Advertisement

ಇಪಿಎಫ್ ಗೂ ತೆರಿಗೆ, ಪಿಂಚಣಿ ನಿಧಿ ಶುಲ್ಕ ಹೆಚ್ಚಳ…ಇಂದಿನಿಂದ ಏನೇನು ಬದಲಾವಣೆ?

10:19 AM Apr 01, 2021 | Team Udayavani |

ಇಪಿಎಫ್ ಗೂ ತೆರಿಗೆ : ಇಪಿಎಫ್(ನೌಕರರ ಭವಿಷ್ಯ ನಿಧಿ) ಖಾತೆಯಲ್ಲಿ ನೀವು ಮಾಡಿರುವ ಹೂಡಿಕೆಗೂ ಇಂದಿನಿಂದ ತೆರಿಗೆ ಪಾವತಿಸಬೇಕು. ವರ್ಷಕ್ಕೆ 2.5 ಲಕ್ಷ ರೂ.ಗಳಿಗಿಂತ ಹೆಚ್ಚು ಹಣವನ್ನು ಇಪಿಎಫ್ನಲ್ಲಿ ಹೂಡಿದ್ದರೆ, ಅದು ತೆರಿಗೆಯ ವ್ಯಾಪ್ತಿಗೆ ಬರುತ್ತದೆ.

Advertisement

ಟಿಡಿಎಸ್‌ ನಿಯಮ : ನೀವು ಆದಾಯ ತೆರಿಗೆ ರಿಟರ್ನ್ ಸಲ್ಲಿಸದೇ ಇದ್ದರೆ, ಬ್ಯಾಂಕ್‌ ಠೇವಣಿಗಳ ಮೇಲಿನ ಟಿಡಿಎಸ್‌ ಮೊತ್ತವು ದುಪ್ಪಟ್ಟಾಗಲಿದೆ. ಇನ್ನು, 75 ವರ್ಷ ದಾಟಿದವರು ಇಂದಿನಿಂದ ಐಟಿಆರ್‌ ಸಲ್ಲಿಕೆಯಿಂದ ವಿನಾಯಿತಿ ಪಡೆಯುತ್ತಾರೆ.

ಎಲ್ಲವೂ ತುಟ್ಟಿ : ಕಾರು-ಬೈಕು ಸೇರಿದಂತೆ ವಾಹನ ಗಳು, ಟಿವಿ, ಎಸಿ, ರೆಫ್ರಿಜರೇಟರ್‌, ಮದ್ಯ ಸಹಿತ ಅನೇಕ ಸರಕುಗಳು ದುಬಾರಿಯಾಗಲಿವೆ.

ಚೆಕ್‌ ಬುಕ್‌-ಪಾಸ್‌ ಬುಕ್‌ ಬದಲಾವಣೆ :

ದೇನಾ ಬ್ಯಾಂಕ್‌, ವಿಜಯಾ, ಕಾರ್ಪೊರೇಷನ್‌, ಆಂಧ್ರ ಬ್ಯಾಂಕ್‌, ಓರಿಯಂಟಲ್‌ ಬ್ಯಾಂಕ್‌ ಆಫ್ ಕಾಮರ್ಸ್‌, ಯುಬಿಐ ಮತ್ತು ಅಲಹಾಬಾದ್‌ ಬ್ಯಾಂಕ್‌ಗಳು ವಿಲೀನಗೊಂಡಿರುವ ಕಾರಣ ಇವುಗಳ ಚೆಕ್‌ ಬುಕ್‌ ಮತ್ತು ಪಾಸ್‌ ಬುಕ್‌ಗಳು ಇಂದಿನಿಂದ ಚಾಲ್ತಿಯಲ್ಲಿರುವುದಿಲ್ಲ.

Advertisement

ವಿಮಾನ  ಪ್ರಯಾಣ ದುಬಾರಿ :

ವಾಯು ಭದ್ರತ ಶುಲ್ಕ ವನ್ನು (ಎಎಸ್‌ಎಫ್) ಡಿಜಿಸಿಎ ಹೆಚ್ಚಳ ಮಾಡಿರುವ ಕಾರಣ ಎ.1ರಿಂದ ವಿಮಾನ ಪ್ರಯಾಣ ದುಬಾರಿಯಾಗಲಿದೆ. ದೇಶೀಯ ಪ್ರಯಾಣಿಕರಿಗೆ 40 ರೂ.ಗಳಷ್ಟು, ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ 114.38 ರೂ.ಗಳಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.

ಶುಲ್ಕ ಹೆಚ್ಚಳ :

ನೀವು ಪಿಂಚಣಿ ನಿಧಿಯಲ್ಲಿ ಹೂಡಿಕೆ ಮಾಡಿದ್ದೀರಾ? ಹಾಗಿದ್ದರೆ ಇವತ್ತಿನಿಂದ ಪೆನÒನ್‌ ಫ‌ಂಡ್‌ ಮ್ಯಾನೇಜರ್‌ಗಳು ಗ್ರಾಹಕರಿಗೆ ಹೆಚ್ಚಿನ ಶುಲ್ಕ ವಿಧಿಸಲಿದ್ದಾರೆ. ಹೆಚ್ಚಿನ ವಿದೇಶಿ ಬಂಡವಾಳ ಆಕರ್ಷಿಸಲೆಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಶುಲ್ಕ ಹೆಚ್ಚಳಕ್ಕೆ ಅನುಮತಿ ನೀಡಿದೆ.

ಏರ್‌ಬ್ಯಾಗ್‌ ಕಡ್ಡಾಯ :  ಇಂದಿನಿಂದ ಕಾರುಗಳಲ್ಲಿನ ಸುರಕ್ಷತ ಮಾನದಂಡ ಬದಲಾಗಲಿದೆ. ಚಾಲಕ ಮಾತ್ರವಲ್ಲದೇ, ಆತನ ಪಕ್ಕದ ಆಸನಕ್ಕೂ ಎ.1ರಿಂದ ಏರ್‌ಬ್ಯಾಗ್‌ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next