ಚನ್ನಪಟ್ಟಣ: ತಾಲೂಕಿನ ಕದರಮಂಗಲ ಮತಗಟ್ಟೆ ಯಲ್ಲಿ ಮತಯಂತ್ರ ಬದಲಾಯಿಸಿದ ಚುನಾವಣಾ ಅಧಿಕಾರಿಗಳು.
Advertisement
200 ಮತಗಳು ಚಲಾವಣೆಯಾದ ಬಳಿಕ ಮತಯಂತ್ರ ದಲ್ಲಿ ದೋಷ ಪತ್ತೆಯಾಗಿದ್ದು, ಮತಯಂತ್ರ ದ ಬಟನ್ ನಲ್ಲಿ ದೋಷ ಕಂಡುಬಂದಿದ್ದು ಬಟನ್ ಒತ್ತಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮತಯಂತ್ರ ಬದಲಾವಣೆ ಮಾಡಲಾಗಿದೆ.
ಸುಮಾರು 15 ನಿಮಿಷಗಳ ಕಾಲ ಮತದಾನ ವಿಳಂಬವಾಯಿತು. ಚನ್ನಪಟ್ಟಣ ಕ್ಷೇತ್ರದಲ್ಲಿ 3 ಕಡೆ ವಿವಿ ಪ್ಯಾಡ್ ಸಮಸ್ಯೆ ಕಂಡು ಬಂದಿದ್ದು, ಸಿಬಂದಿ ಕೂಡಲೇ ವಿವಿಪ್ಯಾಡ್ ಬದಲಿಸಿದ್ದಾರೆ. ಇಸಿಐಎಲ್ ಇಂಜಿನಿಯರ್ ಗಳಿಂದ ಕೆಲವೆಡೆ ಸಣ್ಣಪುಟ್ಟ ತಾಂತ್ರಿಕ ದೋಷ ನಿವಾರಣೆ ಮಾಡಲಾಗಿದೆ.