Advertisement

ವಿಶ್ವ ಪ್ಯಾರಾ ಶೂಟಿಂಗ್‌: ಚಿನ್ನದೊಂದಿಗೆ ಖಾತೆ ತೆರೆದ ರಾಹುಲ್‌ ಜಾಖಡ್‌

11:04 PM Aug 19, 2022 | Team Udayavani |

ದಕ್ಷಿಣ ಕೊರಿಯಾ: ಪಿಸ್ತೂಲ್‌ ಶೂಟರ್‌ ರಾಹುಲ್‌ ಜಾಖಡ್‌ ಅವರ ಚಿನ್ನದ ಸಾಧನೆಯೊಂದಿಗೆ ಭಾರತ “2022ರ ವರ್ಲ್ಡ್ ಶೂಟಿಂಗ್‌ ಪ್ಯಾರಾ ಸ್ಪೋರ್ಟ್ಸ್ ವರ್ಲ್ಡ್ ಕಪ್‌’ನಲ್ಲಿ ಪದಕದ ಖಾತೆ ತೆರೆದಿದೆ. ಅವರು ಪಿ3 ಮಿಕ್ಸೆಡ್‌ 25 ಮೀ. ಪಿಸ್ತೂಲ್‌ ಎಸ್‌ಎಚ್‌1 ಫೈನಲ್‌ನಲ್ಲಿ ಕಿಮ್‌ ಜುಂಗಮ್‌ ಅವರನ್ನು ಶೂಟೌಟ್‌ನಲ್ಲಿ ಮಣಿಸಿದರು (3+3+2; 3+3+0).

Advertisement

“ಇದೊಂದು ಅದ್ಭುತ ಫೈನಲ್‌. ಚಿನ್ನದ ಪದಕ ಜಯಿಸಿದ್ದರಿಂದ ಅತ್ಯಂತ ಖುಷಿಯಾಗಿದೆ. ನವಂಬರ್‌ನಲ್ಲಿ ನಡೆ ಯಲಿರುವ ವಿಶ್ವ ಚಾಂಪಿಯನ್‌ಶಿಪ್‌ ಮುನ್ನ ಲಭಿಸಿದ ಅತ್ಯುತ್ತಮ ಅನುಭವ’ ಎಂಬುದಾಗಿ ರಾಹುಲ್‌ ಜಾಖಡ್‌ ಹೇಳಿದರು.

ಭಾರತದ ಮತ್ತಿಬ್ಬರು ಪದಕ ವಿಜೇತರೆಂದರೆ ಪೂಜಾ ಅಗರ್ವಾಲ್‌ (ಕಂಚು) ಮತ್ತು ಅವನಿ ಲೇಖರ (ಬೆಳ್ಳಿ). ಈ ಕೂಟದಲ್ಲಿ ಭಾರತದ 14 ಶೂಟರ್ ಭಾಗವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next