Advertisement

ಚನ್ನಗಿರಿ: ಕಾಡಾನೆ ದಾಳಿಗೆ ಯುವತಿ ಬಲಿ

02:32 PM Apr 08, 2023 | Team Udayavani |

ಚನ್ನಗಿರಿ: ತಾಲೂಕಿನ ಸಂತೇಬೆನ್ನೂರು ಹೋಬಳಿ ಸಮೀಪದ ಸೋಮಲಾಪುರ ಗ್ರಾಮದ ಜಮೀನಿನಲ್ಲಿ ಅವರೆಕಾಯಿ ಬಿಡಿಸುತ್ತಿದ್ದ ಯುವತಿ ಮೇಲೆ ದಾಳಿ ನಡೆಸಿದ್ದು, ಯುವತಿ ಸಾವನ್ನಪ್ಪಿದ ಘಟನೆ ಎ.8ರ ಶನಿವಾರ ಬೆಳಿಗ್ಗೆ ನಡೆದಿದೆ.

Advertisement

ಸೋಮಲಾಪುರದ ವಾಸಿ ಉಮೇಶ್ ಹಾಗೂ ಮಂಜುಳ ಅವರ ಪುತ್ರಿ ಕವನ (18) ಮೃತಪಟ್ಟಿ ಯುವತಿ.

ತಾಯಿ ಹಾಗೂ ಮಗಳು  ತೊಗರಿ ಕಾಯಿ ಬಿಡಿಸುತ್ತಿದ್ದ ವೇಳೆ ಎರಡು ಆನೆಗಳು ಹಾಗೂ ಒಂದು ಮರಿ ಹೊಲಕ್ಕೆ ನುಗ್ಗಿವೆ. 1 ಆನೆ ಬಾಲಕಿ ಮೇಲೆ ದಾಳಿ ನಡೆಸಿದೆ.

ತೀವ್ರವಾಗಿ ಗಾಯಗೊಂಡ ಬಾಲಕಿಯನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ತಾಯಿ ಮಂಜುಳಾ ಗಂಭೀರವಾಗಿ ಗಾಯಗೊಂಡಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತ ಬಾಲಕಿಗೆ 15 ಲಕ್ಷ  ರೂ. ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.

Advertisement

ಮತ್ತೊಂದು ಪ್ರಕರಣದಲ್ಲಿ ಇದೇ ತಾಲೂಕಿನ ಕಾಶೀಪುರ ಗ್ರಾಮದ ದಾರಿಯಲ್ಲೂ ಕಾಡಾನೆಯೊಂದು ದಾಳಿ ನಡೆಸಿದ್ದು ಬಾಬಾನಾಯ್ಕ (55), ಭಾವಲ್ಯನಾಯ್ಕ (55), ಶಾಂತಿಬಾಯಿ (40) ಲಕ್ಷ್ಮೀಬಾಯಿ (40) ಎಂಬುವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಆನೆಗಳ ದಾಳಿಯಿಂದ ಸೂಳೆಕೆರೆ ಸುತ್ತಮುತ್ತಲ ಹತ್ತಾರು ಗ್ರಾಮಗಳಲ್ಲಿ ಆತಂಕ ಉಂಟಾಗಿದೆ. ಯಾರೂ ಕೂಡ ಒಂಟಿಯಾಗಿ ಓಡಾಡಬಾರದು ಎಂದು ಅರಣ್ಯ ಇಲಾಖೆಯಿಂದ ಜನರಿಗೆ ಸೂಚನೆ ನೀಡಲಾಗಿದೆ.

ಹೊಸದುರ್ಗ ಕಡೆಯಿಂದ ಜೋಳದಾಳ ಕಾಡಂಚಿನಿಂದ ಬಂದಿದ್ದು, ಕಾಡಾನೆ ಸೋಮಲಾಪುರ ಗ್ರಾಮ ಸುತ್ತಮುತ್ತಲಿನ ಗ್ರಾಮಗಳಲ್ಲಿ ನುಗ್ಗಿ ದಾಂಧಲೆ ನಡೆಸುತ್ತಿದ್ದು, ಹೊಲಗದ್ದೆಗಳಲ್ಲಿ ಕೆಲಸ ಕಾರ್ಯ ದಲ್ಲಿ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next