೇಲೇಳಬೇಕು. ಹೀಗೆ ದಿನಂಪ್ರತಿ 20ರಿಂದ 30 ಬಾರಿ ಮಾಡಬೇಕು. ಮಂಡಿ, ತೊಡೆ, ಪೃಷ್ಠ ಭಾಗಗಳಿಗೆ ಹೆಚ್ಚು ಶಕ್ತಿ ದೊರೆಯುತ್ತದೆ. ಬಸ್ಕಿ (ಸಿಟ್ ಅಪ್ಸ್)
ನೆಲದ ಮೇಲೆ ಅಂಗಾತ ಮಲಗಬೇಕು. ಕಾಲುಗಳನ್ನು ಪೃಷ್ಠ ಭಾಗದತ್ತ ಎಳೆದುಕೊಂಡು ಎರಡೂ ಕೈಗಳನ್ನು ತಲೆಯ ಕೆಳಗೆ ಸೇರಿಸಬೇಕು. ನಿಧಾನವಾಗಿ ತಲೆಯನ್ನು ಮೊಣಕಾಲಿನತ್ತ ತಂದು ಮತ್ತೆ ಮೊದಲಿನಂತೆ ಮಲಗಬೇಕು. ಬೆಳಗ್ಗೆ 10ರಿಂದ 20ಬಾರಿ ಮಾಡುವುದರಿಂದ ಕಿಬ್ಬೊಟ್ಟೆಯ ಭಾಗದಲ್ಲಿ ಮತ್ತು ಬೆನ್ನು ನೋವು ಇದ್ದರೆ ನಿವಾರಿಸಬಹುದು. ಕೊಬ್ಬು ಕರಗಿ ಹೊಟ್ಟೆಯ ಭಾಗವೂ ಸದೃಢವಾಗುತ್ತದೆ.
Related Articles
ಮನೆಯಲ್ಲಿ ಎರಡು ಡಂಬೆಲ್ಸ್‌ಗಳಿದ್ದರೆ ಸಾಕು ಜಿಮ್‌ನಲ್ಲಿ ಮಡಬಹುದಾ ಅನೇಕ ವ್ಯಾಯಾಮಗಳನ್ನು ಇವುಗಳ ಮೂಲಕ ಮಾಡಬಹುದು. ಗಾಲಿಯಾಕಾರದ ಸರಳವಾಗಿ ಉರುಳಿಸಲು ಸಾಧ್ಯವಾಗುವಂಥ ಎರಡು ಡಂಬೆಲ್ಸ್‌ಗಳನ್ನು ಕೈಯಲ್ಲಿ ಹಿಡಿದು ಪುಷ್‌ಅಪ್ಸ್ ರೀತಿಯಲ್ಲಿ ದೇಹವನ್ನು ಇರಿಸಬೇಕು. ಅನಂತರ ದೇಹವನ್ನು ಬಿಗಿಯಾಗಿಸಿ ಡಂಬೆಲ್ಸ್ ಗಳ ಮೇಲೆ ಒತ್ತಡ ಹಾಕಿ ಹಿಂದಕ್ಕೆ ಮುಂದಕ್ಕ ಉರುಳಿಸಬೇಕು. ಇದರಿಂದ ಇಡೀ ದೇಹಕ್ಕೆ ಶ್ರಮ ಬೀಳುತ್ತದೆ. ಎದೆ ಗಟ್ಟಿಯಾಗುವುದರ ಜತೆಗೆ ದೇಹ ಹುರಿಯಾಗುತ್ತದೆ.
Advertisement
- ಶಿವಾನಂದ ಎಚ್.