Advertisement

ಕುಕ್ಕೆ ಸುಬ್ರಹ್ಮಣ್ಯ: ಚಂದ್ರಗ್ರಹಣ ಹಿನ್ನಲೆ ದೇವಳದ ಸೇವೆಗಳಲ್ಲಿ ವ್ಯತ್ಯಯ

02:51 PM Jul 14, 2019 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜುಲೈ 16ರಂದು ಮಂಗಳವಾರ ಚಂದ್ರಗ್ರಹಣದ ಹಿನ್ನಲೆಯಲ್ಲಿ ದೇವತಾ ಸೇವೆಗಳ ಸಮಯದಲ್ಲಿ ವ್ಯತ್ಯಾಸವಾಗಲಿದೆ.

Advertisement

ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನದ ತನಕದ ಪೂಜೆ, ಸೇವೆಗಳು ಎಂದಿನಂತೆ ನಡೆಯಲಿದ್ದು, ನಂತರದ ಸೇವೆಗಳಲ್ಲಿ ವ್ಯತ್ಯಯವಾಗಲಿದೆ. ಸಂಜೆ ಆರು ಗಂಟೆಗೆ ದೀವಟಿಗೆ ಸಲಾಂ, ರಾತ್ರಿ ಮಹಾಪೂಜೆಯು 6.30ಕ್ಕೆ ನಡೆಯಲಿದೆ. ರಾತ್ರಿ 7 ಗಂಟೆಗೆ ದೇವಸ್ಥಾನ ಮುಚ್ಚಲಾಗುವುದರಿಂದ ಸಂಜೆ ಆಶ್ಲೇಷ ಬಲಿ ಸೇವೆ ಮತ್ತು ರಾತ್ರಿ ಭೋಜನ ವ್ಯವಸ್ಥೆ ಇರುವುದಿಲ್ಲ ಎಂದು ದೇವಸ್ಥಾನದ ಮಾಧ್ಯಮ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next