Advertisement
ಬಿಡದಿ ಸಮೀಪದ ಕೇತಗಾನಹಳ್ಳಿಯ ಲ್ಲಿನ ತಮ್ಮ ತೋಟದ ಮನೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇದು ನನ್ನ ಮೂರನೇ ಸೋಲು, ಈ ಸೋಲನ್ನು ನಾನು ವಿನಮ್ರವಾಗಿ ಸ್ವೀಕರಿಸು ತ್ತೇನೆ. ನನ್ನ ಪರವಾಗಿ 18 ದಿನಗಳ ಕಾಲ ದುಡಿದ ಎಲ್ಲಾ ಮುಖಂ ಡರು ಮತ್ತು ಕಾರ್ಯ ಕರ್ತ ರಿಗೆ, ಮತ ನೀಡಿದ ಮತ ದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ಕುಟುಂಬಕ್ಕೂ ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ. ಮುಂದೆಯೂ ಕ್ಷೇತ್ರ ಜನರ ಪರವಾಗಿ ಕೆಲಸ ಮಾಡುತ್ತೇನೆ. ನಿರ್ದಿಷ್ಟ ಸಮುದಾಯದವರು ನಮ್ಮ ಪರ ಮತ ಹಾಕಿಲ್ಲ ಎಂದರು.
ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ರಾಜ್ಯದ ಮೂರೂ ಕ್ಷೇತ್ರಗಳಲ್ಲಿ ದಿಗ್ವಿಜಯ ಸಾಧಿಸುವ ಮೂಲಕ ಮತಗಟ್ಟೆ ಸಮೀಕ್ಷೆಗಳನ್ನು ಸುಳ್ಳಾಗಿಸಿದ್ದು, ಸಮೀಕ್ಷೆ ಯನ್ನೇ ನೆಚ್ಚಿಕೊಂಡಿದ್ದ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟಕ್ಕೆ ಭ್ರಮನಿರಸನ ಆದಂತಾಗಿದೆ.ಕಳೆದ ಬಾರಿ ಸಂಡೂರಿ ನಲ್ಲಿ ಕಾಂಗ್ರೆಸ್ನ ಇ.ತುಕಾರಾಂ, ಶಿಗ್ಗಾಂವಿಯಲ್ಲಿ ಬಿಜೆಪಿಯ ಬಸವರಾಜ ಬೊಮ್ಮಾಯಿ ಹಾಗೂ ಚನ್ನಪಟ್ಟಣದಲ್ಲಿ ಜೆಡಿಎಸ್ನ ಕುಮಾರಸ್ವಾಮಿ ಗೆದ್ದ ಕ್ಷೇತ್ರಗಳಿಗೆ ಮತದಾನ ನಡೆದಾಗ ಆಯಾ ಕ್ಷೇತ್ರಗಳು ಅದೇ ಪಕ್ಷಗಳ ಬಳಿ ಉಳಿಯು ತ್ತವೆ ಎಂದು ಸಮೀಕ್ಷೆಗಳು ಹೇಳಿದ್ದವು. ಆದರೆ ರಿಸಲ್ಟ್ ಉಲ್ಟಾ ಆಗಿದೆ.