Advertisement

ವೃತ್ತಿಯಲ್ಲಿ ಅಂಬಿಗ, ಪ್ರವೃತ್ತಿಯಲ್ಲಿ  ಅನುಭಾವಿ ಪಂಡಿತ

07:48 PM Jan 22, 2021 | Team Udayavani |

ಮೈಸೂರು: ಶ್ರೇಷ್ಠ ಶರಣ, ವಚನಕಾರ ಅಂಬಿಗರ ಚೌಡಯ್ಯ ಜಯಂತಿಯನ್ನು ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಚರಿಸಲಾಯಿತು.

Advertisement

ಕಲಾಮಂದಿರದ ಮನೆಯಂಗಳದಲ್ಲಿ ನಡೆದ ಕಾರ್ಯಕ್ರಮಕ್ಕೆ ಶಾಸಕ ಎಲ್‌ .ನಾಗೇಂದ್ರ ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಬಳಿಕ ಪ್ರಾಸ್ತಾವಿಕ ನುಡಿಗಳನ್ನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚೆನ್ನಪ್ಪ, ವೃತ್ತಿಯಲ್ಲಿ ಅಂಬಿಗರಾಗಿದ್ದ ಇವರು, ಪ್ರವೃತ್ತಿಯಲ್ಲಿ ಅನುಭಾವಿ ಪಂಡಿತರಾಗಿದ್ದರು. ತಮ್ಮ ನಿರ್ಭೀತಿ ನುಡಿಗಳಿಂದ ವಚನಗಳನ್ನು ಬರೆದಿದ್ದೂ, ಬಸವಣ್ಣನವರ ಅನುಭವ ಮಂಟಪದಲ್ಲಿ ಸಮಾನ ಭೂಮಿಕೆಯ ಸಮ್ಮೇಳನದಲ್ಲಿ ಸೇರಿಕೊಂಡಿದ್ದರು. ಅಂದಿನ ಕಾಲದಲ್ಲಿ ಜೀವಿಸಿದ್ದ ವಚನಕಾರರಲ್ಲೇ ಚೌಡಯ್ಯ ಅವರದ್ದು ಭಿನ್ನ ಮತ್ತು ವಿಶಿಷ್ಟ ವ್ಯಕ್ತಿತ್ವವಾಗಿತ್ತು ಎಂದರು.

ಇದನ್ನೂ ಓದಿ:26ರಂದು ಕೇಂದ್ರ ಸರ್ಕಾರದ ವಿರುದ್ಧ  ರೈತರ ರ್ಯಾಲಿ

ಈ ವೇಳೆ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ, ಅರಗು ಮತ್ತು ಬಣ್ಣದ ಕಾರ್ಖಾನೆಯ ಅಧ್ಯಕ್ಷ ಫ‌ಣೀಶ್‌, ವಿಜ್ಞಾನಿ ಬಸವರಾಜ್‌, ಪ್ರೊ.ಬಸವಯ್ಯ,ನಾರಾಯಣ ಲೋಲಪ್ಪ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next